Tuesday, July 1, 2008

ಕಾದಿಹಳು...

ಕಾದಿಹಳು ಕಾತುರದಿ ಕಾಂತೆ

ಜಗವು ನಿದ್ರಿಸುವ ಸಮಯದಲಿ

ಕಣ್ಣೆವೆಗಳಿಗೆ

ವಿರಹವೇದನೆಯನುಣಿಸಿ,

ನಾಡಿಮಿಡಿತ ಹೃದಯಬಡಿತ ತೀವ್ರಗತಿಯಲ್ಲಿರಲು...

ಆ ಸೊಬಗಿಗೆ ಸೋನೆ ಹಾಡಿದ ತಿಳಿಗಾಳಿಯ

ಪ್ರಶಾಂತತೆಯಲಿ,

ಬೆಳ್ಳನೆಯ ಬೆಳದಿಂಗಳಡಿಯ ಬಿಸಿಯುಸಿರಿನ ಬೆಸುಗೆಯಲಿ,

ಅಂದುಸುರಿದ ಭಾವಪೂರಿತ ಮೆಲುನುಡಿಗಳ ಮೆಲುಕು

ಕಣ್ಮುಂದೆ ದಾಟಿ ಹೋಗುತ್ತಿರಲು,

ತೆರೆದ ಹೃದಯ ಪುಳಕಗೊಳ್ಳುತ್ತಿರಲು...

ಬಾನಂಗಳದಿ ಚಂದ್ರ-ರೋಹಿಣಿಯರ ಸರಸ

ಕಿಟಕಿ ಪರದೆಗಳ ಅಂಚಿನಿಂದ ಅಣಕಿಸುತಲಿದೆ,

ಉರಿವ ಗಾಯದ ಮೇಲೆ ಉಪ್ಪು ಸುರಿದಂತೆ!!

-ಶ್ರೀದೇವಿ ಕಳಸದ

5 comments:

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ತುಂಬಾ ಸುಂದರ ಕವನ..ಲಾಲಿತ್ಯಪೂರ್ಣವಾಗಿದೆ.

shashi said...

ಶ್ರೀದೇವಿ,

'ಬೆಳ್ಳನೆಯ ಬೆಳದಿಂಗಳಡಿಯ ಬಿಸಿಯುಸಿರಿನ ಬೆಸುಗೆಯಲಿ'
ಇಷ್ಟವಾಯಿತು. ಹಾಗೇ ಇಡೀ ಕವಿತೆಯೂ.. ಮತ್ತೆ ಹನಿಗವಿತೆಗಳು ಕೂಡ... ಚೆಂದ ಇವೆ....

ಒಳ್ಳೇ ಓದಿಗಾಗಿ ಥ್ಯಾಂಕ್ಸ್ ಕಣ್ರಿ...

ಶ್ರೀದೇವಿ ಕಳಸದ said...

ತೇಜಸ್ವಿನಿ, ಶಶಿ
ಥ್ಯಾಂಕ್ಸ್‌.... ಇತ್ತೀಚೆಗೆ ನಿಮ್ಮಿಬ್ಬರ ಬ್ಲಾಗ್‌ಗಳನ್ನ ನೋಡ್ತಾ ಇರ್‍ತೀನಿ . ಆಗೆಲ್ಲಾ ಖುಷಿ ಆಗ್ತಿರತ್ತೆ...

srinivas said...
This comment has been removed by the author.
tiruka said...
This comment has been removed by the author.