Sunday, August 3, 2008

ಮನಸಿಗೂ ಅಂಗಿ...?



ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೊತ್ತೊತ್ತಿಗೊಂದು ಅಂಗಿ
ಅವರಂಗಿ ಇವರಿಗೆ
ಇವರಂಗಿ ಅವರಿಗೆ
ತೊಡಿಸುತ್ತ ತೊಡುತ್ತ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಉಸಿರ ಪರಿಮಳವ ಕಟ್ಟಿಟ್ಟ ಅಂಗಿ
ಒತ್ತಾದ ಕಣ್ಣೀರ ಮುತ್ತಾಗಿಸಿದ ಅಂಗಿ
ನೀರ್‍ಮುತ್ತು ಸುರಿದು
ಕರಗಿದರೂ ಕಲ್ಲು
ಮೈಗಂಟಲೇಬೇಕು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

12 comments:

jithendra said...

ಮನಸ್ಸಿಗೆ ಅಂಗಿಯ ಹಂಗ್ಯಾಕೆ? ಅದು ಯಾವತ್ತು ಬೆತ್ತಲಾಗಿದ್ದಷ್ಟು ಚೆನ್ನ.

ಅಂತೆಯೇ, ಚೆನ್ನಾಗಿದೆ ಹೊಸತೊಂದು ಆಲಾಪ.
-ಜಿತೇಂದ್ರ

ಶ್ರೀದೇವಿ ಕಳಸದ said...
This comment has been removed by the author.
ಜಿತೇಂದ್ರ ಕುಂದೇಶ್ವರ said...

nimma hesaru bahala kellide yeega suvarna seridra
nannu raviraj valalmabe roem mate

ಶ್ರೀದೇವಿ ಕಳಸದ said...

:)ಹೌದು.

ಸಿಮ್ಮಾ said...

ಹೌದಲ್ವಾ..!!!
ಮೈಗಷ್ಟೇ ಅಲ್ಲ ಮನಸಿಗೂ ಅಂಗಿ ತೊಟ್ಟು ಅಡ್ಡಾಡುವುದನ್ನ ಕಲಿತು ಬಿಡುತ್ತೇವೆ. ಬೇರೆಯವರ ೆದುರಿರಲಿ, ನಮ್ಮೆದುರೇ ನಾವು ಬೆತ್ತಲಾಗುವುದನ್ನ ಮರೆತು ನಿಂತಿದ್ದೇವೆ!!

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ತುಂಬಾ ಇಷ್ಟವಾಯಿತು ಈ ಕವನ. ಬರಿಯ ಅಂಗಿಯಲ್ಲ.. ಗೋಸುಂಬೆ ಬಣ್ಣವನ್ನೇ ಹೊದ್ದು ಮೆತ್ತು.. ಅಳಿಸಲಾಗದೇ ಅಳಿಯುತ್ತಿದೆ ಮನುಜನ ಮನಸ್ಸು!!

ಶ್ರೀದೇವಿ ಕಳಸದ said...

ಸಿಮ್ಮಾ,

ವಾಸ್ತವ ಅಲ್ವಾ? ಅನ್ನಿಸ್ತು ಬರೆದೆ.ಥ್ಯಾಂಕ್ಸ್ ಫಾರ್‍ ಕಮೆಂಟ್

***

ತೇಜಸ್ವಿನಿ,

ಏನು ಮಡೋದು? ಇದು ಜೀವನ... :)

ಜಿತೇಂದ್ರ,

ನನ್ನದೂ ಅದೇ ಆಶಯವೇ. ಆದರೆ ಹಾಗಿಲ್ಲವಲ್ಲ. ಅದಕ್ಕೆ ಈ ಕವನ ಹುಟ್ಟಿದ್ದು.

ಕುಂದೇಶ್ವರ,
Thank u :)

ಚಾಮರಾಜ ಸವಡಿ said...

ಬರೆಯುವವನು ಒಂದರ್ಥದಲ್ಲಿ ನಿರ್ಮೋಹಿಯೇ. ಬರೆಯುತ್ತ ಬರೆಯುತ್ತ ಅವನು ಅನಾವರಣಗೊಳ್ಳುತ್ತ ಹೋಗುತ್ತಾನೆ. ಹೋಗಲೇಬೇಕು. ಅದು ಮಾತ್ರ ನಿಜವಾದ ಅಭಿವ್ಯಕ್ತಿ.

ಹಾಗಾಗದಿದ್ದರೆ, ರೆಡಿಮೇಡ್‌ ಭಾವನೆಗಳು ಹುಟ್ಟಿಕೊಂಡು, ಸಾಹಿತ್ಯವೊಂದೇ ಅಲ್ಲ, ಪ್ರತಿಯೊಂದು ಕ್ರಿಯಾಶೀಲ ಪ್ರಕಾರಗಳೂ ಹಾಳಾಗುತ್ತವೆ. ನಮ್ಮ ಅನೇಕ ಲೇಖಕರು ಬೆಳೆಯದೇ ಬರೆಯುತ್ತಿರುವುದು ಹಾಗೆ.

ಅವರೂ ಒಂದಿಷ್ಟು ಬೆತ್ತಲಾಗಬೇಕು. ಇಲ್ಲದಿದ್ದರೆ, ತಮ್ಮ ಸಿದ್ಧ ಮಾದರಿಗಳನ್ನು ಹೊರತರುವ ಮೂಲಕ ಅವರೇ ಬೆತ್ತಲೆಯಾಗುತ್ತ ಹೋಗುತ್ತಾರೆ.

ಆದರೆ, ಇನ್ನೊಂದು ದಿಕ್ಕಿನಲ್ಲಿ.

ಚೆನ್ನಾಗಿದೆ ಕವನ.

- ಚಾಮರಾಜ ಸವಡಿ

ಶ್ರೀದೇವಿ ಕಳಸದ said...

ಚಾಮರಾಜ್ ಸರ್‍,
ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಒಂದು ಸಹಿ ಇದೆ :)

ಪೂರ್ಣ ವಿ-ರಾಮ said...

nimma baraha sadha "angi'krutha !

ಅರುಣ್ ಮಣಿಪಾಲ್ said...

ನಿಮ್ಮಷ್ಟು ಪ್ರತಿಭಾವಂತರನ್ನು ಇಟ್ಟುಕೊಂಡು ಆ ಸುವರ್ಣ ಚಾನೆಲ್ ಒಮ್ಮೊಮ್ಮೆ ಪ್ರಸಾರ ಮಾಡುವ ಕಾರ್ಯಕ್ರಮಗಳು ನಿಜವಾಗಿಯು ಬೇಸರ ತರಿಸುತ್ತದೆ..;)))..anyway..ನಿಮ್ಮ ಬ್ಲಾಗು ತುಂಬಾ ಖುಶಿ ಕೊಟ್ಟಿತು..;()

shreedevi kalasad said...

ಅರುಣ್‌, ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸಬೇಕು ಅನ್ಸತ್ತೆ. ಅನ್ಸತ್ತೆ. ಆದ್ರೆ ........
ಎನಿ ವೆ ಥ್ಯಾಂಕ್‌ಯು.