Saturday, August 30, 2008

ಕರ್ಮ-ಉಪಾಕರ್ಮ

ಮೊನ್ನೆ ಹುಣ್ಣಿಮೆಯಂದು

ಅಪಾದಮಸ್ತಕ

ದಳದಳನೆ ಇಳಿವ ನೀರ ಹನಿ

ಅರೆನಿಮೀಲಿತ ನಯನ

ವೇದ-ನಾದ-ನಿನಾದ

ಮಂಡಿ ಏರಿದ ಮಡಿ

ತೊಪ್ಪನೆ ತೊಯ್ದುಪ್ಪಿದ

ರೋಮ ರೋಮರಾಶಿ

ವ್ಯೋಮ ತನಕ ಹೋಮ

ಕುಳಿತವರ, ನಿಂತವರ

ಕಾಣದ ಹಲವರ

ಹರಕೆ-ಹಾರೈಕೆ-ಆಶೀರ್ವಾದ.

ಅಭ್ಯಂಜನ, ಉತ್ಸರ್ಜನ, ಉಪಾಕರ್ಮ


ಹುಣ್ಣಿಮೆಯ ಮರುದಿನ

ಮುಖಮಾರ್ಜನ ಶಾಸ್ತ್ರ

ಬ್ರಹ್ಮಾಂಡ ದರ್ಶನ

ತ್ರಿಕಾಲವಂದನೆ

ಗಾಯತ್ರಿ ಮಂತ್ರ

ಕಣ್ಣ ಕಿಂಡಿಯಿಂದಲೇ.

ನಿನ್ನೆಯ ಆರೆಳೆ

ಹನ್ನೆರಡು ತಿಂಗಳೂ

ಉರುಳು ಗೂಟದ ಗಂಟಲಿಗೇ.

ಹರಸಿದವರಿಗಿನ್ನು

ವರ್ಷವಿಡೀ ವಿಶ್ರಾಂತಿ.

ಸಂವತ್ಸರ ಕೃತ ದೋಷ ಪರಿಹಾರಾರ್ಥ

7 comments:

Harish kera said...

HUM !
-harish kera

ಅರುಣ್ ಮಣಿಪಾಲ್ said...

;)...

Raghu said...

adakke EVERY DAY IS NOT SUNDAY anta helodu. Kavanadallli kela padagalu samanaya (nannatava)rige aratha kasta, adakke neenu kelage padakke arthavanna kotre olledu anta nanna anisike. idarinda ondu bage paathavannu heli kotthage aagutte. good 1 - Raghu Telagadi

Parisarapremi said...

ಅರ್ಥ ಮಾಡಿಕೊಳ್ಳುವ ಸಲುವಾಗಿ ಐದು ಸಲ ಓದಿದೆ. ಕ್ಲಿಷ್ಟವಾಗಿದೆ. ನನ್ನ ಅನುಭವಕ್ಕೆ, ನನ್ನ ಜ್ಞಾನಕ್ಕೆ ಎತ್ತರದ ಮಟ್ಟದಲ್ಲಿದೆ. ಹಾಗಾಗಿ ನನ್ನ ಮಟ್ಟದಲ್ಲಷ್ಟೇ ಅರ್ಥವಾಯಿತು. :-)

sunaath said...

"ಹನ್ನೆರಡು ತಿಂಗಳೂ
ಉರುಳು ಗೂಟದ ಗಂಟಲಿಗೇ.
ಹರಸಿದವರಿಗಿನ್ನು
ವರ್ಷವಿಡೀ ವಿಶ್ರಾಂತಿ."
--ವಾಹ್,ಕ್ಯಾ ಬಾತ್ ಹೈ!

Chamaraj Savadi said...

ವರ್ಷದ ಪ್ರಾರಬ್ಧವೋ ಅಥವಾ ಸಂಪ್ರದಾಯವೋ. ಒಟ್ಟಿನಲ್ಲಿ ಕವಿತೆಯಾಗಿದೆ. ವಿಮರ್ಶೆಯೋ, ವಾಸ್ತವವೋ. ಒಟ್ಟಿನಲ್ಲಿ ಹಾಡಾಗಿದೆ.

ಇದನ್ನೇ ಗದ್ಯದಲ್ಲಿಯೂ ಬರೆಯಿರಿ. ಚೆನ್ನಾಗಿರುತ್ತದೆ.

- ಚಾಮರಾಜ ಸವಡಿ

shreedevi kalasad said...

@ ಹರೀಶ್‌,
HUM ಅಂದ್ರೆ? hmu ನಾ...

@ ರಾಘು,
ನೀನ್ ವಾಪಸ್ ಬಾ ಯುಎಸ್‌ ನಿಂದ ಹೇಳ್ಕೊಡ್ತೀನಿ.

@ಪರಿಸರಪ್ರೇಮಿ, ಅರುಣ್‌ ಮಣಿಪಾಲ್‌ ಥ್ಯಾಂಕ್ಸ್‌

@ಸುನಾಥ್ ಅಂಕಲ್‌, ಚಾಮರಾಜ್ ಸರ್‍ ನಿಮಗೂ ಧನ್ಯವಾದ