Friday, October 31, 2008

ತೊಟ್ಟ ಹಂಬಲ



ನರಬಿಗಿದು, ಹುರಿಗಟ್ಟಿ

ಬಾಗಿಸಿ ಹಿಮ್ಮುಖ ಬೆನ್ನ,

ಎದೆಯೊಡ್ಡಿ ಎಳೆಬಿಸಿಲಿಗೆ

ಬಿರುಬಿಸಿಲ ದಿಟ್ಟಿಸುವ ದಿಟ್ಟ.

ಆಳದೊಳಗೆಲ್ಲೋ

ತುಸು ಬಿರುಸು,

ಬೇಸರವಿಲ್ಲ.

ತುದಿಗೆ

ತೆಳು-ಬಳಕು-ಮೆದು

ಆಹ್ಲಾದ.

ನೀ ಬಿರಿದ ರೀತಿಗೆ

ಮೊಗೆದ ಪ್ರೀತಿ ಕಾವಿಗೆ

ಕಣ್ಣಒದ್ದೆ.

ನೋವಲ್ಲ ಅದು,

ಒಲವ ಹನಿ.

ನಿನ್ನಡಿಗೇ ನಾನೆಂದೂ

ಹಂಬಲವಿನ್ನೇತರದು?

ಛೆ! ಮೆಚ್ಚಿಸುವ ಮಾತೆ...

ನನ್ನೊಡಲಿನಿಂದಲೇ ಕುಡಿಯೊಡೆದ

ನೀ

ಬೆನ್ನ ಕೊಟ್ಟಷ್ಟೂ

ಅದಅಂಟಿಕೊಂಡೇ ನನ್ನೆದೆ.

ಬಾಗುತ್ತೇನೆ ತಳ್ಳಿದಷ್ಟೂ.

ಒಂದೊಮ್ಮೆ ಹೇಳಹೆಸರಿಲ್ಲದೆಯೂ

ಮುರುಟಿಹೋಗುವೆನೇನೋ

ಅರಳಬೇಕೆಂದು ನೀ...

6 comments:

shivu K said...

ಕಣ್ಣ ಒದ್ದೆ.
ನೋವಲ್ಲ ಅದು
ಒಲವ ಹನಿ.
ಅಲ್ಲ ಅದು ನಿಜಕ್ಕೂ "ಅನಂದ ಬಾಷ್ಪ" !

ಬರೆಯುತ್ತಿರಿ!

Vikas said...

novalla adu, olava hani...
ee salu thuMbaaaa ista aythu sridevi!
keep writing
-vikas negiloni

Sughosh said...

ಪ್ರತಿಯೊಂದು ಸಾಲೂ ತುಂಬಾ ಚೆನ್ನಾಗಿದೆ.
- ಸುಘೋಷ್ ನಿಗಳೆ

ರಾಘು ತೆಳಗಡಿ said...

ಅರಳಿದ ಬಳ್ಳಿ ಬಳುಕಿನ ಕವನ ಚೆಂದ ಇದೆ ಶ್ರೀ, ಬರಿತಿರು.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

"ನೀ ಬಿರಿದ ರೀತಿಗೆ

ಮೊಗೆದ ಪ್ರೀತಿ ಕಾವಿಗೆ

ಕಣ್ಣಒದ್ದೆ"-ಇಷ್ಟವಾಯಿತು. ಚೆನ್ನಾಗಿ ಬರೀತೀರಿ ನೀವು.
-ಚಿತ್ರಾ

siddu devaramani said...

khushi kottitu...bariri