Thursday, December 11, 2008

ಉಳಿದುಕೊಳ್ಳಲಿ ಒಂದಿಷ್ಟು

















ಅಗೆದಷ್ಟು
ಇರುಳು,
ಮೊಗೆದಷ್ಟು
ಬೆಳಕು.
ಉಳಿದುಕೊಳ್ಳಲಿ

ಒಂದಿಷ್ಟು...

ಇಲ್ಲ ನಿಯಮ,
ಅಗೆದು ಮೊಗೆದು
ಹರವಿಕೊಳ್ಳಲೇಬೇಕೆಂದು
ಎಲ್ಲ...


ಇರುಳ ನರಳಿಕೆಗೆ
ತುಟಿಹಿಡಿದ ಬೆರಳು,
ಅದ ಬೆರಗು
ನೆರಳಿಗೆ.
ನಗು,
ಬೆಳಕಿಗೆ.

ಎದೆಯೊಳಣ
ಕಾಂತಿಯೋ,
ಮನದ ಭ್ರಾಂತಿಯೋ...
ಅಗೆದಷ್ಟು ಆಳ
ಮೊಗೆದಷ್ಟು ನಿರಾಳ
ಆದರೂ..

ಉಳಿದುಕೊಳ್ಳಲಿ

ಒಂದಿಷ್ಟು.

11 comments:

ಕುಮಾರ ರೈತ said...

'ಉಳಿದುಕೊಳ್ಳಲಿ ಒಂದಿಷ್ಟು'ಕವನ ಚೆಂದ'

ಇರುಳ ನರಳಿಕೆಗೆ
ತುಟಿಹಿಡಿದ ಬೆರಳು,
ಅದ ಬೆರಗು
ನೆರಳಿಗೆ.
ನಗು,
ಬೆಳಕಿಗೆ
ಈ ಸಾಲುಗಳು ತಂಬ ಇಷ್ಟವಾಯಿತು

shivu K said...

ಒಂದೊಂದೆ ಪದದಲ್ಲಿ ತೂಕವುಳ್ಳ ಅರ್ಥ ! ಇದು ನನಗನ್ನಿಸಿದ್ದು. ನೀವೇನಂತೀರಿ !?

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ಕವನದೊಳಗಿನ ಭಾವಗಳು ಮನದೊಳಗೆ ಉಳಿದುಕೊಂಡಿವೆ :)

Sree said...

ನಂಗೆ ನಿಮ್ಮಷ್ಟು ಚೆನ್ನಾಗಿ ಅನ್ನಿಸಿದ್ದನ್ನ ಬರಿಯೋಕೆ ಬರ್ತಿದ್ರೆ ಈ ಕವನ ನಾನೇ ಬರೆದುಬ್ಬಿಡ್ತಿದ್ದೆನೇನೋ!:)

neelihoovu said...

ಕವನ ಚೆನ್ನಾಗಿದೆ.. ಓದಿದ ನಂತರ ತೆಳುವಾದ ಕಾಡುವಿಕೆ ಉಳಿಯುತ್ತದೆ ಮನದಲ್ಲಿ.

ಆದರೆ ಒಂದು ಅನುಮಾನ.

ಯಾಕೆ ಒಂದಿಷ್ಟು ಉಳಿದುಕೊಳ್ಳಬೇಕೆಂದು ಅರ್ಥವಾಗಲಿಲ್ಲ.

ಕ್ಷಮಿಸಿ ಮೇಡಂ, ಇದು ಕವನದ ಲೋಪವಲ್ಲ..ಕವನದ ಮೂಲದೆಡೆಗಿನ ನನ್ನ ಅಸಂಬದ್ದ ಕುತೂಹಲ, ಅನುಮಾನವಷ್ಟೇ.

sunaath said...

ಶಹಭಾಸ್, ಶ್ರೀದೇವಿ.
Beautiful poem.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಕವನ ಓದಿದ ಮೇಲೆ ಒಂದಿಷ್ಟು ಉಳಿದುಕೊಂಡಿದ್ದು ಮಾತ್ರವಲ್ಲ..ಮತ್ತೆ ಮತ್ತೆ ಓದೋಣ ಅನಿಸುತ್ತೆ. ನಿಮ್ ಕವನಗಳನ್ನು ಓದುವಾಗ 'ಅಯ್ಯೋ ನಂಗೆ ಕವನ ಬರೆಯಕೆ ಬರಲ್ಲ' ಅಂತ ಬಡ್ಕೋತೀನಿ ಮೇಡಂ. ಶುಭವಾಗಲೀ...
ತುಂಬು ಪ್ರೀತಿಯಿಂದ,
ಚಿತ್ರ

ಸುಪ್ತದೀಪ್ತಿ suptadeepti said...

ಹಿಂದಿನ ತಲೆಮಾರಿನ ಹೆಂಗಸರು (ಈಗಲೂ ಹಾಗೆ ಮಾಡುವವರು ಇದ್ದಾರೇನೋ, ಗೊತ್ತಿಲ್ಲ) ನಿತ್ಯವೂ ಡಬ್ಬದಿಂದ ಅಕ್ಕಿ, ಬೇಳೆ ಮುಂತಾದವನ್ನು ತೆಗೆದಾಗ, ಒಂದಿಷ್ಟನ್ನು ಪುನಃ ಡಬ್ಬಕ್ಕೆ ಹಿಂದೆ ಹಾಕುವುದನ್ನು ಕಂಡಿದ್ದೆ. ಯಾಕೆಂದು ನನ್ನಜ್ಜಿಯನ್ನು ಕೇಳಿದ್ದಾಗ, "ದಿನವೂ ಒಂದು ಹಿಡಿ ಅಕ್ಕಿ ಹಿಂದೆ ಹಾಕ್ತಾ ಇದ್ರೆ, ತಿಂಗಳಲ್ಲಿ ಎರಡು ದಿನದ ಊಟದ ಅಕ್ಕಿಯೇ ಮಿಕ್ಕುತ್ತದೆ. ದಿನವೂ ಅದೇ ಒಂದು ಹಿಡಿಯನ್ನೂ ಸೇರಿಸಿಯೇ ಅನ್ನ ಮಾಡಿದ್ರೆ ಖರ್ಚಾಗುತ್ತೆ, ಅಥವಾ ಉಳಿದರೆ ನಾಯಿಗೋ ಬೆಕ್ಕಿಗೋ ದನಕ್ಕೋ ಹೋಗುತ್ತೆ. ಉಳಿತಾಯದ ಸಣ್ಣ ರೀತಿ ಇದು" ಅಂದಿದ್ದರು. ನಿನ್ನ ಕವನ ಓದಿದಾಗ ಅಜ್ಜಿಯ ಮಾತು ನೆನಪಾಯ್ತು.

ಹೌದು, ಎಲ್ಲವೂ ನಾಳೆಗೂ ಉಳಿದುಕೊಳ್ಳಲಿ, ಒಂದಿಷ್ಟು.

Jagali bhaagavata said...

ಕೆಂಡಸಂಪಿಗೆಯ ಲಿಂಕ್ ಹಾಕಲಿಕ್ಕೆ ಮರೆತುಬಿಟ್ರಾ? :-P

raviraj said...

blog chennagide, nivu hindustani gayaki agiruvudarinda sangeetada itihasada baggeyoo bareyiri...aksharagala himmeladondige bhavanegala sangeeta sada sumadhuravagirali

Sushma Sindhu said...

ಅರ್ಥಪೂರ್ಣವಾಗಿದೆ ಶ್ರಿದೇವಿಯವರೇ..
ಆದಾಗ ನನ್ನ ಕನಸುಗಳ ಬ್ಲಾಗುಗಳಿಗೊಮ್ಮೆ ಭೇಟಿ ಕೊಡಿ :)