Tuesday, December 16, 2008

ಎಲ್ಲ ಶೂನ್ಯ...




ಕ್ಷಮಿಸಿಬಿಡು.

ಅವುಗಳಿಗೆ-

ಸುಖಿಸಬೇಕೆನ್ನಿಸಿತೇನೊ...


ನಿಲ್ಲದ ಕಂಪನ

ಆರದ ಪಸೆ

ದಟ್ಟೈಸುವ ರಂಗು.

ಜಪಿಸಿದ ತುಟಿಗಳೇ...

ಹಂಬಲಿಸಿದವು,

ಒಲವಧ್ಯಾನಕ್ಕೆ.


ಸೇವಿಸಿದರೆ

ಪವಿತ್ರ ತೀರ್ಥ.

ಹೀರಿದರೆ ಮಧುವ...

ಸ್ವಾರ್ಥ! (?)


ತಪ್ಪಾದರೆ ಮನ್ನಿಸೆಂದು

ತಟ್ಟಿಕೊಳ್ಳುತ್ತಿದ್ದ ಕೆನ್ನೆಗುಂಟ

ಅಭಿಷೇಕ-

ಕಣ್ಣಹನಿಗಳದು,

ಪಾಪನಿವಾರಣವಲ್ಲ

ಸಫಲತೆಯ ಸೆಲೆ.


ತೆರೆದರ್ಧ ಕಣ್ಣು

ಚಿತ್ತ ಪಾದಗಳತ್ತ

ಶರಣೆಂದ ಕ್ಷಣವೇ..

ಪರಮಪೂಜೆಯಾದರೂ,

ಭಾವಾರ್ಚನೆ...


ನನ್ನೊಳಗೆ ನೀ

ನಿನ್ನೊಳಗೆ ನಾ

ಎಲ್ಲ ಶೂನ್ಯ.



ನಿತ್ಯ

ಸತ್ಯ

ನಿರಂತರ


ಎದೆಯೊಳಣ ನಾದ ಮಾತ್ರ

16 comments:

ತೇಜಸ್ವಿನಿ ಹೆಗಡೆ- said...

good one :)

ಸುಶ್ರುತ ದೊಡ್ಡೇರಿ said...

good one :)

ಸುಪ್ತದೀಪ್ತಿ suptadeepti said...

ಶೂನ್ಯದಲ್ಲಿ ಎದೆಯೊಳಗಣ ನಿತ್ಯ ನಿರಂತರದ ಸತ್ಯ ನಾದದ ಎಳೆ ಹಿಡಿದ ಮನವೇ... ನಿನಗೆ ಶರಣು.

ಬಾನಾಡಿ said...

ಅಪರೂಪಕ್ಕೆ ಬ್ಲಾ ಗ್‍ಗಳಲ್ಲಿ ಕಂಡು ಬರುವ ಒಂದು ಉತ್ತಮ ಕವನ.
ಪ್ರತಿಭಾವಂತ established ಕವಯಿತ್ರಿಯಾಗಿರುವುದರಿಂದ ತಮ್ಮ ಕವನಗಳನ್ನು ಓದುವುದಕ್ಕಾಗಿ ಕಾಯುವೆನು.
ಒಲವಿನಿಂದ
ಬಾನಾಡಿ

shivu K said...

ತುಂಬಾ ಒಳ್ಳೆಯ ಭಾವಾರ್ಥವಿರುವ ಕವನ !

Harish - ಹರೀಶ said...

ಕವನದ ಬಗ್ಗೆ ಎಲ್ಲರೂ ಹೇಳಿಯಾಗಿದೆ. ನಾನು ಮತ್ತೆ ಹೇಳುವುದಿಲ್ಲ.. ಈ ಫೋಟೋದ ಬಗ್ಗೆ ಕೇಳುತ್ತೇನೆ.. ಎಲ್ಲಿ ಸಿಗ್ತು? ಒಂಥರಾ ಚೆನ್ನಾಗಿದೆ

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ನಿಮ್ಮ ಕವನಗಳನ್ನು ಆಸ್ವಾದಿಸೋಳು ನಾನು..ಪ್ರೀತಿಯಿಂದ ಓದೋಳು ನಾನು. ಹೇಗೆ? ಏನು? ಎತ್ತ ಅಂತ ಹೇಳಕ್ಕೆ ಬರಲ್ಲ ಆಯಿತಾ?
-ತುಂಬುಪ್ರೀತಿ,
ಚಿತ್ರಾ

chanakya said...

ದೇವಿ...ಶ್ರೀದೇವಿ...ಕವನ ಚನ್ನಾಗಿದೆ. ಬರೀತಿರು ತಪ್ಪಿದ್ರೆ ತಿದ್ದಿಕೊಳ್ಳಿಕ್ಕೆ ಹೇಳ್ತೀನಿ..ಸರೀನಾ...ನಿರೀಕ್ಶೆಯಲ್ಲಿ..
ಗೆಳೆಯಾ...?

Ramesh BV (ಉನ್ಮುಖಿ) said...

ತುಂಬಾ ಚೆನ್ನಾಗಿದೆ.. :)

siddu devaramani said...

ಕಡಿಮೆ
ಪದ
ಬಳಸಿ
ಪದ್ಯ
ಮಾಡಿದ
ನೀವು
ನನ್ನಲ್ಲಿ
ಅಚ್ಚರಿ
ಉ೦ಟು
ಮೂಡಿಸಿದ್ದೀರಿ..
ಶ್ರೀದೇವಿ,
ನೀವು
ಜಾದು ಮಾಡುತ್ತಿಲ್ಲ ತಾನೆ?.

ಸಂತೋಷ್ ಚಿದಂಬರ್ said...

chennagide... :)

ಕುಮಾರ ರೈತ said...

ಸೇವಿಸಿದರೆ

ಪವಿತ್ರ ತೀರ್ಥ.

ಹೀರಿದರೆ ಮಧುವ...

ಸ್ವಾರ್ಥ! (?)

ಭಾವಗಳನ್ನು ಹಿಡಿದಿಟ್ಟ ಪರಿ
ಸೊಗಸು.ಉತ್ತಮ ರಚನೆ ಓದಿದ
ಅನುಭವ-ಅನುಭಾವ

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಹೊಸ ವರುಷದ ಶುಭಾಶಯಗಳು ಅಮ್ಮಣ್ಣಿ..
-ತುಂಬುಪ್ರೀತಿ,
ಚಿತ್ರಾ

jayalaxmi said...

ತುಂಬ ಚಂದದ,ಗಟ್ಟಿ ಕವನ.

vijaykannantha said...

thumbaa oLLe arthaviruva kavite... ishtavaaytu

Chandina | ಚಂದಿನ said...

ನಿಮ್ಮ ಬಹುತೇಕ ಕವನಗಳಲ್ಲಿ ಗಟ್ಟಿತನ,
ಭಾವತೀವ್ರತೆಯಿರುವುದರಿಂದ
ಬಹಳ ಆಪ್ತವೆನಿಸುತ್ತವೆ.

-ಚಂದಿನ