Thursday, August 26, 2010

ಯಾರದು ನಿನ್ನ ಫೋಟೋ ತೆಗೆದವರು?ಅವತ್ತ್ಲೆಲ ಅಮ್ಮ ನನ್ನ ಪುಟ್ಟ ಕೈಗಳ್ಲಲಿ ಗಂಧದಕಡ್ಡಿ ಕೊಟ್ಟು ಬೆಳಗು ಎಂದಾಗಲ್ಲೆಲ ಮೂಡುತ್ತಿದ್ದ ಪ್ರಶ್ನೆ ಒಂದೇ. ಯಾವಾಗಲೂ ನಗುತ್ತಲೇ, ಎರಡು ಎಕ್ಸ್ಟ್ರಾ ಕೈಗಳನ್ನು ಅಂಟಿಸಿಕೊಂಡು, ಕಮಲದ ಮೇಲೆ ನಿಂತಿರುವ ಆ ನಿನ್ನ ಫೋಟೋ ತೆಗೆದವರು ಯಾರು? ಆ ಫೋಟೋಗ್ರಾಫರ್ ಎಲರ ಮನೆಗೂ ಹೋಗಿ ಫೋಟೋ ಹಂಚಿಬಂದ್ದಿದಾನೋ ಹೇಗೆ? ಎಲರ ಮನೆಯ್ಲಲೂ ಸೇಮ್‌ಫೇಸ್‌ ಲಕ್ಷ್ಮೀ...

ಸ್ವಲ್ಪ ವರ್ಷಗಳು ಕಳೆದ ಮೇಲೆ ಗೊತ್ತಾಯ್ತು, ಅದು ಫೋಟೊ ಅಲ ಬಿಡಿಸಿದ ಚಿತ್ರ ಅಂತ ಅಪ್ಪಾಜಿ ಹೇಳಿದ್ರು... ಹಾಗಾದರೆ ನಿನ್ನ ಚಿತ್ರ ಬಿಡಿಸಿದವನು ಎಲ್ದಿದಾನೆ? ಯಾವಾಗ ಬಿಡಿಸಿದ? ಅವನು ನಿನ್ನನ್ನು ಎಲ್ಲಿ ಭೇಟಿ ಮಾಡಿದ್ದ? ಎಷ್ಟು ದಿನ ತೆಗೆದುಕೊಂಡ ಚಿತ್ರ ಬಿಡಿಸೋದಕ್ಕೆ? ಅವನು ಚಿತ್ರ ಬಿಡಿಸೋವರೆಗೂ ನಿನ್ನ ಪಕ್ಕದ್ಲಲಿರೋ ಆನೆಗಳು ಸೊಂಡಿಲೆತ್ತಿಕೊಂಡು ಅಷ್ಟೂ ಹೊತ್ತು ಹಾಗೇ ನಿಂತಿದ್ದವಾ? ಪಾಪ ಕಾಲು, ಸೊಂಡಿಲು ನೋವು ಬಂದಿರಬೇಕಲ್ವಾ? ಬೈಯ್ಕೊಬೇಡ ಹೀಗೆ ಕೇಳ್ತಿದಿನಿ ಅಂತಾ.. ಆ ಕಮಲದ ಮೇಲೆ ಅದ್ಹೇಗೆ ನಿಂತುಕೊಂಡ್ದಿದಿ ಮಾರಾಯ್ತಿ? ಬ್ಯಾಲೆನ್ಸ್ ಹೇಗೆ ಮಾಡ್ದೆ?

ಹೀಗೆ ಯೋಚನೆ ಮಾಡ್ತಾ, ಮಾಡ್ತಾ.. ಎಷ್ಟೋ ಸಲ ನಿನಗೆ ನೈವೇದ್ಯ ಮಾಡುವವರೆಗೆ ಕಾಯದೆ ನಿನ್ನ ಫೋಟೋದ ಮುಂದಿಟ್ಟ ಸಕ್ಕರೆಯೊಳಗೆ ಅರ್ಧಂಬರ್ಧ ಕವುಚು ಹಾಕಿಕೊಂಡ್ದಿದ ಪುಟಾಣಿಗಳನ್ನು ಕದ್ದು ಕದ್ದು ತಿಂದುಬಿಟ್ಟಿದ್ದೇನೆ. ನಗುತ್ತ ಯಾವಾಗಲೂ ನೇರವಾಗಿಯೇ ನೋಡುತ್ತಿದ್ದ ನಿನಗೆ ಅದು ಕಂಡಿಲ್ಲ ಅಂದ್ಕೊತೀನಿ..

ಅಂದಹಾಗೆ ಸ್ಟೆಪ್ ಬೈ ಸ್ಟೆಪ್ ನೀನು ಹಾಕಿಕೊಂಡ ಆ ವೆರೈಟಿ ಹಾರಗಳು, ಬಳೆ, ಜುಮುಕಿ, ಕಿರೀಟ ಅದೆಲ್ಲ ಯಾರು ಕೊಡಿಸಿದ್ದು? ಅಪ್ಪಾ ತಾನೆ? ಬಂಗಾರದ್ದೇ ಇರಬೇಕು! ಹಾಗಿದ್ರೆ ನಿಮ್ಮ ಅಪ್ಪಾ ದೊಡ್ಡ ಶ್ರೀಮಂತರೇ ಇದಿರಬೇಕು. ನಿಂಗೆ ನಿಮ್ಮ ಅಮ್ಮನೇ ಎಲ್ಲಾ ರೆಡಿ ಮಾಡ್ದಿದಾ... ಕೆನ್ನೆಗೆ ರೋಸು, ತುಟಿಗೆ ಲಿಪ್‌ಸ್ಟಿಕ್‌, ಕಣ್ಣಿಗೆ ಕಾಡಿಗೆ ಅದೆಲ್ಲ ಎಷ್ಟು ನೀಟಾಗಿ ಹಚ್ಚಿದಾರೆ ನೋಡು... ಇದನ್ನೆಲ್ಲಾ ಹಚ್ಕೊಂಡಿದ್ದಕ್ಕೆ ನಿಮ್ಮ ಅಪ್ಪ ಬೈಯ್ಲಿಲ್ಲಾ ತಾನೆ?

ಉಟ್ಕೊಂಡಿರೋ ಸೀರೆ ನಿಮ್ಮ ಅಮ್ಮಂದೇ ಇರಬೇಕು; ಅವರ ಮದುವೇದು. ಚಿತ್ರ ಬಿಡಿಸೋದು ಮುಗಿದ ಮೇಲೆ ನೀನು ನಮ್ಮೆಲ್ಲರ ಹಾಗೆ ಡ್ರೆಸ್ ಹಾಕ್ಕೊಂಡಿದ್ಯಾ? ಆದ್ರೆ ಎಲಿ ಮತ್ತೆ ಒಂದಿನಾನೂ ಸಿಕ್ಲಿಲ್ಲಾ.. ತರಕಾರಿ ತರೋದಕ್ಕೆ, ನಾಟಕ ನೋಡೋದಕ್ಕೆ, ಕೆರೆ ಕಡೆ ಸುತ್ತಾಡೋದಕ್ಕೆ, ಈಜಾಡೋದಕ್ಕೆ, ದೀಪಾವಳಿಗೆ ಸೆಗಣಿ ಹಿಡಿಯೋದಕ್ಕೆ, ನಾಗರಪಂಚಮಿಗೆ ಅಲ್ಲೀಕೇರಿಗೆಂದು ಕೆರೆ ಕಡೆ ಹೋದಾಗ್ಲೆಲ್ಲ ನೋಡ್ತಿದ್ದೆ, ನೀ ಕಾಣ್ತಿರಲೇ ಇಲ್ಲ. ನೀನೆಲ್ಲೂ ಹೋಗಲ್ವಾ ಹಾಗಾದ್ರೆ? ಯಾಕೆ ನಿಮ್ಮ ಅಪ್ಪ-ಅಮ್ಮ ಹೊರಗಡೆ ಬಿಡೋದೇ ಇಲ್ವಾ?

ಸರಿ ಬಿಡು, ಇಲ್ ಕೇಳು.. ಒಂದಿನಾ ನಮ್ಮನೆಗೂ ಟಿವಿ ಬಂತು. ಅವತ್ತೊಂದಿನ ಫ್ರಾಕ್ ಮೇಲೆ ಟವಲ್ ಸುತ್ಕೊಂಡು ಸೀರೆ ಉಟ್ಟುಕೊಳ್ಳುತ್ತಿದ್ದ ನನ್ನನ್ನ ಅಮ್ಮ ಕೂಗಿದವರೆ, ‘ಬಾರೇ.. ಲಕ್ಷ್ಮೀ ಬಂದಿದಾಳೆ..’ ಅಂದ್ರು. ‘ಹೇ.. ಲಕ್ಷ್ಮೀ..’ ಅಂತ ಓಡಿ ಬಂದ್ರೆ ಅಮ್ಮಾ ತೋರ್ಸಿದ್ದು ಟಿವಿ ಲಕ್ಷ್ಮೀ. ನಿಜಾ ಕಣೇ... ನಿನ್ನ ಹಾಗೆನೇ ಟಿವಿನಲ್ಲಿ ಇದ್ದ ಲಕ್ಷ್ಮೀ ಅಲಂಕಾರ ಮಾಡಿಕೊಂಡಿದ್ರು! ಅಬ್ಬಾ ಇಷ್ಟು ದೊಡ್ಡ ಹಾವಿನ ಮೇಲೆ ಮಲಗಿಕೊಂಡವರೊಬ್ಬರ ಕಾಲನ್ನು ಅವರು ಒತ್ತುತ್ತಿದ್ದರು. ಆಮೇಲೆ ಅಮ್ಮ, ‘ಅದು ವಿಷ್ಣು ದೇವರು.. ಲಕ್ಷ್ಮೀ ವಿಷ್ಣುವಿನ ಪಾದಸೇವೆ ಮಾಡ್ತಿದಾಳೆ.. ಸುಮ್ನೆ ನೋಡು’ ಅಂತ ಗದರಿಸಿದ್ರು. ಏನೋ ಕೇಳಲೆಂದು ಆ.. ಅಂತ ಬಾಯಿ ತೆಗೆದವಳಿಗೆ ಮುಚ್ಚಿಸೇಬಿಟ್ರು..

ಅಷ್ಟೊತ್ತಿಗೆ ಅಪ್ಪನ ಗಾಡಿ ಶಬ್ದ! ಇನ್ನು ಏನಿದ್ರೂ ಆ ‘ಸರಸ್ವತಿ’ನೇ ಗತಿ ಎಂದು ಕೋಣೆಗೆ ಓಡುತ್ತಾ... ಪುಸ್ತಕ ಕೈಯಲ್ಲಿ ಹಿಡಿದುಕೊಳ್ಳುವ ಹೊತ್ತಿಗೆ ಮತ್ತೆ ನಿನ್ನದೇ ಮುಖ ಆ ತೆಳುನೀಲಿ ಗೋಡೆಯ ಮೇಲೆ.. ಎವರ್‌ ಸ್ಮೈಲಿಂಗ್‌ ಫೇಸ್. ನಿನ್ನ ಕಾಲುಗಳಿಗೆ ಅಂಟಿಕೊಂಡೇ ನೇತಾಡುವ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್.... ತಿಂಗಳ ಪುಟ್ಟ ಕ್ಯಾಲೆಂಡರ್. ಪರೀಕ್ಷೆಗೆಂದು ತಾರೀಖುಗಳ ಮೇಲೆ ಅಮ್ಮ ಗುರುತು ಹಾಕಿಟ್ಟ ಕೆಂಪು ಮಾರ್ಕ್ ಕಂಡರೆ ಸಾಕು.. ಕೆಂಪು ಮೆಣಸಿನಕಾಯಿ ನಾಲಿಗೆಗೆ ಚುರುಕು ಮುಟ್ಟಿಸಿದ ಹಾಗೆ!

ಅದಕ್ಕೂ ನೀ ನಗುತ್ತ ನಿಂತುಬಿಡ್ತಿದ್ದೆಯಲ್ಲವೆ? ಛೆ.. ನೀ ಸರಿಯಿಲ್ಲಾ ಹೋಗು.. ಒಮ್ಮೆಯಾದರೂ ಕೇಳಿದ್ಯಾ? ಪರೀಕ್ಷೆ ಟೈಮ್‌ನಲ್ಲಿ ಯಾರಿಗೂ ಕಾಣದ ಹಾಗೆ ಬಂದು ಬರೆದು ಕೊಡಲಾ? ಕೊನೆ ಪಕ್ಷ ಕಿವಿನಲ್ಲಿ ಉತ್ತರಗಳನ್ನ ಹೇಳಿ ಹೋಗಬಹುದಿತ್ತಲ್ಲಾ? ಬೇಡಾ ಬಿಡಮ್ಮಾ.. ಪರ್ವಾಗಿಲ್ಲ... ನಮ್ ‘ಸರಸ್ವತಿ’ ನಮ್ ಜೊತೆಗಿರ್ತಾಳೆ.

ಆಯ್ತು ಲಕ್ಷ್ಮೀ... ಏನೋ ನಿನ್ನ ಬಗ್ಗೆ ಹಳೇದೆಲ್ಲಾ ಹೇಳಬೇಕು ಅನ್ನಿಸ್ತು ಹೇಳ್ಕೊಂಡೆ. ತಪ್ಪಾಗಿದ್ರೆ ಕ್ಷಮಿಸ್ಬಿಡು ತಾಯೇ.. ನಿನಗೆ ಲೇಟ್ ಆಯ್ತೋ ಏನೋ.. ಎಲಾ ನಿನಗೆ ಪೂಜೆ ಮಾಡೋದಕ್ಕೆ ಕಾಯ್ತಿದಾರೆ.. ಒಂದೇ ಒಂದು ಪ್ರಶ್ನೆ.. ಅದೇನೋ ಹೇಳ್ತಾರಲ್ಲಾ.. ನೀನಿದ್ದಲ್ಲಿ ಸರಸ್ವತಿ ಇರಲ್ಲಾ.. ಅವಳ್ದಿದ್ಲಲಿ ನೀನಿರಲ್ಲಾ ಅಂತ.. ಅದು ನಿಜಾನಾ?

-ಶ್ರೀದೇವಿ ಕಳಸದ
-----------------------
’ಪ್ರಜಾವಾಣಿ’ ವಿಶೇಷ ಪುರವಣಿಯಲ್ಲಿ ಪ್ರಕಟ

8 comments:

ಮಧು said...

ಸೋ ನೈಸ್!
ಎಷ್ಟೊಂದು ಮುಗ್ಧ ಭಾವಗಳು!

sunaath said...

ಪುಟ್ಟ ಬಾಲೆಯ ಮನದಲ್ಲಿ ಮೂಡುವ ಭಾವನೆಗಳು ನನ್ನ ಮನಸ್ಸಿಗೆ ಆಹ್ಲಾದವನ್ನು ತಂದವು. ನಿಮಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

:) ಲಕ್ಷ್ಮಿ ದೇವಿ ಖಂಡಿತ ಪ್ರಸನ್ನಳಾಗಿರ್ತಾಳೆ ಶ್ರೀದೇವಮ್ಮನ ಈ ಬರಹ ನೋಡಿ :) ಚೆನ್ನಾಗಿದೆ...

ವನಿತಾ / Vanitha said...

very nice..:-)

adadds_arvind said...

title should be "LUX-MI"

Anonymous said...

lovely! indeed reminds many similar strands of images, thoughts and feelings many may have had in our childhood. Lovely piece.

ಆಲಾಪಿನಿ said...

@ಮಧು ಸುನಾಥ ಅಂಕಲ್‌, ತೇಜಸ್ವಿನಿ, ವನಿತಾ, ಉಷಾ ಧನ್ಯವಾದ:)
@ ವಿಂದ್‌ ಥ್ಯಾಂಕ್ಸ್‌ ಕಣೊ.. ಅಂತೂ ಲಕ್ಷ್ಮೀನೇ ನನ್ನ ಬ್ಲಾಗ್‌ ನೋಡೋ ಹಾಗೇ ಮಾಡಿದ್ಲೋ... ತಮಗೆ? ಹೌದು.. ನೀನ್‌ ಹೇಳಿದ್ದು ಒಳ್ಳೆ ಟೈಟಲ್‌!

Chamaraj Savadi said...

ಸೊಗಸಾದ ಅಭಿವ್ಯಕ್ತಿ. ಒಳ್ಳೇ ಊಹೆ. ವಾಸ್ತವ ಕೂಡ.

ಜೀವಂತ ವ್ಯಕ್ತಿಗಳೇ ದೇವರಾಗಿರುವಾಗ, ದೇವರೇಕೆ ಜೀವಂತ ವ್ಯಕ್ತಿಗಳಾಗಿ ಬರಲ್ಲ ಎಂಬುದು ಹಳೇ ಪ್ರಶ್ನೆ. ಅದು ಹೊಸತು ಕೂಡ.

ಸರಸ್ವತಿ-ಲಕ್ಷ್ಮಿ ಒಟ್ಟಿಗೇ ಬರಲ್ಲ. ಕೆಲವರ ಪಾಲಿಗೆ ಇಬ್ರೂ ಇರಲ್ಲ.

ಬದುಕಿನ ವ್ಯಂಗ್ಯವಲ್ಲವೆ ಇದು?