Friday, April 15, 2011

ಮುಂಬಾಗಿಲಿಗೆ ಅವಳು, ಹಿತ್ತಲ ಕನವರಿಕೆಯಲಿ ಅವನಿನ್ನೂ...


ಗ್ರೌಂಡ್ಫ್ಲೋರ್ನಲ್ಲಿ ಹಾಲು, ತರಕಾರಿಯನ್ನು ಯಾರು ಕೊಂಡು ತರುವುದು ಎನ್ನುವ ಸಮಸ್ಯೆಯಿಂದ ಶುರುವಾಗಿ, ಮಲಗೆದ್ದ ಹಾಸಿಗೆ, ಹೊದಿಕೆ ಯಾರು ಮಡಿಚಿಡುವುದು? ಕಾಫಿ ಮಾಡುವುದು ಯಾರು? ಓದಿದ ಪೇಪರನ್ನು ಒಪ್ಪವಾಗಿ ಇಡುವವರು ಯಾರು? ಎಂಬ ಪ್ರಶ್ನೆಗಳು ಒಬ್ಬರಿಗೊಬ್ಬರ ಹುಬ್ಬಿನೊಳಗೇ ಹೊದ್ದುಕೊಂಡು, ಅಹಸನೆಯಿಂದ ಭುಗಿಲೇಳತೊಡಗಿವೆ.
-ಬಿ.ಸುರೇಶ, ಕಿರುತೆರೆ, ಸಿನಿಮಾ ನಿರ್ದೇಶಕ.
----------------------------------


ಅಮ್ಮ, ಅಜ್ಜಿ, ಅಕ್ಕ, ತಂಗಿ, ಹೆಂಡತಿ. ಈಗ ಮಗಳು, ಮಗಳ್ಲಲಿಯೂ ಹೆಣ್ಣನ್ನು ಕಾಣ್ತಿದ್ದೀವಿ., ಸುಖಾನೋ, ಇಂಚಿಂಚೂ ಹಂಚಿಕೊಳ್ಳೋ ಹೆಣ್ಣುಮಕ್ಕಳ ಮನೋಭಾವ ಮತ್ತು ಆ ನಿರಂತರ ಪ್ರಕ್ರಿಯೆ ನನಗೆ ತುಂಬಾ ಇಷ್ಟವಾಗತ್ತೆ. ಮನೆ ಒಳಹೊರಗೆ, ಆಫೀಸು-ಕೆಲಸ, ಕಾಂಪೌಂಡಿನೀಚೆ, ಆಚೆ ಮಾತನಾಡಿದ್ದನ್ನು, ಸಣ್ಣ ಕೊಬ್ಬರಿ ಮಿಠಾಯಿ ಮಾಡಿದ್ದನ್ನೂ ಹೇಳಿಕೊಳ್ಳುವ ಸಂಭ್ರಮ... ಬದಲಾದ ಕಾಲದಲ್ಲಿಯೂ ಇದೆಯಲ್ಲ ಅಂತ ಖುಷಿಯಾಗತ್ತೆ.


ಆದರೆ ಹಂಚಿಕೊಳ್ಳುವ ಈ ಗುಣ ಮಾತ್ರ ಗಂಡಿಗೆ ಬರಲಿಲ್ಲ. ಪ್ರವೃತ್ತಿಯೇ ಹಾಗೆ. ಅವನದು ನಾಯಕತ್ವ ಗುಣ; ಮಾತು ಕಡಿಮೆಯಾಗಿಸಿಕೊಂಡು ಮೌನ ಹೆಚ್ಚಿಸಿಕೊಳ್ಳುತ್ತಾ ಹೋಗುವುದು. ಅದು ವ್ಯಕ್ತಿತ್ವದೊಂದಿಗೆ ಬೆಸೆದಿರುವಂಥದ್ದು. ಮೌನ ಹೆಚ್ಚಾದಾಗಲೇ ಭಿನ್ನಾಭಿಪ್ರಾಯ, ಬಿರುಕು. ಯಾರ ಮೇಲೆ ಅಧಿಕಾರ ಚಲಾಯಿಸುತ್ತಾನೋ ಅವರೊಂದಿಗೆ ಹೆಚ್ಚು ಹಂಚಿಕೊಳ್ಳಲು, ಮಾತನಾಡಲು ಅವನು ಬಯಸುವುದಿಲ್ಲ. ಹೊರತುಪಡಿಸಿ ಇನ್ಯಾರೊಂದಿಗೋ ಬಿಂದಾಸ್ ಆಗಿ ಮಾತನಾಡಬಲ್ಲ. ಪರಂಪರೆಯಿಂದ ಬಂದ ಈ ಬಳುವಳಿಯನ್ನು ಜೋಪಾನವಾಗಿ ಕಾಪಿಟ್ಟುಕೊಂಡು ಹೋಗುತ್ತಿದ್ದಾನೆ. ಹೀಗಾಗಿ ಆಧುನಿಕ ಜಗತ್ತಿನಲ್ಲಿ ಸಣ್ಣ ಸಮಸ್ಯೆಗಳೂ ಅಗಾಧವಾಗಿ ಕಾಣಿಸತೊಡಗಿವೆ.


ಬದಲಾವಣೆ ಅನ್ನುವುದು ನಿರಂತರ ಮತ್ತು ಶಾಶ್ವತ ಮೌಲ್ಯ. ಆದರೆ ಗಂಡಿಗೆ ಪರಂಪರಾಗತ ಮೌಲ್ಯದಲ್ಲೇ . ಹೆಣ್ಣು ಆಧುನಿಕ ಯುಗದಲ್ಲಿ ಸಬಲೀಕರಣ ನೆಚ್ಚಿರುವಾಕೆ. ಇಂಥ ಸಂದರ್ಭದಲ್ಲಿ ಪುರುಷನಾದವನು ಮಹಿಳೆಯ ಆರ್ಥಿಕ ಸ್ವಾತಂತ್ರ್ಯವನ್ನು ನೋಡುವ ಕ್ರಮದಲ್ಲಿ ಮಾಡಿಕೊಳ್ಳಬೇಕಿದೆ. ಈ ಬದಲಾವಣೆಗೆ ಸ್ಪಂದಿಸದ ಅವನು, ಅವಳ ಆರ್ಥಿಕ ಸ್ವಾತಂತ್ರ್ಯವನ್ನೇ ಕೇಂದ್ರೀಕರಿಸಿಕೊಂಡು ಹಕ್ಕು ಸಾಧಿಸಲು ಗುದ್ದಾಡುತ್ತಿದ್ದಾನೆ. ಸಹಜವಾಗಿ ಸಂಬಂಧ-ಬಾಂಧವ್ಯದ ಕೊಂಡಿಗಳು ಕಳಚಿಕೊಳ್ಳುತ್ತಿವೆ.

ಹಂಚಿಕೊಂಡ್ಲಲಿ ಸುಖ

ಕಳೆದ ೨೦-೩೦ ವರ್ಷಗಳಲ್ಲಿ ಐಟಿ-ಬಿಟಿಯಿಂದ ಜಗತ್ತು, ದೇಶ ಅಗಾಧ ಬೆಳವಣಿಗೆ ಕಂಡಿದೆ. ಆದರೆ ನಿಧಾನ ಸಂಸಾರವೃಕ್ಷದ ಬುಡ ಅಲ್ಲಾಡತೊಡಗಿದೆ. ಅಕ್ಷರ ಮತ್ತು ಆರ್ಥಿಕ ಕಸುವಿನಿಂದ ಹೆಣ್ಣುಮಕ್ಕಳು ಕೈಗೊಳ್ಳುವ ನಿರ್ಧಾರಗಳ ಕ್ರಮದಲ್ಲೂ ಬದಲಾವಣೆಯಾಗಿದೆ. ಇದರಿಂದ ಸಂಸಾರದ ಈವರೆಗಿನ ಮೌಲ್ಯಗಳಿಗೂ ಆರ್ಥಿಕ ಬದಲಾವಣೆಯಿಂದ ಉಂಟಾಗುವ ಚಿತ್ರಣಕ್ಕೂ ಅಗಾಧ ವ್ಯತ್ಯಾಸವುಂಟಾಗಿದೆ. ಐಟಿಬಿಟಿಯ್ಲಲಿರುವ ದಂಪತಿಗಳಿಗೆ ನಿತ್ಯಜೀವನದ ಸಣ್ಣ ಸಣ್ಣ ವಿಷಯಗಳೇ ದೊಡ್ಡ ತಲೆನೋವಾಗಿವೆ.


ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುವ ಗಂಡ-ಹೆಂಡಿರಲ್ಲಿ ಗ್ರೌಂಡ್ಫ್ಲೋರ್ನಲ್ಲಿ ಹಾಲು, ತರಕಾರಿಯನ್ನು ಯಾರು ಕೊಂಡು ತರುವುದು ಎನ್ನುವ ಸಮಸ್ಯೆಯಿಂದ ಶುರುವಾಗಿ, ಮಲಗೆದ್ದ ಹಾಸಿಗೆ, ಹೊದಿಕೆ ಯಾರು ಮಡಿಚಿಡುವುದು? ಕಾಫಿ ಮಾಡುವುದು ಯಾರು? ಓದಿದ ಪೇಪರನ್ನು ಒಪ್ಪವಾಗಿ ಇಡುವವರು ಯಾರು? ಎಂಬ ಪ್ರಶ್ನೆಗಳು ಒಬ್ಬರಿಗೊಬ್ಬರ ಹುಬ್ಬಿನೊಳಗೇ ಹೊದ್ದುಕೊಂಡು, ಅಹಸನೆಯಿಂದ ಭುಗಿಲೇಳತೊಡಗಿವೆ. ಇದೊಮ್ಮೆ ‘ವಿಚ್ಛೇದನ’ದ ಬೋಗುಣಿಯಲ್ಲಿ ಸ್ಫೋಟಗೊಂಡರೂ ಅಚ್ಚರಿಪಡಬೇಕಿಲ್ಲ.


ಪರಂಪರೆಯ ಹೊದಿಕೆಯೊಳಗೇ ನುಸುಳಾಡುವ ಗಂಡಸು ಹೆಣ್ಣಿನ ಆಧುನಿಕ ಮನಸ್ಥಿತಿಯನ್ನು . ವಾಸ್ತವವೆಂದರೆ ಒಪ್ಪಿಕೊಳ್ಳುವ, ಸ್ವೀಕರಿಸುವ ಶಕ್ತಿ ಇರುವ ಕಡೆಗೆ ಸಮಸ್ಯೆಗಳು ಸುಳಿಯುವುದೇ ಇಲ. ನನ್ನ ಹೆಂಡತಿ ಆರ್ಥಿಕವಾಗಿ ನನಗಿಂತ ಸಬಲಳು. ಇಬ್ಬರೂ ಮನೆಗೆಲಸವನ್ನು, ಮಗುವಿನ ಜವಾಬ್ದಾರಿಯನ್ನು ಹಂಚಿಕೊಂಡರೆ ಮಾತ್ರ ಸಂಸಾರ ನಡೆಯುವುದು. ಒಬ್ಬರು ಮಗಳಿಗೆ ಜಡೆ ಹಾಕಿ, ಬಟ್ಟೆ-ಬರೆ, ಪುಸ್ತಕ ಜೋಡಿಸಿಕೊಟ್ಟರೆ ಇನ್ನೊಬ್ಬರು ತಿಂಡಿ ತಯಾರಿಸಬೇಕು, ಹುಟ್ಟಿಸೋದಕ್ಕಷ್ಟೇ ಗಂಡಸು ಬೇಕಿಲ್ಲ. ಸತ್ಯವನ್ನು ಅವನು ಅರ್ಥ ಮಾಡಿಕೊಳ್ಳದಿದ್ದರೆ ಸಂಸಾರ ಒಡೆಯುವುದು ಗ್ಯಾರಂಟಿ.

ಬಲೂನೆಂಬ ಮೀಡಿಯಾ

ಕಣ್ಣೀರು ಹಾಕುವಾಗಲೂ ಹೆಣ್ಣು ಸುಂದರವಾಗಿ ಕಾಣಬೇಕು ಅನ್ನೋ ಪಾಲಿಸಿ ರೂಪಿಸಿದ ಎಲೆಕ್ಟ್ರಾನಿಕ್ ಮೀಡಿಯಾ ಅನ್ನೋದು ದೊಡ್ಡ ಬಲೂನು. ಈ ಬಲೂನಿನೊಳಗೆ ಬದುಕುತ್ತ ಬದುಕುತ್ತ ವಾಸ್ತವ ಸ್ವೀಕರಿಸುವ ಮನೋಭಾವವನ್ನೇ ಈ ಮಾಧ್ಯಮಕ್ಕೆ ಕಾಲಿಡುವ ಹೆಣ್ಣುಮಕ್ಕಳು ಕಳೆದುಕೊಳ್ಳುತ್ತ್ದಿದಾರೆ. ಸಾಮಾನ್ಯವಾಗಿ ಸೀರಿಯಲ್ಗಳಿಗೆ ಸಂಭಾಷಣೆ ಬರೆಯೋವಾಗ ಮತ್ತು ದೃಶ್ಯದ ನಿರ್ವಹಣೆಯ್ಲಲಿ ಕೆಲವೊಮ್ಮೆ ನಮಗರಿವ್ಲಿಲದೆಯೇ ಜನರನ್ನು ಸುಳ್ಳಿನ ಆವರಣದ್ಲಲಿಟ್ಟು ಬಿಡುತ್ತೇವೆ. ನಿಜಕ್ಕೂ ಇದೊಂದು ಸದಾ ಕಾಡುವ ದ್ವಂದ್ವ. ನಾವು ನೋಡುವ ಜಗತ್ತೇ ಬೇರೆ, ಪರ್ಫಾರ್ಮ್ ಮಾಡುವ ಜಗತ್ತೇ ಬೇರೆ. ಇದರಿಂದ ವಿಘಟನೆಗೆ ಒಳಗಾಗುತ್ತಿರುವವಳು ಹೆಣ್ಣು. ಈ ದ್ವಂದ್ವದ್ಲಲಿ ಯಾವುದು ಸತ್ಯ ಎಂದು ಆಕೆಗೆ ಅನ್ನಿಸುತ್ತದೆಯೋ ಅದನ್ನೇ ಒಪ್ಪಿಕೊಳ್ಳುತ್ತಿದ್ದಾಳೆ.


ಮೊದಲು ಹೊಸ ಬಡಾವಣೆ ಶುರುವಾದರೆ ಅಲಿ ದಿನಸಿ ಅಂಗಡಿಗಳು ತೆರೆದುಕೊಳ್ತ್ದಿದವು. ಆದರೆ ಈಗ ಕಾಲಮಾನ ಬದಲಾಗಿದೆ, ಎಲಕ್ಕಿಂತ ಮೊದಲೇ ಬ್ಯೂಟಿಪಾರ್ಲರ್ಗಳು ತಲೆ ಎತ್ತಿರುತ್ತವೆ. ತನಗೇ ಅರಿವಿಲ್ಲದಂತೆಯೇ ಮೆಲ್ಲಗೆ ಬ್ಯೂಟಿಪಾರ್ಲರ್ಗೆ ಹೋಗಿಬರುವುದನ್ನು ಇಂದು ಸಾಮಾನ್ಯ ಮಹಿಳೆಯೂ ರೂಢಿಸಿಕೊಂಡ್ದಿದಾಳೆ. ಸೌಂದರ್ಯ ಪ್ರಜ್ಞೆ ಅನ್ನೋದು ಅವಳಿಗೆ ಗೊತ್ತಿಲ್ಲದಂತೆಯೇ ಬದಲಾಗತೊಡಗಿದೆ. ಒಟ್ಟಿನಲ್ಲಿ ಕಾಸ್ಮೆಟಿಕ್ ಇಂಡಸ್ಟ್ರಿಯಿಂದಲೇ ಕಥೆ ನಿರ್ವಹಣೆಯಾಗೋ ಹಾಗಾಗಿದೆ. ಹೀಗಾಗಿ ಕಥೆಗಳ್ಲಲೂ ವಾಸ್ತವ ಕಟ್ಟೋದು ಕಷ್ಟವಾಗ್ತಿದೆ.


ಕಿರುತೆರೆ ಕಲಾವಿದೆಯರ ವಿಷಯಕ್ಕೆ ಬಂದರೆ, ಬೆಂಗಳೂರನ್ನು ಹೊರತುಪಡಿಸಿ ಪರ ಊರುಗಳಿಂದ ಬರುವವರು ಬೆಂಗಳೂರಿನಂಥ ಹೊಸ ಜಗತ್ತಿಗೆ ಹೊಂದಿಕೊಳ್ಳುವಷ್ಟರಲ್ಲಿ ಒದ್ದಾಡಿಬಿಡುತ್ತಾರೆ. ಈ ಹೊಂದಾಣಿಕೆ ಪ್ರಕ್ರಿಯೆ ಮುಗಿಯೋ ಹೊತ್ತಿಗೆ ಅವರಿಗೆ ಸಂಸಾರವೆಂದರೆ ಅಸಡ್ಡೆ ಎನ್ನಿಸತೊಡಗುತ್ತದೆ. ಶೂಟಿಂಗ್ ಮುಗಿಸಿ ರಾತ್ರಿ ಮನೆ ಸೇರೋ ಹೊತ್ತಿಗೆ ಸುಸ್ತಾಗುವ ಇವರಿಗೆ ಮನೆಗೆ ಬಂದಕೂಡಲೇ ಇರಿಟೇಷನ್. ಸದಾ ಇಸ್ತ್ರೀ ಮಾಡಿದ ಬಟ್ಟೆ. ಲಿಪ್ಸ್ಟಿಕ್, ಪೌಡರ್ರೇ ಜೀವನದ ಮೌಲ್ಯ ಎಂಬಂತಾಗಿಬಿಡುತ್ತವೆ.


ವೈಭವೀಕೃತ ಸುಳ್ಳು, ಅವಾಸ್ತವಿಕ ನೆಲೆಯಿಂದ ಕೂಡಿದ ಕೆಲ ಸೀರಿಯಲ್‌ಗಳಲ್ಲಿ ಅಭಿನಯಿಸುವ, ತಿಳಿವಳಿಕೆ ಇಲ್ಲದ ಮನಸ್ಸುಗಳು ಬಲುಬೇಗ ಇಂಥ ಸಂಕಟಗಳಿಗೆ ಸಿಕ್ಕಿಕೊಂಡು ಬಿಡುತ್ತವೆ. ಇಂಥ ಮನಸ್ಸುಗಳ ವರ್ತನೆ ಮನೆಗೆ ವಾಪಸಾದ ತಕ್ಷಣ ಬದಲಾಗಿಬಿಟ್ಟಿರುತ್ತದೆ. ನನ್ನ ಸಂಪರ್ಕಕ್ಕೆ ಬಂದ ಎಷ್ಟೋ ಕಿರುತೆರೆ ಕಲಾವಿದೆಯರಿಗೆ ಹೇಳಿದ್ದೇನೆ; ಸೀರಿಯಲ್‌ಗಳಲ್ಲಿ ಕೇವಲ ಅಭಿನಯ ಮಾತ್ರ. ಅದು ಸತ್ಯಕ್ಕೆ ದೂರ. ಇದಕ್ಕೆಲ್ಲ ಹೆಚ್ಚು ಸಮರ್ಪಿಸಿಕೊಳ್ಳಬಾರದು ಅಂತೆಲ್ಲ. ಇದೊಂದು ಈ ಕಾಲದ ದೊಡ್ಡ ಕಾಯಿಲೆಯ ಸಣ್ಣ ಆರಂಭ. ಇದನ್ನು ತಪ್ಪಿಸ್ಕೊಳ್ಳೋದಕ್ಕೆ ಕಲಾವಿದೆಯರು ಪ್ರಯತ್ನಿಸಬೇಕು.

ನೋಟ ಬದಲಾಗಲಿ...

ಆದರ್ಶ ಪುರುಷ, ಆದರ್ಶ ಮಹಿಳೆ ಅನ್ನೋದಕ್ಕೆ ಕಥೆ, ಕಾವ್ಯದಲ್ಲಿ ವಿವರಣೆ ಸಿಗಬಹುದಷ್ಟೇ. ಆದರೆ ವಾಸ್ತವದಲ್ಲಿ ಹೇಳಲಾಗುವುದಿಲ್ಲ. ಗಂಡ-ಹೆಂಡತಿಯರ ಹೊಂದಾಣಿಕೆಯೇ ಆದರ್ಶ. ಒಬ್ಬರಿಗೊಬ್ಬರು ಸೋತು ಗೆಲ್ಲುವುದೇ ಇವತ್ತಿನ ಸಂದರ್ಭದಲ್ಲಿ ಮುಖ್ಯವಾದ ಆದರ್ಶ. ಫಾರ್ಗಿವ್ ಮಿ, ಐ ಲವ್ ಯೂ ಅಂತ ಹೇಳ್ಕೊಳ್ಳಲೇಬೇಕು. ಇಲದ್ದಿದರೆ ಪ್ರತಿ ಕ್ಷಣವೂ ವಿಘಟನೆಯಾಗುತ್ತ ಸಾಗುತ್ತದೆ. ಸಂಸಾರ ಗಟ್ಟಿಯಾಗ್ದಿದಾಗ ಮಾತ್ರ ಒಟ್ಟು ಸಮಾಜ ಆರೋಗ್ಯವಾಗಿರತ್ತೆ.

ಆರ್ಥಿಕ ಸಬಲೀಕರಣದಿಂದ ಹೆಣ್ಣುಮಕ್ಕಳ ತೀರ್ಮಾನ, ನಿರ್ಧಾರದ ಕ್ರಮ ಬದಲಾಗುತ್ತಿದೆ ಎಂದಾಗ ಸುತ್ತಮುತ್ತಲಿನವರೂ ಬದಲಾಗಬೇಕು. ಮೊದಲು ಒಂದು ಪುಸ್ತಕ, ಪೆನ್ನು, ಬಟ್ಟೆ ಎಲದಕ್ಕೂ ಅಣ್ಣ, ಅಪ್ಪನಿಗೆ ಸಲಾಂ ಹೊಡಿಬೇಕಿತ್ತು ನಂತರ ದಿನಗಳ್ಲಲಿ ಗಂಡ. ಆದರೆ ತನಗೆ ಬೇಕಾದ ಹಾಗೆ ಬದುಕುವ ಶಕ್ತಿ ಅವಳಿಗೆ ಬಂದ್ದಿದರಿಂದ ಆ ಪರಿಸ್ಥಿತಿ ಈಗ್ಲಿಲ. ತನಗೆ ಬೇಕಾದಂತೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಅವಳಿಗಿದೆ. ಆದರಿಂದ ನೋಡುವವರ ಕ್ರಮಗಳೂ ಬದಲಾಗಬೇಕು. ಎದುರಿಗಿರುವ ಬದಲಾವಣೆಯನ್ನು ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು.


ಯಜಮಾನ್ಯ ಸಂಸ್ಕೃತಿ ಮತ್ತು ಹಿಂದು ಪುನರುತ್ಥಾನವಾದಿಗಳು ಒಂದೆಡೆಗೆ ಮತ್ತು ಎಡಪಂಥೀಯ ಧೋರಣೆಗಳ ಜಗತ್ತು ಒಂದೆಡೆಗೆ ಎಂಬಂಥ ಧ್ರುವೀಕರಣಗಳು ಇಂದು ಆಗಿವೆ. ಈ ಧ್ರುವೀಕರಣದ ಅಡಿಗೆ ಸಿಲುಕಿರುವ ಆಧುನಿಕ ಮಹಿಳೆ ಮತ್ತು ಪುರುಷ ಆಧುನಿಕ ಜೀವನದ ಗೊಂದಲದಲ್ಲಿ ಉಳಿಯುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಂಸಾರ ವಿಘಟನೆಯಾಗುತ್ತಿರುವ ಹಲವು ಉದಾಹರಣೆಗಳನ್ನು ನೋಡಬಹುದು. ಈ ದ್ವಂದ್ವದಿಂದ ತಪ್ಪಿಸಿಕೊಳ್ಳುವುದು ಮೊದಲು ಆಗಬೇಕಾದ ಕೆಲಸ. ಅದರೊಡನೆಯೇ ಬದಲಾದ ಸಂದರ್ಭದ್ಲಲಿ ಸಬಲಗೊಂಡಿರುವ ಹೆಣ್ಣನ್ನು ಪುರುಷ ನೋಡುವ ಕ್ರಮ ಮತ್ತು ತನ್ನ ಬದಲಾದ ಆರ್ಥಿಕ ಸ್ವಾತಂತ್ರ್ಯದ ಸ್ಥಿತಿಯಲ್ಲಿ ತನ್ನ ಎದುರಿಗೆ ಒದಗಿ ಬರುವ ಸನ್ನಿವೇಶಗಳನ್ನು ನಿಭಾಯಿಸುವ್ಲಲಿ ಹೆಣ್ಣು ಜಾಣ್ಮೆ ರೂಢಿಸಿಕೊಂಡರೆ ಉತ್ತಮ. ಈ ಮಾತುಗಳು ಸಾರ್ವತ್ರಿಕವಲ್ಲ. ದ್ವಂದ್ವಗಳನ್ನು ತಪ್ಪಿಸಿಕೊಂಡು ನೆಮ್ಮದಿಯನ್ನು ಅನುಭವಿಸುತ್ತಿರುವ ಅನೇಕ ಕುಟುಂಬಗಳು ನಮ್ಮ ಕಣ್ಣೆದುರಿಗೇ ಇವೆ.


ಒಟ್ಟಾರೆಯಾಗಿ ಹೇಳಬಹುದಾದದ್ದು . ಸಬಲ ಮಹಿಳೆಯಿಂದ ಸಮಾಜ ಸದೃಢವಾಗುವುದೇ ಸತ್ಯ. ಇದೇ ಸಂದರ್ಭದಲ್ಲಿ ಸಮಾಜದ ಮೂಲರೂಪವಾದ ಕುಟುಂಬ ಎಂಬುದನ್ನು ಕಾಪಾಡಿಕೊಳ್ಳಲು ಆ ವ್ಯವಸ್ಥೆಯ ಒಳಗಿರುವವರೆಲ್ಲರೂ ಪ್ರಯತ್ನಿಸಬೇಕಾದದ್ದು ಅಷ್ಟೆ ಮುಖ್ಯ. ವಿಘಟನೆಗೊಳಗಾದ ಕುಟುಂಬಗಳು ಅನಾರೋಗ್ಯದ ಆರಂಭ. ಹಾಗಾಗಿ ಸಮಾಜದ ಆರೋಗ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕಾದ್ದದು ಇಂದಿನ ಆದ್ಯತೆ.


ಸಂದರ್ಶನ-ಶ್ರೀದೇವಿ ಕಳಸದ, ಫೋಟೋ: ಡಿ.ಸಿ. ನಾಗೇಶ್‌


ಪ್ರಜಾವಾಣಿ ’ಭೂಮಿಕಾ’ ’ಅವಳು-ಅವನು ’ ಅಂಕಣದಲ್ಲಿ ಪ್ರಕಟ (೯-೪-೨೦೧೧)