ಭಂಗಿಯಲ್ಲಿ ಚಾಚಿ ಗೋಡೆಗೆ ಬೆನ್ನೊರಗಿಸಿ
ನಿಂತುಕೊಂಡಿರುತ್ತೀರಲ್ಲ...
ಹೇಳಿ.. ದಕ್ಕಿದ್ದಾದರೂ ಏನು ನಿಮಗೆ?
ನಿತ್ಯಪೂಜೆ... ಮಹಾಮಂಗಳಾರತಿ... ನೈವೇದ್ಯ
ಯೋಚಿಸಿ ಒಮ್ಮೆ ಇದೆಲ್ಲ ವೇದ್ಯವೆ?
ಹಬೆಯೆಂತೋ, ಹದವೆಂತೋ
ಸ್ನಾನ-ಮಹಾಸ್ನಾನ;
ಸೋಕದೆ ಹೃದಯ ಹೊಸ್ತಿಲನ್ನೂ
ತಾಕದೆ ಪಾದದಡಿಯ.
ಅಭಿಷೇಕ, ಅಲಂಕಾರ ಗಂಧಾದಿಲೇಪ
ಅವರವರ ಭಕುತಿ-ಮುಕುತಿ
ಭಾರವೇ ಅದು ಮೂಗಿಗಿಂತ ಮೂಗುತಿ
ಮೆಚ್ಚಿಸಲು, ಮರೆಯಿಸಲು
ಹೊಳಪ ತನ್ನಿಂದಲೇ ಎಂದು ಮೆರೆಯಲು.
ಉಡಿಯ ಪದರೊಳಗೆ ಕತ್ತು ಚಿವುಟಿದ
ರಾಶಿ ಮೊಗ್ಗುಗಳು. ಅರಳುವ ಮೊದಲೇ
ಅಳುವ ಮರೆತವು.
ಬಿಟ್ಟೀತೆ ಪಾಪ?
ತಟ್ಟದಿದ್ದೀತೆ ಶಾಪ?
ಹೊಟ್ಟೆ ಸೀಳಿ ಅವುಗಳ
ಬೆಸೆದು ಕರುಳಿಗೆ ದಾರ,
ಮಾಲೆ ಮಾಡಿದ್ದಾರವರು.
ಪರಿಮಳವು ಸೋರಿ, ಸೋರಿ..
ಅದು ಹರಿದು ಹರಿದಾರಿಗಿಳಿಯುವ ಮೊದಲೇ
ಹರಿಸು, ಉದ್ಧರಿಸು;
ಬಾ, ಬಾರೋ ಹರನೋ, ಹರಿಯೋ...
ಎನ್ನುತ್ತ ಶಂಖಗಳೇ ತಾವಾಗಿವೆ
ಗಂಟೆ-ಜಾಗಟೆಗಳೂ.
ಅವರು ಬಾಗಲು
ನೀವು ಬೀಗಲು
ಹಾಡೇ ಹಗಲು
ಒಡೆದು ಬೀಗ-ಬಾಗಿಲು;
ತೋಚಿದ್ದು, ದೋಚಿ
ದೋಚಿದ್ದು ಬಿಚ್ಚಿ
ಬೆಚ್ಚಗಾಗಿಸುವ ನಿಮ್ಮ ಕರಗಳನ್ನೊಮ್ಮೆ
ನೋಡಿಕೊಳ್ಳಿ?
ಎಂಥದೋ ವಾಸನೆ-
ಎಲ್ಲ ಮಗ್ಗಲೂ ಮುಗ್ಗಲು...
ಇದೊಂದು ನಿತ್ಯ ವ್ಯವಹಾರ
ಸತ್ಯದ ನೆತ್ತಿ ತಟ್ಟುತ್ತ
ಸುಳ್ಳಿನ ಕಿರೀಟ ತೊಡಿಸುವ
ಬೇಕೆ ಇವರ ಪೂಜೆ ನಿಮಗೆ?
ನಿತ್ಯಪೂಜೆ... ಮಹಾಮಂಗಳಾರತಿ... ನೈವೇದ್ಯ
ಯೋಚಿಸಿದ್ದೀರಾ ಒಮ್ಮೆ?
ಯೋಚಿಸಿ ಒಮ್ಮೆ!
-ಶ್ರೀದೇವಿ ಕಳಸದ
(’ಸಂಚಯ’ದ ’ಬ್ರೇಕ್ನ ನಂತರ...’ ಸಂಕಲನದಲ್ಲಿ ಪ್ರಕಟಿತ ಕವನ
3 comments:
ವಾಹ್ ಶ್ರೀದೇವಿ ವಾಹ್. ಮೆಚ್ಚಿದೆ. ಒಂದೊಂದಾಗಿ ಜೋಡಿದ ಸಾಲುಗಳು ನಿಜಕ್ಕೂ ಅದ್ಭುತ. ತುಂಬ ಖುಛಿಯಾಯಿತು :)
-ರಾಧಿಕಾ
Excellent!
ವ್ಹಾರೆ ವ್ಹಾ..!
Post a Comment