ಈ ರಾತ್ರಿ.
ಅದೊಂದು ಗರ್ಭಕಟ್ಟಿದ ಹುಸಿಮೋಡ.
ಒಂದೊಮ್ಮೆ ಹನಿದರೂ
ಹಸೆಯ ಪಸೆಯಷ್ಟೇ.
ನೆಲ, ಗೋಡೆ,
ಕಿಟಕಿ-ಬಾಗಿಲು, ರೈಲು ಕಂಬಿಗಳು
ತೇಲುವ, ಹಾರುವ ಮರದ-
ದಿಮ್ಮಿಗಳಿಗೆ, ತಟ್ಟೆಗಳಿಗೆ
ಕಿವಿಯಿಡು ಒಮ್ಮೆ?
ಕಿವಿಯಿಡು ಒಮ್ಮೆ?
ಗದ್ದ ತಾಕುವುದಿಲ್ಲ, ನಿಲ್ಲುವುದಿಲ್ಲ-
ಗದ್ದಲವೂ.
ಆ ಗದ್ದಲೊಳಗೆ ಕುದ್ದ ಕಾವನ್ನೆಲ್ಲ
ಕದ್ದ ಅವ ಬಿತ್ತಿದ್ದಾನೆ,
ಬಟ್ಟಲೊಳಗೆ ಕಾಳ-
’ಕಾಳ’ಬೆಳಕ.
ಕಳೆದುಕೊಂಡವರೇ ಮರೆತಾಗ ಲೆಕ್ಕ,
ಕದ್ದವನಿಗೇಕೆ ಖಾತೆಪುಸ್ತಕ ಚಿಂತೆ.
ಅಂಚು ಮೀರಿದ ಅವನ
ಎಲ್ಲ ಬೆಳಕಿಗೆ ಕುಕ್ಕಿಸಿಕೊಂಡ
ರೆಪ್ಪೆಗುಂಟ ನೀರ್ಮಣಿ
ಮಾಲೆ...
ಅರೆ, ಅದು ದಾರವಿಲ್ಲದ ಮಾಲೆ!
ಬೆರಳಂಚಿಗಿಟ್ಟು ಹೋದವ,
ಹೊರಟೇ ಹೋದ-
ಮತ್ತೆ ಬರಲು.
ಹೋಗುವಾಗ ಹೇಳಿದ್ದು ಅವ-
ನೀ ಒಮ್ಮೆ ಕೇಳಿಬಿಡು;
’ಕಾವಿಗೆ ಬಸಿದ ಎಸರಷ್ಟೇ ಕಣೆ ಅದು-
ಬಟ್ಟಲೊಳಗೆ ಕಾಳ-
’ಕಾಳ’ಬೆಳಕ.
ಕಳೆದುಕೊಂಡವರೇ ಮರೆತಾಗ ಲೆಕ್ಕ,
ಕದ್ದವನಿಗೇಕೆ ಖಾತೆಪುಸ್ತಕ ಚಿಂತೆ.
ಅಂಚು ಮೀರಿದ ಅವನ
ಎಲ್ಲ ಬೆಳಕಿಗೆ ಕುಕ್ಕಿಸಿಕೊಂಡ
ರೆಪ್ಪೆಗುಂಟ ನೀರ್ಮಣಿ
ಮಾಲೆ...
ಅರೆ, ಅದು ದಾರವಿಲ್ಲದ ಮಾಲೆ!
ಬೆರಳಂಚಿಗಿಟ್ಟು ಹೋದವ,
ಹೊರಟೇ ಹೋದ-
ಮತ್ತೆ ಬರಲು.
ಹೋಗುವಾಗ ಹೇಳಿದ್ದು ಅವ-
ನೀ ಒಮ್ಮೆ ಕೇಳಿಬಿಡು;
’ಕಾವಿಗೆ ಬಸಿದ ಎಸರಷ್ಟೇ ಕಣೆ ಅದು-
ಬೆಸೆದದ್ದಲ್ಲ ಉಸಿರ ಲಯಕ್ಕೆ..’
ಅಬ್ಬಾ! ಎಂಥ ಧ್ವನಿಯೋ ಅವನದು..
ಅಬ್ಬಾ! ಎಂಥ ಧ್ವನಿಯೋ ಅವನದು..
ಹಾಂ... ಧ್ವನಿ.
ಪ್ರತಿಧ್ವನಿ, ತಿಧ್ವನಿ, ಧ್ವನಿ, ನೀ.-ಶ್ರೀದೇವಿ ಕಳಸದ
2 comments:
ತುಂ ತುಂ ತುಂ ತುಂ ತುಂಬಿ ಬಂದ ಸಾಲುಗಳು ಗುಂಯ್ಗುಡುತ್ತಲಿವೆ :)
sundara saalugalu
illi maleyaaguttide :)
Post a Comment