ರಾಗಬಂಧಿ
ಹೆಜ್ಜೆ ವಜ್ಜೆಯಾದಾಗ
ಒಲವ ಗೀತೆ ಉಸುರಿದವ
ಹೂದಾರಿ ತುಂಬ ಸ್ವರ ಹರಡಿ
ಕೇಳುತ್ತಿದ್ದಾನ
ಬಂಧಿಸುವೆ ಯಾವ ರಾಗಕ್ಕ?
ಅರೆರೆಪ್ಪೆ ಹೊರಳು, ತುಸು ಅರಳ
ತುಟಿ ಸಾಕ. ಜೊತಿಗೆ-
ಜಿನುಗ ಆಲಾಪ.
ತಂತಿಯಾದೇನು ಶ್ರುತಿ,
ಹೇಳ ಯಾವ ರಾಗ.
ಎಳೆದೊಮ್ಮೆ ಉಸಿರು
ಮುರಿದ ಮೈಯ,
ಗಲ್ಲಕ್ಕ ಗಲ್ಲ ಜಾರಿ
ಕುತ್ತಿಗೀ ಕೊಂಕಿಗೆ
ಎದಿಗಾತು ಕೂಸಿನ್ಹಾಂಗ.
ಬಳಸಿ ಬೆಟ್ಟಕಾ ’ಪಹಾಡಿ’
’ಸಾರಂಗ’ ಶೃಂಗಾರ.
ಎದೆಗಾವು ’ತೋಡಿ’
ತೊಡೆಯ ಮೇಲೆರಡು
ಹನಿ ಇಳಿದು ಸಣ್ಣ ಜಂಪ.
ಗಿಳಿವಿಂಡು ಹಾರಿ
ಕೇಳಿ ಕೋಗಿಲದ ಪಂಚಮ
ನಡೆದೆದ್ದು ಹೊರಟ
ಕಾವಿಮಕದಾಂವ.
ಈಗಾರ ಹೇಳ ರಾಗದಾ ಹೆಸರ.
-ಶ್ರೀದೇವಿ ಕಳಸದ
4 comments:
nice...! ಈಗಾರ ಹೇಳ ರಾಗದಾ ಹೆಸರ....
ಬಲು ಸೊಗಸಾದ ಕವನ.
ತುಂಬಾ ಚೆನ್ನಾಗಿದೆ
Nice !
Post a Comment