Monday, December 31, 2012

ಕಪ್‌ ಕಾರ್ನ್‌ ಮತ್ತು ದೇವಿ



ಕಬ್ಬಿಣದ ಬುಟ್ಟಿಯೊಳಗಿನ ಇದ್ದಿಲುಗುಂಪಿಗೆಲ್ಲ ಆಕೆ ಮೈಚಳಿ ಬಿಡಿಸುತ್ತಿದ್ದಳು. ಅವಳ ಬೀಸುವಿಕೆಗೆ ಇದ್ದಿಲು ತುಂಡುಗಳು ಮುಖ ಕೆಂಪು ಮಾಡಿಕೊಳ್ಳುತ್ತಿದ್ದವು. ಇನ್ನೇನು ನಮ್ಮನ್ನು ಕೆಂಡದಹಾಸಿಗೆಯ ಮೇಲೆ ಈ ಮಹಾತಾಯಿ ಉರುಳಿಸೇ ಬಿಡುತ್ತಾಳೆ ಎಂದುಕೊಂಡು ತಿಳಿಹಳದಿ ಎಳೆತೆನೆಗಳು ಅಂಗಿಬಿಚ್ಚಿಸಿಕೊಂಡು ಚಡಪಸುತ್ತಿದ್ದವು. ಅಂತೂ ಆಕೆ ಜೋಳದ ತೆನೆಯನ್ನು ಕೆಂಡದ ಮೇಲೆ ಇಟ್ಟಿದ್ದೇ ತಡ, ತೆನೆಯ ಚಡಪಡಿಕೆಯನ್ನೆಲ್ಲ ಚಿಟಪಟನೆ ನುಂಗಿದ ಕಿಡಿಗಳು ನಕ್ಕು ನಕ್ಷತ್ರಗಳಾಗಿ ಮಾಯವಾದವು. ಅತ್ತಿಂದಿತ್ತ ಇತ್ತಿಂದತ್ತ ತೆನೆ ಉರುಳಾಡಿಸುತ್ತಾ, ಮೊಬೈಲ್‌ನಲ್ಲಿ ಮಾತನಾಡುತ್ತಾ ಹುಬ್ಬಿನಲ್ಲೇ, ಎಷ್ಟು ಬೇಕು ಎಂದಳು. ಒಂದು, ಎಂದು ಬೆರಳು ತೋರಿದೆ.
ಆಮೇಲೆ? ಇಲ್ಲಿ ಬನ್ನಿ....  http://blogs.vijaykarnataka.indiatimes.com/aalaapini/entry/cupcorn111 

3 comments:

ರಾಧಿಕಾ ವಿಟ್ಲ said...

ಆಹಾ..., ಚೆನ್ನಾಗಿದೆ ಶ್ರೀ :)

sunaath said...

ಈ ಮಹಿಳೆಯ ಮೇಲೆ (ಮತ್ತು ಇಂತಹ ಸಾವಿರಾರು ಮಹಿಳೆಯರ ಮೇಲೆ) ಗೌರವ ಹುಟ್ಟುತ್ತದೆ. ಇವಳನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು. ಅವಳ ಕೆಂಡದಿಂದ ಹಾರಿದ ಕಿಡಿಯಂತೆಯೇ ನಿಮ್ಮ ಬರಹವು ನಕ್ಷತ್ರರೂಪವನ್ನು ತಳೆದಿದೆ. ಅಭಿನಂದನೆಗಳು.

ಆಲಾಪಿನಿ said...

@ ರಾಧಿಕಾ ಥ್ಯಾಂಕ್ಸ್‌ ಕಣೆ :)

@ ಸುನಾಥ ಅಂಕಲ್‌ ಥ್ಯಾಂಕ್‌ ಯೂ