Wednesday, October 23, 2013

ತಂಬೂರಿ



ಅವುಡುಗಚ್ಚಿದ ತಂತಿಗಳು

ಹಿಂಡಿ ಕಿವಿ ಪೂರ್ತಿ ಬೆಚ್ಚ, ಅಂಗೈಪೂರ್ತಿ ಗುಲಾಲ.


ಜೀರ್‌ ಹಚ್ಚೇ ತಾಯಿ; ತುಂಡುದಾರಗಳದ್ದೊಂದೇ ರಾಗ.


ಬಿಮ್ಮೆಂದ ತಂತಿಗಳು ಸಡಿಲಗೊಂಡರಲ್ಲವೆ?


ಹೆಗಲಿಗ್ಹಾಕಿದರೂ ಅಡ್ಡ ಮಲಗಿಸಿದರೂ;


ಹಿಂಡಿ ಹಿಂಡಿ ಬೆರಳತುದಿ ಹವಳ.


ಬೇಸೂರೋ ಖೂಬ್‌ಸೂರತೋ ನನಗ್ಯಾರ ಉಸಾಬರಿ;


ಒಡಲೊಳಗೆ ಬೆಚ್ಚ ದುಂಡುಗುಂಬಳ.

ತಂತ್ರ ಅರಿಯದ ನೀ, ಆದ್ಹಾಂಗೆ ಉದ್ಧಾರ;


ನೆನಪಾದ ಅವನ ಉದ್ಗಾರ.


ನಾ ಹರಿಯಲೇ ಆ ಬಿಗಿದ ಕಿವಿಯೊಳಗೆ; ಎಣ್ಣೆ ಡಬ್ಬದ ಇಣುಕು.


ಹಾರಿಬಂದ ಬೆಕ್ಕು, ಶಾಂತವಾದ ದೀಪ


ಮೂಲೆಯಲ್ಲೆಲ್ಲೊ ಮೈಮುರಿದ ತಂತಿಯ ಕುಸುಕುಸು;


ಮತ್ತೆಂದೂ ಶ್ರುತಿಗೊಳಿಸಬೇಡ ನನ್ನ.


                                         

                    

1 comment:

sunaath said...

‘ತರವಲ್ಲ ತಗಿ ನಿನ್ನ ತಂಬೂರಿ!’,ಎನ್ನುತ್ತಿದ್ದೀರಾ?