Monday, November 23, 2015

ಸಾಮಾಜಿಕ ಸಮಾನತೆ; ಸತ್ಯ ಮಿಥ್ಯಗಳು


ಸಮಾಜ ಅಂದರೇ ಸಮಾನತೆಅಂದರೆಲಿಂಗಧರ್ಮಜಾತಿವರ್ಗದ ಭೇದವಿಲ್ಲದೇಎಲ್ಲರೂ ಸರಿಸಮಾನವಾಗಿ ಬದುಕಲು ಅವಕಾಶ ಕೊಡುವಂಥ ವ್ಯವಸ್ಥೆಸಮಾಜದ ನಿಜಾರ್ಥದಲ್ಲಿ ನೋಡಿದರೆಅಲ್ಲಿರುವ ಎಲ್ಲರಿಗೂ ಸಮಾನ ಅವಕಾಶ ಉಂಟುಪ್ರತಿಯೊಬ್ಬರೂ ತಂತಮ್ಮ ಪ್ರತಿಭೆಸಾಮರ್ಥ್ಯ ಹಾಗೂ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ದೊರಕಿಸುವಂಥ ವ್ಯವಸ್ಥೆ ಅಲ್ಲಿರುತ್ತದೆಹಾಗಿದ್ದಲ್ಲಿ ಸಮಾಜ ಆರೋಗ್ಯಪೂರ್ಣವಾಗಿರುತ್ತದೆಅದು ನಿಜಕ್ಕೂ ಆದರ್ಶ ಸಮಾಜ.
ಹಲವು ಸದಸ್ಯರು ಸೇರಿದರೆ ಕುಟುಂಬವಾಗುವಂತೆಹಲವು ಕುಟುಂಬಗಳು ಸೇರಿ ಒಂದು ಊರು ಅಥವಾ ಘಟಕ ಏರ್ಪಡುತ್ತದೆಹೇಗೆ ಕುಟುಂಬದ ಸದಸ್ಯರು ಒಬ್ಬರಿಗಿಂತ ಇನ್ನೊಬ್ಬರು ತಮ್ಮ ಪ್ರತಿಭೆಸಾಮರ್ಥ್ಯದಲ್ಲಿ ಭಿನ್ನವಾಗಿರುತ್ತಾರೋಅದೇ ರೀತಿ ಊರಿನ ಪ್ರತಿಯೊಂದು ಕುಟುಂಬವೂ ಇನ್ನೊಂದು ಕುಟುಂಬಕ್ಕಿಂತ ಭಿನ್ನವೇಇದರರ್ಥ ಇಷ್ಟೇಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲಾರರು.

ಸಮಾಜದ ಮೂಲ ತತ್ವವೇ ಇದುಇಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರ ಹಾಗೆ ಇರುವುದಿಲ್ಲಅದು ಕುಟುಂಬದೊಳಗೇ ಇರಲಿಹೊರಗೇ ಇರಲಿಒಂದೇ ಊರವರಾಗಿರಲಿಬೇರೆ ಬೇರೆ ಊರುಗಳಿಗೆ ಸೇರಿದವರಾಗಿರಲಿಪ್ರತಿಯೊಬ್ಬರೂ ವಿಭಿನ್ನ ಸಾಮರ್ಥ್ಯ ಹೊಂದಿರುತ್ತಾರೆಇದೇ ಮಾತನ್ನು ಲಿಂಗಧರ್ಮಜಾತಿವರ್ಗವೃತ್ತಿಗೆ ಸಂಬಂಧಿಸಿದಂತೆ ಅನ್ವಯಿಸಬಹುದು.
ಹೀಗಿದ್ದರೂಪ್ರತಿಯೊಬ್ಬ ವ್ಯಕ್ತಿ ಅದೇ ಕುಟುಂಬಅದೇ ಊರುಅದೇ ವೃತ್ತಿಅದೇ ಧರ್ಮಅದೇ ಜಾತಿಗೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತ ಹೋಗುತ್ತಾನೆಅಂಥ ಕೊಡುಗೆಯನ್ನು ನೀಡುವಂಥ ಅವಕಾಶಪಡೆಯುವಂಥ ಮುಕ್ತತೆಯನ್ನು ಸಮಾಜ ಹೊಂದಿರಬೇಕುಇಲ್ಲಿ ಯಾರೊಬ್ಬರೂ ಮೇಲಲ್ಲಯಾರೂ ಕೀಳಲ್ಲಅವರವರ ಸಾಮರ್ಥ್ಯಪ್ರತಿಭೆ ಹಾಗೂ ಬದ್ಧತೆಗೆ ಅನುಗುಣವಾಗಿ ಅವರವರ ಕೊಡುಗೆ ನಿರ್ಧಾರವಾಗುತ್ತದೆ.

ನಿಜವಾದ ಸಮಾಜ ಕೆಲಸ ಮಾಡುವುದು ಈ ತತ್ವದ ಮೇಲೆಇಲ್ಲಿ ಯಾರೂ ದ್ವೀಪವಾಗಿ ಬದುಕಲು ಸಾಧ್ಯವಿಲ್ಲಪ್ರತಿಯೊಬ್ಬರೂ ಇನ್ನೊಬ್ಬರ ಮೇಲೆ ಅವಲಂಬಿತರುಬಿಡಿಬಿಡಿಯಾಗಿ ಯಾರೂ ಪರಿಪೂರ್ಣರಲ್ಲಆದರೆಇಡಿಯಾಗಿ ಎಲ್ಲರೂ ಅದ್ಭುತ ಸಮಾಜವನ್ನು ಕಟ್ಟಬಲ್ಲರುಈ ಕಾರಣದಿಂದ ಮನುಷ್ಯನನ್ನು ಸಂಘಜೀವಿ ಎಂದು ಕರೆದರುಸಮಾನತೆಯೇ ಸಮಾಜದ ಮೂಲತತ್ವವಾಯಿತುಪ್ರತಿಯೊಬ್ಬ ವ್ಯಕ್ತಿ ತನಗಿಷ್ಟದ ವೃತ್ತಿಯನ್ನು ರೂಢಿಸಿಕೊಂಡಅದನ್ನೇ ತನ್ನ ಕುಟುಂಬಕ್ಕೆ ರೂಢಿಸಿದಪ್ರತಿಯೊಂದು ಊರೂ ಇಂಥ ವಿವಿಧ ವೃತ್ತಿಗಳ ಜನರನ್ನು ಒಂದೆಡೆ ಹೊಂದುವ ಮೂಲಕ ಘಟಕವಾಗಿ ಅಸ್ತಿತ್ವ ಕಂಡುಕೊಂಡಿತುಎಲ್ಲರೂ ಎಲ್ಲರಿಗೂ ಬೇಕಾಗುತ್ತಿದ್ದರುಯಾರೂ ಇನ್ನೊಬ್ಬರಿಗಿಂತ ಮೇಲು ಅಥವಾ ಕೀಳಾಗಿ ಇರಲಿಲ್ಲ.

ಇಷ್ಟೆಲ್ಲ ವಿವರಣೆ ಏಕೆಂದರೆಯಾವುದನ್ನು ನಾವು ಸಮಾನತೆ ಎಂದು ಕರೆಯುತ್ತೇವೋಅದರ ಮೂಲಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ವಿವರಿಸಲುಒಂದೊಂದು ವೃತ್ತಿಯಲ್ಲಿ ವಿಶೇಷ ಪ್ರತಿಭೆ ಗಳಿಸಿದ ಕುಟುಂಬಗಳೆಲ್ಲ ಒಂದೆಡೆ ಸೇರಿಕೊಂಡು ಆ ವೃತ್ತಿಯನ್ನು ಬೆಳೆಸಿದವುವೃತ್ತಿ ಕುರಿತ ತಿಳಿವಳಿಕೆಯನ್ನು ತಮ್ಮೊಳಗೇ ಹಂಚಿಕೊಳ್ಳುತ್ತಾಅದನ್ನೇ ಆಸ್ತಿಯಂತೆ ಪೋಷಿಸಿಕೊಂಡು ಬೆಳೆಸುತ್ತ ಬಂದರುಪ್ರತಿಯೊಂದು ವೃತ್ತಿಯ ಜನಇತರ ವೃತ್ತಿಯ ಜನರೊಂದಿಗೆ ಸಹಜ ಸಂಬಂಧ ಹೊಂದಿದ್ದರುಎಲ್ಲಾ ವೃತ್ತಿಗಳಿಗೂ ಸಮಾನ ಗೌರವ ಇತ್ತುಮನುಷ್ಯ ಸಾಮಾಜಿಕವಾಗಿ ಹೆಚ್ಚೆಚ್ಚು ವಿಸ್ತರಿಸುತ್ತ ಹೋದಂತೆ ವೃತ್ತಿಯಿಂದ ಕಂಡುಕೊಂಡಿದ್ದ ಗುರುತು ಕ್ರಮೇಣ ಜಾತಿ ವ್ಯವಸ್ಥೆಯಾಗಿ ಬದಲಾಯಿತು.ಮೇಲು ಕೀಳು ಎಂಬ ಭಾವನೆ ಬಲಗೊಳ್ಳುತ್ತ ಹೋಯಿತುದೈಹಿಕ ಶ್ರಮ ಹೆಚ್ಚು ಬೇಡುತ್ತಿದ್ದ ವೃತ್ತಿಗಳಲ್ಲಿ ತೊಡಗಿಕೊಂಡವರನ್ನು ಕೀಳಾಗಿ ಕಾಣುವಬೌದ್ಧಿಕ ಶ್ರಮದಿಂದ ಗುರುತಿಸಿಕೊಂಡ ವೃತ್ತಿಗಳು ಮೇಲೆಂಬ ಮನೋಭಾವನೆ ಹುಟ್ಟಿಕೊಂಡಿತು.
ಇದೊಂದು ಸಂಕೀರ್ಣ ಬೆಳವಣಿಗೆಸಾವಿರಾರು ವರ್ಷಗಳ ಕಾಲ ಬಲಿತು ನಿಂತ ಮನೋಧರ್ಮ ಇದುನಾಗರಿಕತೆಯ ವಿಕಾಸದ ಜೊತೆಗೆವೃತ್ತಿ ಎಂಬುದು ಜಾತಿಯಾಗಿ ಬಲಿಯುತ್ತ ಹೋಯಿತುತಂತಮ್ಮ ವೃತ್ತಿಗೆ ಸೂಕ್ತವಾಗಿದ್ದ ಉಡುಪುಆಚರಣೆಆಹಾರವ್ಯವಹಾರ ಹೊಂದಿದವರು ಆ ಕಾರಣಗಳಿಗಾಗಿ ಮನ್ನಣೆ ಅಥವಾ ಅವಗಣನೆ ಪಡೆಯುವಂಥ ವ್ಯವಸ್ಥೆ ಬಲಗೊಳ್ಳುತ್ತ ಹೋಯಿತುವರ್ಣಾಶ್ರಮದ ಹೆಸರಿನಲ್ಲಿ ಈ ವಿಭಜನೆಯನ್ನು ನಿಯಮಗಳ ರೀತಿ ಜಾರಿಗೊಳಿಸಲಾಯಿತುವೃತ್ತಿ ಬದಲಿಸುವಆ ಮೂಲಕ ಇತರ ಜಾತಿಗಳಿಗೆ ವಲಸೆ ಹೋಗುವ ಅವಕಾಶ ಇಲ್ಲವಾಯಿತು.ಇಷ್ಟವಿದೆಯೋ ಇಲ್ಲವೋವ್ಯಕ್ತಿಯೊಬ್ಬ ತನ್ನ ಹಿರೀಕರು ಮಾಡುವ ಕೆಲಸವನ್ನೇ ಮುಂದುವರಿಸುವಂತಾಗಿ ಸಮಾಜ ಅತ್ಯಂತ ಸ್ಪಷ್ಟವಾಗಿ ವರ್ಗೀಕರಣಗೊಂಡಿತು.

ಸಮಾನತೆಯ ಪರಿಕಲ್ಪನೆ ಮೇಲೆ ವಿಕಾಸವಾಗಿದ್ದ ಸಮಾಜ ವೃತ್ತಿ ಮೂಲಕ ಹುಟ್ಟಿದ ಜಾತಿ ಪದ್ಧತಿಯಿಂದ ಸಂಕುಚಿಗೊಂಡಿತುಯಾವಾಗ ಅಸಮಾನತೆ ಬಲಿಯತೊಡಗಿತೋಅದನ್ನು ವಿರೋಧಿಸುವ ಮನಃಸ್ಥಿತಿಯೂ ಜೊತೆಜೊತೆಗೇ ಬೆಳೆಯಿತುಅಂಥ ವಿರೋಧವನ್ನು ದಮನಗೊಳಿಸುವ ವ್ಯವಸ್ಥೆಯನ್ನು ಪ್ರಬಲ ಜಾತಿಗಳ ಜನ ಬೆಳೆಸಿದರುಇದು ಕ್ರಮೇಣ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಯಿತುಬಾಹ್ಯ ಕಾರಣಗಳಿಗಿಂತ ಹೆಚ್ಚಾಗಿ ಆಂತರಿಕ ಭಿನ್ನತೆಯಿಂದಾಗಿ ಸಮಾಜ ಒಡೆದು ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.

ಪರಿಸ್ಥಿತಿ ಹೀಗೆ ವಿಷಮಿಸಿದಾಗೆಲ್ಲಕೆಲ ಸಾತ್ವಿಕ ವ್ಯಕ್ತಿಗಳು ಅದನ್ನು ಶಾಂತಗೊಳಿಸುವ ಕೆಲಸ ಮಾಡುತ್ತ ಬಂದಿದ್ದಾರೆಅದರಲ್ಲೂ ಧಾರ್ಮಿಕ ಕ್ಷೇತ್ರಕ್ಕೆ ಸೇರಿದ ಮಹನೀಯರು ಎಲ್ಲಾ ರೀತಿಯ ಭಿನ್ನತೆಯನ್ನುವಿಂಗಡಣೆಯನ್ನು ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದರುಮನುಷ್ಯರೆಲ್ಲ ಒಂದೇಎಲ್ಲರೂ ಸಮಾನರು ಎಂದೇ ಸಾರಿದರುಗಂಡು-ಹೆಣ್ಣು ಎಂಬುದು ಕೇವಲ ದೈಹಿಕ ವ್ಯತ್ಯಾಸವೇ ಹೊರತು ಬೇರೇನಲ್ಲಎಲ್ಲರ ಮೈಯಲ್ಲಿ ಹರಿಯುವ ರಕ್ತ ಒಂದೇಹೀಗಿರುವಾಗವೃತ್ತಿ ಆಧರಿತಜಾತಿ ಆಧರಿತ ವ್ಯವಸ್ಥೆಗೆ ಏನು ಮನ್ನಣೆ ಎಂದು ಪ್ರಶ್ನಿಸಿದರುಬುದ್ಧನಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್‌ವರೆಗೆ ಮಹನೀಯರು ಹೇಳಿದ್ದು ಸಮಾಜದ ಮೂಲತತ್ವವನ್ನೇ.

ಹನ್ನೆರಡನೇ ಶತಮಾನದ ಸಮಾನತಾವಾದಿ ಬಸವಣ್ಣನವರ ವಚನವೊಂದು ಇದೇ ಆಶಯವನ್ನು ಪುನರ್‌ಸ್ಥಾಪಿಸಲು ಬಯಸಿರುವುದು ಸ್ಪಷ್ಟ.

ಕಾಸಿ ಕಮ್ಮಾರನಾದಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದವೇದವನೋದಿ ಹಾರುವನಾದ

ಎಂದರು ಬಸವಣ್ಣ.

ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ

ಎನ್ನುವ ಮೂಲಕಸಮಾನತೆಯೇ ಸಮಾಜದ ಮೂಲ ತತ್ವ ಎಂಬುದನ್ನು ಬಿಂಬಿಸಿದರು.
ಆದರೆಸಾವಿರಾರು ವರ್ಷಗಳ ಕಾಲ ಬೆಳೆದು ಬಲಿತ ವ್ಯವಸ್ಥೆಯನ್ನು ಸೀಮಿತ ಕಾಲಘಟ್ಟದಲ್ಲಿ ನಿವಾರಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ.ಸಮಾನತೆಯೇ ಸಮಾಜದ ಮೂಲ ಎಂಬುದು ಎಷ್ಟು ನಿಜವೂಈಗ ವಿಘಟಿತವಾಗಿರುವ ಸಮಾಜ ಮತ್ತೆ ಸಮಾನತೆಯನ್ನು ಆದರ್ಶವಾಗಿ ಹೊಂದುವಂತೆ ಮಾಡುವುದೂ ಸುಲಭವಲ್ಲ ಎಂಬುದೂ ಅಷ್ಟೇ ಸತ್ಯಹೀಗಾಗಿಅನ್ಯಾಯಕ್ಕೆ ಒಳಗಾದ ಜಾತಿಗಳ ಜನರಿಗೆ ಮೀಸಲಾತಿ ಮೂಲಕ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಸ್ವಾತಂತ್ರ್ಯಾನಂತರ ಜಾರಿಗೊಳಿಸಲಾಯಿತುದುರ್ಬಲ ಮಗುವಿಗೆ ತಾಯಿ ಹೆಚ್ಚು ಕಾಳಜಿ ತೋರುವಂತೆ,ಸರ್ಕಾರ ತನ್ನ ದುರ್ಬಲ ಜಾತಿಗಳ ಜನರಿಗೆ ಹೆಚ್ಚು ಕಾಳಜಿ ತೋರುವ ಮೂಲಕಸಾಧ್ಯವಾದಷ್ಟೂ ಬೇಗ ಅವರನ್ನು ಸಮಾಜದೊಂದಿಗೆ ಸಮೀಕರಿಸಲು ಮುಂದಾಯಿತು.

ಆ ಪ್ರಯೋಗ ಇನ್ನೂ ಮುಗಿದಿಲ್ಲಸಾವಿರಾರು ವರ್ಷಗಳ ಕಾಲ ಬಲಿತುಕೊಂಡು ಬಂದಿರುವ ವ್ಯವಸ್ಥೆಯನ್ನು ಕೆಲವೇ ದಶಕಗಳ ಸೀಮಿತ ಮೀಸಲಾತಿ ಪ್ರೋತ್ಸಾಹ ಬದಲಿಸಲು ಸಾಧ್ಯವಿಲ್ಲಆದರೆಮೀಸಲಾತಿ ಒಂದಷ್ಟು ನಿರೀಕ್ಷಿತ ಬದಲಾವಣೆಗಳನ್ನು ತರಲು ಸಫಲವಾಯಿತುದಮನಕ್ಕೊಳಗಾದ ಜನರಲ್ಲಿ ಅದು ಆತ್ಮವಿಶ್ವಾಸ ತಂದಿತುಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿತುಆ ಅವಕಾಶಗಳು ತಂದ ಆತ್ಮವಿಶ್ವಾಸದಿಂದ ಅವರು ಜಾತಿ,ವೃತ್ತಿಯ ಕೀಳರಿಮೆಯಿಂದ ಹೊರಬರಲು ಸಾಧ್ಯವಾಗತೊಡಗಿತುತಮ್ಮ ವೃತ್ತಿಜಾತಿಯ ಗುಣಲಕ್ಷಣಗಳನ್ನುಆಚರಣೆ-ಅಭ್ಯಾಸಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ಆಚರಿಸಲು ಅವರು ಮುಂದಾಗತೊಡಗಿದರು.

ಆದರೆಪ್ರತಿಯೊಂದು ಪ್ರಯೋಗವೂ ಪ್ರತಿರೋಧವಿಲ್ಲದೇ ಮುಂದುವರಿಯಲಾರದುದಮನಕ್ಕೊಳಗಾಗಿದ್ದ ಜನರ ಹೊಸ ಆತ್ಮವಿಶ್ವಾಸಅವರು ಎಲ್ಲ ರಂಗಗಳಲ್ಲಿ ಕಾಣಿಸಿಕೊಳ್ಳುವುದನ್ನು ಸಂಪ್ರದಾಯಸ್ಥ ಮನಸ್ಸುಗಳು ಸುಲಭಕ್ಕೆ ಒಪ್ಪಿಕೊಳ್ಳಲಿಲ್ಲ. ಮೇಲ್ನೋಟಕ್ಕೆ ಕಾಣದಂತಿದ್ದರೂಆಂತರ್ಯದಲ್ಲಿ ಬದಲಾದ ಪರಿಸ್ಥಿತಿ ಸಂಘರ್ಷಮಯ ಮನಃಸ್ಥಿತಿಯನ್ನು ನಿರ್ಮಿಸಿದೆ. ಅವಕಾಶ ಸಿಕ್ಕಾಗೆಲ್ಲ ಅಸಮಾಧಾನ ಎಂಬುದು ದಾವಾನಿಲದಂತೆ ಸ್ಫೋಟಗೊಳ್ಳುತ್ತದೆ. ತೀವ್ರತೆ ಕಡಿಮೆಯಾದ ಕೂಡಲೇ ಮತ್ತೆ ಹಿನ್ನೆಲೆಗೆ ಸರಿಯುತ್ತದೆ. ಸಾಮಾಜಿಕ ಸಂಘರ್ಷ ಆಗಾಗ ಉಲ್ಬಣಿಸುವುದು ಈ ಕಾರಣಕ್ಕಾಗಿ.

ಇದೆಲ್ಲ ಏನನ್ನು ಸೂಚಿಸುತ್ತದೆ?
ನಮ್ಮ ಸಮಾಜ ಸಮಾನತೆ ಬಯಸುತ್ತಿದ್ದರೂಅದನ್ನು ಸಾಧಿಸಲು ಸಂಘರ್ಷವನ್ನೂ ಎದುರಿಸಬೇಕಿದೆಇದೊಂದು ನಿಧಾನದ ಮತ್ತು ನಿರಂತರ ಪ್ರಕ್ರಿಯೆಸಾಮಾಜಿಕ ಸಮಾನತೆ ಎಂಬುದು ಒಂದು ಆದರ್ಶಅದೊಂದು ನಿಧಾನ ಪ್ರಕ್ರಿಯೆಸಮಾಜದಲ್ಲಿ ಈಗಲೂ ತೀವ್ರ ಒಡಕುಗಳಿವೆಆದರೆ,ಹಿಂದಿನ ಕಾಲದ ದಬ್ಬಾಳಿಕೆ ಈಗ ನಡೆಯದುಆಗ ನೇರವಾಗಿದ್ದ ದಬ್ಬಾಳಿಕೆ ಈಗ ಪರೋಕ್ಷವಾಗಿ ವ್ಯಕ್ತವಾಗುತ್ತ್ತಿದೆ.

ಇನ್ನುಸಮಾನತೆ ತರುವ ಉದ್ದೇಶ ಹೊಂದಿದ್ದರೂಜಾತಿ ಆಧರಿತ ಮೀಸಲಾತಿ ಹೊಸ ರೀತಿಯ ಸ್ಪರ್ಧೆಯನ್ನು ಉಂಟು ಮಾಡಿದೆಪ್ರತಿಯೊಬ್ಬರೂ ಮೀಸಲಾತಿಯ ಸೌಲಭ್ಯ ಪಡೆಯಲು ಯತ್ನಿಸುತ್ತಿದ್ದಾರೆರಾಜಕೀಯ ಉದ್ದೇಶಗಳಿಗಾಗಿ ಹುಟ್ಟಿಕೊಂಡ ಇಂಥ ಎಷ್ಟೋ ಪ್ರಯತ್ನಗಳು ಅಂತಿಮವಾಗಿ ಸಮಾಜವನ್ನು ಮತ್ತೆ ಮತ್ತೆ ಒಡೆಯುತ್ತಲೇ ಇದೆಆರ್ಥಿಕ ಅಸಮಾನತೆ ಹೊಸ ಸಂತ್ರಸ್ತರನ್ನು ಹುಟ್ಟುಹಾಕಿದೆಈ ಪೈಕಿ ಎಲ್ಲಾ ವರ್ಗದಎಲ್ಲಾ ಜಾತಿಯ ಜನರೂ ಇದ್ದಾರೆಹಳೆಯ ಜಾತಿ ವ್ಯವಸ್ಥೆ ವೇಗವಾಗಿ ಬದಲಾಗುತ್ತಿರುವುದನ್ನು ಸಹಿಸದ ಮನಸ್ಸುಗಳಿಂದಾಗಿ ಆಗಾಗ ಸಂಘರ್ಷದ ಪರಿಸ್ಥಿತಿ ಉಂಟಾಗುತ್ತಿದೆಹೆಚ್ಚೆಚ್ಚು ಸಮಾನವಾಗುತ್ತಿರುವ ಸಾಮಾಜಿಕ ಪರಿಸ್ಥಿತಿ ಇಂಥ ಘಟನೆಗಳಿಂದಾಗಿ ಆಗಾಗ ಮಂಕಾಗುತ್ತದೆಅಭಿವೃದ್ಧಿ ನಿಧಾನವಾಗುತ್ತದೆ.

ಸಮಾಜವೊಂದು ವಿಕಾಸಗೊಳ್ಳುವ ಪ್ರಕ್ರಿಯೆಯಲ್ಲಿ ಇಂಥ ಹಲವಾರು ಹಂತಗಳು ಬರುತ್ತವೆಅಂತಿಮವಾಗಿ ಸಮಾನತೆಯೇ ಎಲ್ಲಾ ವಿಕಾಸ ಪ್ರಯತ್ನಗಳ ಗುರಿಅದು ಈಡೇರುವವರೆಗೂ ಸಂಘರ್ಷಗಳು ಇದ್ದೇ ಇರುತ್ತವೆಸವಾಲುಗಳು ಬಂದೇ ಬರುತ್ತವೆಎಷ್ಟೋ ಸಲ ಈ ಪ್ರಯತ್ನಗಳೆಲ್ಲ ನಿಷ್ಫಲ ಎನಿಸಿದರೂಪರೋಕ್ಷವಾಗಿ ಅವು ಸಮಾನತೆಯ ಉದ್ದೇಶದ ಸಾಕಾರಕ್ಕಾಗಿ ಕೆಲಸ ಮಾಡುತ್ತಿರುತ್ತವೆಚಳಿಗಾಲದಲ್ಲಿ ಎಲೆಗಳುದುರಿದ್ದರೂ ಬೇರುಗಳು ಜೀವಂತವಾಗಿರುವಂತೆಸಮಾನತೆಯ ಉದ್ದೇಶದಿಂದ ಹುಟ್ಟಿ ಬೆಳೆದ ಸಮಾಜ ತನ್ನ ಮೂಲಗುಣವನ್ನು ಬಿಟ್ಟುಕೊಡುವುದಿಲ್ಲ.

ಹೀಗಾಗಿ ಸಾಮಾಜಿಕ ಸಮಾನತೆ ಎಂಬುದೊಂದು ನಿರಂತರ ಪ್ರಕ್ರಿಯೆಸದಾ ನಡೆಸುವ ಪ್ರಯತ್ನ.

-ಶ್ರೀದೇವಿ ಕಳಸದ

(ಬೆಂಗಳೂರು ಆಕಾಶವಾಣಿಯಲ್ಲಿ 24-11-2015 ರಂದು ಬೆಳಗ್ಗೆ 9.5ಕ್ಕೆ ಪ್ರಸಾರವಾದ ಭಾಷಣ)

ಬೆಳಕ ಕುಡಿಕೆ

ಒಡಲ ಹಿಡಿದ ಒಡ್ಡು
ಸೆಳವಿಗೆ ಹೊಡೆದ ಸೆಡ್ಡು
ಬೆಳಕಿನಾಟಕೆ ಸೆಳಕಿನೋಟಕೆ
ಮೈಯೆಲ್ಲ ಟಿಸಿಲು
ಹಸಿಯಿರುವ ತನಕ ಹಸಿರೆ
ಸೊಪ್ಪೂ

ಸಮಸಮಾಂತರ ಕೋಣೆಯೊಳಗೆ
ಚಿಲಕವಿಲ್ಲದ ಬಾಗಿಲ ತೆಕ್ಕೆಗೊಂದರಂತೆ
ನೆತ್ತಿಯಂಟಿಸಿಕೊಂಡ ಕೂಸುಗಳು
ಹಳದಿಗಟ್ಟುವ ತನಕ
ಹೊಟ್ಟೆಬಿರಿಯುವ ದಿನಕ
ಬೇಳೆಗಳು ಕಾಳೇ

ಬೇರು ಕಿತ್ತರೂ ಬೀಗಿದ್ದು
ಸೀಳಿದರೂ ಬಿರುಸು ಕಳೆಯದ್ದು
ಮೆತ್ತಗಾಗಲೇಬೇಕು
ಕಾವಿಗೂ ಕಿಚ್ಚಿಗೂ

ಸಿಡಿಯದಿರೆ ಸಾಸಿವೆಯಲ್ಲ
ಕರಗದಿರೆ ಉಪ್ಪಲ್ಲ
ಖಾರವಡಗಿದ್ದು ಮೆಣಸೇ ಅಲ್ಲ
ಎಲ್ಲವೂ ಅಲ್ಲವಾದರೆ ಯಾವುದಿಲ್ಲಿ ಹೌದು?
ಅದೇ ಆ ಕತ್ತಲಮೂಲೆಯೊ..ಳ..ಗಿ..ನ..ವು
ಚಿವುಟಿಸಿಕೊಂಡ ಹಳದಿ ಕೈಗಳು
ತಿವಿಸಿಕೊಂಡ ಹುಳುಕು ಮುಖಗಳು

ಮೂಲೆಯೆಂದರಿಲ್ಲಿ;
ಹಸಿರಬಯಕೆಯ ಹೊದಿಕೆ
ಮೊಳಕೆ ಪೊರೆಯುವ ಮಡಿಕೆ
ಹುಸಿಬೀಳದ ಸೆರೆಯಾಗದ ಬೆಳಕಕುಡಿಕೆ

ಒಲೆ ಸುಮ್ಮನಾಗುತ್ತದೆ

ಸುಮ್ಮನಾಗುತ್ತದೆ ಎಂದರಿಲ್ಲಿ;
ಮುಚ್ಚಳಕ್ಕೆ ನೀರಮಣಿಗಳಂಟಿವೆ


-ಶ್ರೀದೇವಿ ಕಳಸದ

Tuesday, November 17, 2015

ಅವಳು ಮೆಲ್ಲನೆ ಎಳೆದಳು ಕಿಟಕಿ ಪರದೆ'ಅನ್ನೆರಡಕ್ಕೇ ಮದ್ವೆ ಮಾಡಿದ್ ನನ್ನಮ್ಮ. ನನ್ನಪ್ಪ ಕುಡುಕ ಆಗ್ದಿದ್ರೆ ನಾ ಎಸ್ಸೆಸ್ಸೆಲ್ಸಿಗಂಟ ಓದ್ಬೋದಿತ್ತಾ? ಅದ್ನೈದ್ ಸಾವ್ರಾ ಗಳಸ್ಬೋದಿತ್ತಾ? ಏಳ್ನೇ ಕ್ಲಾಸ್ಗೇ ಬುಡಿಸ್ಬುಟ್ರು. ಈಗ ನನ್ನೆರ್ಡೂ ಮಕ್ಕಳ ಜತೆನಾಗ್ ಒಂಟ್ರೆ ನಮ್ಮೂರಲ್ಲಿ... ನಿಮ್ ತಮ್ಮ ತಂಗೀನಾ ಅಂತ ಕೇಳ್ತಾರೆ ಜನ' ಹೀಗಂತ ಆಕೆ ತುಸುಕೋಪದಲ್ಲೇ ಹೇಳಿದ್ರೂ ಪಾತ್ರೆಗಳು ಶಬ್ದ ಮಾಡಲಿಲ್ಲ, ದನಿ ಏರಲಿಲ್ಲ.

ತಿಂಗಳ ಹಿಂದೆಯಷ್ಟೇ ತಾನಾಗೇ ಮನೆಗೆಲಸ ಕೇಳಿಕೊಂಡು ಬಂದ ಈ ಸಂಗೀತಾ ತಮಿಳು ಮೂಲದವಳು. ಯಾರೋ ಹೇಳಿದ್ರು ನಿಮಗೆ ಕೆಲಸದವ್ರು ಬೇಕಂತ ಅದ್ಕೆ ಬಂದೆ ಅಂದ್ಲು. ಅವಳ ಮಾತು, ಕಣ್ಣಲ್ಲಿ ಕಪಟತನ ಕಾಣಲೇ ಇಲ್ಲ. ಆದ್ರೂ ಅಳುಕಿನಿಂದಲೇ ಆಯ್ತು ಎಂದೆ. ಕೊನೆಗೆ, ಅಷ್ಟಕ್ಕೂ ಏನಪ್ಪಾ ಆಗುತ್ತೆ ಜೀವನದಲ್ಲಿ? ಬಹಳ ಅಂದ್ರೆ ವಸ್ತುಗಳನ್ನೋ ಹಣವನ್ನೋ ಕದ್ದಾರು ಅಷ್ಟೇ ತಾನೆ? ಈ ಹಿಂದಿದ್ದ ಕೆಲಸದವಳಿಗೆ ಕದಿಯೋ ಚಟವಿತ್ತಲ್ಲ ಅದಕ್ಕೆ ಈ ಸಲ ಹೀಗೆ ನನ್ನ ಅಳುಕಿಗೆ ತಲೆ ನೇವರಿಸಿದೆ.

ಬಹಳ ಕಾಳಜಿಯಿಂದ ಸಮಾಧಾನದಿಂದ ಅಚ್ಚುಕಟ್ಟಾಗಿ ಕೆಲಸ ಮಾಡುವ ಸಂಗೀತಾಗೆ ಈಗಿನ್ನೂ ಇಪ್ಪತ್ತೇಳು. ಎರಡನೇ ಮಗುವಾದಾಗ ಅಮ್ಮ ಮನೆಯಲ್ಲಿರದ ಸಮಯ ನೋಡಿ, ಮಗುವನ್ನು ಪಕ್ಕದಮನೆಯವರಿಗೆ ಒಪ್ಪಿಸಿ ಅವರಿಗಷ್ಟೇ ಅಸಲಿ ವಿಷಯ ತಿಳಿಸಿ ಆಸ್ಪತ್ರೆಗೆ ಹೋಗಿದ್ದಳಂತೆ. 'ಡಾಕಟ್ರು ಕೇಳಿದ್ರು ಒಬ್ಳೇ ಬಂದಿದೀಯಾ, ಗಂಡನ ಒಪ್ಗೆ ಇಲ್ದೆ ಆಪ್ರೇಸನ್ ಮಾಡಾಕಿಲ್ಲ ಅಂತ. ಬೇರೆ ದೇಸಕ್ ಓಗವ್ರೆ, ಎಲ್ಡ್ ಮಕ್ಳು ಸಾಕು ಅಂತ ಕೇಳ್ಕಂಡೆ. ಕರೆಂಟ್ ಆಪ್ರೇಸನ್ ಮಾಡಿದ್ರು. ಮಲಗಿದ್ನಾ ಆಸ್ಪತ್ರೇಲಿ? ನಮ್ ಅಮ್ಮ ಸಂಬಂಧಿಕರ್ನಾ ಕರ್ಕಂಬಂದು ಸತ್ತೇ ಹೋದ್ನೇನೋ ಅನ್ನೋರ್ ಹಾಗೆ ಆಡಾಡ್ಕೊಂಡ್ ಅತ್ಲು. ಇನ್ನೊಂದೆರಡು ಮಕ್ಕಳಾಗ್ಬೇಕಿತ್ತಲ್ಲೇ ಅಂತ. ಗಂಡ ಮೂರ್ತಿಂಗಳು ಮಗಿನ್ನೂ ನೋಡಕ್ ಬಂದಿರ್ಲಿಲ್ಲ!' ಏನೋ ಸಾಧಿಸಿದೆ ಎಂಬ ಅಹಂ ಕಿಂಚಿತ್ತೂ ಅವಳ ಮುಖದಲ್ಲಿರಲಿಲ್ಲ. ಕೇವಲ ಮುಗುಳ್ನಗು.

ಪ್ರತೀದಿನ ಮಗಳು ಸ್ಕೂಲಿಗೆ ಅಂತ ಅಪ್ಪನ ಗಾಡಿ ಏರಿದ ಕೂಡಲೇ ನನ್ನನ್ನೊಮ್ಮೆ ಅಪ್ಪಿ ತಕ್ಷಣವೇ ಗ್ಯಾಲರಿಯೆಡೆ ಕಣ್ಣಾಡಿಸುತ್ತಾಳೆ. ಆಗ ಸಂಗೀತಾ, ಮಾಡುವ ಕೆಲಸ ಬಿಟ್ಟು ಟಾಟಾ ಹೇಳಲು ಬಂದು ನಿಂತಿರುತ್ತಾಳೆ. ಸ್ಕೂಲಿನಿಂದ ಬಂದಮೇಲೆ ಮಗಳು ಕೇಳುವುದೇ ಆಂಟಿ ಎಲ್ಲಿ? ಆದರೀಗ ಸಂಗೀತಾ ಹೊಸ ರಾಗ ಶುರು ಮಾಡಿದ್ದಾಳೆ ನಾಲ್ಕು ದಿನಗಳಿಂದ, 'ಉಳ್ಳಾಲದಲ್ಲೊಂದ್ ಶೀಟ್ ಮನೆ ತಗಂಡಿದ್ದೀವಿ. ಅಲ್ಗೇ ಓಗೋಣ ಅಂತಿದಾರೆ ಮನೇಲಿ. ನಂಗ್ ಈಗ ಮಾಡ್ತಿರೋ ಕೆಲ್ಸದ್ ಮನೆಗೋಳ್ ಬಿಟ್ ಹೋಗಕ್ ಇಷ್ಟ ಇಲ್ಲ. ದಿನಾ ನೀ ಗಾಡಿ ಮೇಲೆ ಬುಡು ನಾ ವಾಪಸ್ ಬತ್ತೀನಿ ಅಂದೆ ಗಂಡನಿಗೆ,  ಆಗಲ್ಲ ಅಲ್ಲೇ ಕೆಲ್ಸಾ ಉಡ್ಕೋವಂತೆ ಅಂದ್ರು. ನಾ ಬರಾಕಿಲ್ಲ ಅಂತಿದೀನಿ' ಅಂತ.

'ನಾನೇನೂ ಮನೆಕೆಲ್ಸಾ ಮಾಡ್ದವ್ಳಲ್ಲ. ಮಕ್ಕಳ್ನಾ ಅಮ್ಮನ ಅತ್ರ ಬುಟ್ಟಿವ್ನಿ ತಮಿಳಲ್ಲೇ ಓದ್ಲಿ ಅಂತ. ಮತ್ತೆ ಅಲ್ ಅಮ್ಮ ಒಬ್ರೇ, ಅವ್ರಿಗೊಬ್ಳೇ ಮಗ್ಳು ನಾ. ನಮ್ಮಪ್ಪ ಕುಡುಕ ಇದ್ದಿದ್ಕೆ ಇನ್ನೊಂದ್ ಮಗು ಮಾಡ್ಕಲಿಲ್ಲ ಅಮ್ಮ. ಮತ್ತೀಗ ಮಗಳು ಮೈನೆರೆದ್ಲಲ್ಲ ಹೋದವರ್ಸಾ ಆಗ ನೂರೈವತ್ ಗ್ರಾಮ್ ಒಡ್ವೆ ಮಾಡ್ಸಿಟ್ವಿ ಮುಂದೆ ಮದ್ವೆಗೆ ಅಂತ. ಆಮ್ಯಾಲೆ ಶೀಟ್ ಮನೆ ಬೇರೆ ತಗಂಡ್ವಾ? ಸಾಲ ತೀರಸ್ಬೇಕಲ್ಲ. ನನ್ ಗಂಡ ಯಾವಾಗ್ಲೂ ಯೋಳೋದು, ವಿಶ್ವಾಸದಿಂದ ಕೆಲ್ಸಾ ಮಾಡ್ಬಾ ಅಂತ. ನಾನೇನ್ ಚಿಕ್ಮಗೂನಾ? ಅಂತ ಕೇಳ್ತೀನಿ' ಅವಳು ನಕ್ಕಾಗ ಕಣ್ಣು ಪುಟ್ಟ ಮೀನುಗಳಾಗಿದ್ದವು.

ನಿಮ್ಮೂರ್ಕಡೆ ಸೈಕಲ್ ಓಡಿಸ್ತಾರಲ್ವಾ ಹೆಣ್ಮಕ್ಳು ಅಂದೆ ಈವತ್ತು. ಸೈಕಲ್ ಕಲಿಯೋದು ಅಂದೆ ತಮಾಷೆಗೆ. 'ಅಯ್ಯ ನಮ್ಮನೆಕಡೆ ಗಾಡಿನೇ ಓಡಿಸ್ತವ್ರೆ ಅಕ್ಕಾ. 'ನಮ್ ಮನೆ ಕಡೆ ಸ್ಕೂಟಿ ಮೇಲೇನೇ ಕೆಲ್ಸಕ್ ಓಯ್ತಾವ್ರೇ ನಾಲ್ಕೈದ್ ಜನ, ಇವ್ರೆಲ್ಲಪ್ಪ ಇಷ್ಟ್ ನೀಟ್ ರೆಡಿ ಆಗಿ ಯಾವ್ ಆಪೀಸಿಗ್ ಓಗ್ತವ್ರೆ ಅನ್ಕತಿದ್ದೆ. ಒಮ್ಮೆ ಕೇಳೇಬುಟ್ಟೆ. ಎಲ್ಲಾ ಅದದೇ ಕೆಲ್ಸಕ್ ಓಗ್ತವ್ರಂತೆ; ಮನೆಕೆಲ್ಸಾ, ಅಡುಗೆ ಕೆಲ್ಸಾ, ಅಂಗಡಿ ಕ್ಲೀನು, ಕಾರ್ ಕ್ಲೀನು. ಕೆಲ್ಸಾ ಮುಗ್ಸಿ ಬಟ್ಟೆ ಬದ್ಲಾಯಿಸ್ಕಂಡ್ ಮಕಾ ತಳ್ಕೊಂಡ್ ಗಾಡಿ ಮ್ಯಾಲೆ ನೀಟ್ ಆಗಿ ಬತ್ತವ್ರೆ. ಮನೆಕೆಲ್ಸಕ್ ಓಗ್ತಿದಾರೆ ಅಂತ ವಸೀನೂ ಅನ್ಸಕಿಲ್ಲ...!
ಒಂದು ತಿಂಗಳಲ್ ಒಂದೂವರೆ ಸಾವ್ರಕ್ಕೆ ಎಣ್ಮಕ್ಳೇ ಕಲಿಸ್ಕೊಡ್ತಾರೆ ಗಾಡೀನಾ. ನಾನೇ ಹಣ ಕೊಟ್ಟು ಕಲೀತೀನಿ ಅಂತ ಯೋಳ್ಬೇಕ್ ಅನ್ಕಂಡೀವ್ನಿ ಗಂಡನಿಗೆ. ನನ್ ಗಂಡ ಸೆಕೆಂಡ್ ಹ್ಯಾಂಡ್ ಕೊಡಿಸ್ತಾರೆ ಗಾಡಿ, ಯಾಕೇಂದ್ರೆ ಎಂಟ್ಲೇ ಕ್ಲಾಸ್ ಓದ್ತಿರೋ ಮಗಳು ಈಗ್ಲೇ ಯೋಳಿದಾಳೆ ಕಾಲೇಜ್ಗೆ ಗಾಡಿ ಬೇಕೇಬೇಕು ಅಂತ… ಆಮ್ಯಾಲೆ ನನ್ ಗಂಡಾನೇ ಅಂದಿದಾರೆ, ನೋಡು ಅವ್ರೆಲ್ಲಾ ನೀಟ್ ಆಗಿ ಗಾಡಿ ಮೇಲೆ ಕೆಲ್ಸಕ್ ಓಗ್ತವ್ರೆ ನೀ ಎಂಗ್ ಓಗ್ತಿ ನೋಡು ಅಂತ. ಕಲಿಯೋದ್ ಒಂದ್ ಬಾಕಿ. ಈವತ್ತೇ ಕೇಳ್ತೀನಿ, ಆದ್ರೂ ಒಪ್ತಾರೋ ಇಲ್ವೋ' ತಿಂಡಿಪ್ಲೇಟ್ ಕೈಗೆತ್ತಿಕೊಂಡವಳೇ, ಬೆಳಕ್ ಸಾಲ್ದು ಅಂತ ಕಿಟಕಿ ಪರದೆ ಸರಿಸಿದಳು.

ನೀ ನಮ್ಮನೆ ಕೆಲ್ಸಾ ಬಿಟ್ರೆ ಮಗಳು ನಿನ್ನ ಕೇಳ್ತಾಳಲ್ಲ ಏನ್ ಮಾಡ್ಲಿ ಅಂದೆ ನಗ್ತಾ, ಖಾಲಿ ಬಾಕ್ಸ್ ಇಲ್ಲೇ ಇಟ್ಟಿರ್ತೀನಿ ಅಂತ ತನ್ನ ಚೀಲದಿಂದ ಡಬ್ಬಿ ತೆಗೆದು ಮೆಟ್ಟಿಲ ಮೇಲಿಡುತ್ತ ಹೌದಲ್ಲ ಎಂದು ಬೇಸರದಲ್ಲೇ ನಗುತ್ತ ಮೆಟ್ಟಿಲಿಳಿದಳು. ಈವತ್ತೂ ಚಪ್ಪಲಿ ಶಬ್ದ ಮಾಡಲಿಲ್ಲ.
====================

(ಫೋಟೋ ಹಿನ್ನೆಲೆ: ಮೊದಲ ದಿನ ಸ್ವರಳೊಂದಿಗೆ ಕುಳಿತು ತಿಂಡಿ ತಿನ್ನುವೆ ಎಂದು ಬಾಗಿಲಾಚೆ ಕುಳಿತಿದ್ದಳು. ತನ್ನ ಬಟ್ಟಲಿನಲ್ಲಿರುವ ಹಣ್ಣು ಸಂಗೀತಾಳ ತಟ್ಟೆಯಲ್ಲಿಲ್ಲ ಎಂದು ತಿಳಿದ ಸ್ವರ, 'ಅಮ್ಮ ಆಂಟಿ ಹಣ್ಣು ಹಾಕು' ಎಂದಿದ್ದಳು!
ನಾಳೆಯಿಂದ ನೀ ಒಳಗೇ ತಿಂಡಿ ತಿನ್ನಬೇಕು ನೋಡು ಎಂದಿದ್ದೆ. ಸಂಗೀತಾಳ ಸಂಕೋಚ ನಲ್ಲಿ ಕೆಳಗೆ ಜರ್ರನೇ ಇಳಿದು ಹೋಗಿತ್ತು :) )