ಕಪ್ಪು ಫಲಕದ ಮೇಲೆ
ಮಿನುಗು ಬಳಗ ಕೂರಿಸುತ್ತಿದ್ದಾನೆ ಅಪ್ಪ
ಆಕಾಶ ನೋಡುತ್ತ ಲೆಕ್ಕವಿಡುತ್ತಿದೆ ಮಗು
ರಸ್ತೆ ದಾಟುವಾಗಷ್ಟೇ ಹಿಡಿವ ಈ ಪುಟ್ಟ ಕೈ
ತನ್ನ ಶಾಶ್ವತ ಅಂಟಿಕೊಂಡಿದ್ದರೆ...
-ಕುಡಿಕೆಯ ಅರ್ಧಕ್ಕಿಳಿದ ಬಿಳಿಯಂಟಿಗೆ
ತನ್ನ ಬೆರಳ ನಿಲುಕಿಸಲು ಹವಣಿಸುತ್ತಿದ್ದಾನೆ ಅಂವ
ಇನ್ನೇನು ಅದು ಅಮರಿ ಪುಟ್ಟ ಬೆರಳಿಗೆ
ಅವನ ಬೆರಳು ಬೆಸೆಯಬೇಕು-
ಹಾರಿಬಂದೊಂದ ಬಾವಲಿ ಗೋಣುಚೆಲ್ಲುವ ಕುಡಿಕೆ
ಹರಿದ ಅಂಟಿಗೆ ಮೈಯೆಲ್ಲ ಕೈಕಾಲು...
ಈ ಕುಸಿತ ಕನಸಿದ ಕಪ್ಪುಆನೆಗಳಿಗೀಗ
ಕಡಿದು ಓಡಿದ್ದೇ ಕಸುವಿನ ಹಾದಿ
ಕರುಳ ಕಸಿವ ಈ ಹಾದಿಗೀಗ ಲಾಂಛನದ ಹಂಗಿಲ್ಲ
; ಬೆಸೆದುಕೊಂಡಿದ್ದಕ್ಕೆ ಸದಾ ನೆಲದ ವ್ಯಾಮೋಹ
ಹಾರುತ್ತ ಹೊಳೆಯುವುದಕ್ಕೆ ವ್ಯೋಮದ್ದೇ ಖ್ಯಾಲ
- ಶ್ರೀದೇವಿ ಕಳಸದ
ಮಿನುಗು ಬಳಗ ಕೂರಿಸುತ್ತಿದ್ದಾನೆ ಅಪ್ಪ
ಆಕಾಶ ನೋಡುತ್ತ ಲೆಕ್ಕವಿಡುತ್ತಿದೆ ಮಗು
ರಸ್ತೆ ದಾಟುವಾಗಷ್ಟೇ ಹಿಡಿವ ಈ ಪುಟ್ಟ ಕೈ
ತನ್ನ ಶಾಶ್ವತ ಅಂಟಿಕೊಂಡಿದ್ದರೆ...
-ಕುಡಿಕೆಯ ಅರ್ಧಕ್ಕಿಳಿದ ಬಿಳಿಯಂಟಿಗೆ
ತನ್ನ ಬೆರಳ ನಿಲುಕಿಸಲು ಹವಣಿಸುತ್ತಿದ್ದಾನೆ ಅಂವ
ಇನ್ನೇನು ಅದು ಅಮರಿ ಪುಟ್ಟ ಬೆರಳಿಗೆ
ಅವನ ಬೆರಳು ಬೆಸೆಯಬೇಕು-
ಹಾರಿಬಂದೊಂದ ಬಾವಲಿ ಗೋಣುಚೆಲ್ಲುವ ಕುಡಿಕೆ
ಹರಿದ ಅಂಟಿಗೆ ಮೈಯೆಲ್ಲ ಕೈಕಾಲು...
ಈ ಕುಸಿತ ಕನಸಿದ ಕಪ್ಪುಆನೆಗಳಿಗೀಗ
ಕಡಿದು ಓಡಿದ್ದೇ ಕಸುವಿನ ಹಾದಿ
ಕರುಳ ಕಸಿವ ಈ ಹಾದಿಗೀಗ ಲಾಂಛನದ ಹಂಗಿಲ್ಲ
; ಬೆಸೆದುಕೊಂಡಿದ್ದಕ್ಕೆ ಸದಾ ನೆಲದ ವ್ಯಾಮೋಹ
ಹಾರುತ್ತ ಹೊಳೆಯುವುದಕ್ಕೆ ವ್ಯೋಮದ್ದೇ ಖ್ಯಾಲ
- ಶ್ರೀದೇವಿ ಕಳಸದ