Thursday, January 11, 2018

ಗಂಧಾಪುರ ಫ್ಯಾಕ್ಟರಿ


‘ಚೆಂದಚಾಲಿನೂ ಬೇಕುಹಣಾನೂ ಬೇಕುಬಲಾನೂ ಬೇಕು ಬದಲಾವಣೆ ಅನ್ನೋದು ನಮ್ ನಮ್ ಮನೆಗಳಿಂದ್ಲೇ ಆಗಬೇಕುಮೊದಲು ನಾವು ಉದ್ಧಾರ ಆಗಬೇಕುಆಮೇಲೆ ಓಣಿ ಊರು ಕೇರಿಮುಂದಿನ ವರ್ಷದ ಹೊತ್ತಿಗೆ ನಾ ನನ್ನ ಮಗಳನ್ನ ರ್ಯಾಂಪ್ ಏರಿಸೇ ಏರಸ್ತೀನಿಯಾ ನನ ಮಗ ಅಡ್ಡ ಬಂದ್ರೂ ನಾ ಕೇಳಂಗಿಲ್ಲ…’

ಮಾಲಿಕಾ  ಕಮ್ಯೂನಿಟಿ ಹಾಲ್ ಗೆ ಕಾಲಿಟ್ಟಾಗಮೈ ಪಿಟಿಪಿಟಿ ಎನ್ನುವಂಥ ಟಾಪ್ ಮತ್ತು ಜೀನ್ಸ್  ಧರಿಸಿದ ನಲವತ್ತರ ಹೆಣ್ಣುಮಗಳೊಬ್ಬಳು ಟೇಬಲ್ ಕುಟ್ಟಿ ಕುಟ್ಟಿ ಇಡುತ್ತಿದ್ದಳುಏದುಸಿರು ಬರುತ್ತಿದ್ದರೂ  ಎಡೆಬಿಡದೇ ಮಾತನಾಡುತ್ತಿದ್ದ ಅವಳಿಗೆ ಪಕ್ಕದಲ್ಲಿ ಕುಳಿತ ಹೆಣ್ಣುಮಗಳೊಬ್ಬರು ಗ್ಲಾಸಿಗೆ ನೀರು ಬಗ್ಗಿಸಿ ಕೊಟ್ಟಳುಉಳಿದವರೆಲ್ಲರೂ ಬಿಟ್ಟ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರುಒಂದಿಬ್ಬರು ದಂಗಾಗಿ ಬಾಯಿಗೆ ದುಪಟ್ಟಾ ಅಡ್ಡ ಹಿಡಿದು ಕುಳಿತಿದ್ದರುಇನ್ನೊಂದಿಬ್ಬರು ಗೋಡೆಯನ್ನೋತಿರುಗುವ ಫ್ಯಾನನ್ನೋ ನೋಡುತ್ತ  ಕತ್ತಿಗೆ ವ್ಯಾಯಾಮ ಕೊಡುತ್ತಿದ್ದರುಮಾಲಿಕಾ ದೂರದಲ್ಲಿ ಕುರ್ಚಿಯೊಂದರ ಮೇಲೆ ಕುಳಿತಿದ್ದನ್ನು ಗಮನಿಸಿದ  ಹೆಣ್ಣುಮಗಳು ಟೇಬಲ್ ಕುಟ್ಟುವುದನ್ನು ನಿಲ್ಲಿಸಿಮುಂದೆ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದಳುಪರವಾಗಿಲ್ಲ ಎಂಬಂತೆ ಮಾಲಿಕಾ ಕುಳಿತಲ್ಲಿಂದಲೇ ಮರುಸನ್ನೆ ಮಾಡಿದಳುಹಾಂ ನೀವೇವೋ ಡಿಸೈನ್ ಮಾಡ್ತೀರಂತೆನನ್ ಮಗಳ ಕಾಸ್ಟ್ಯೂಮ್ ನೀವೇ ಮಾಡಿಕೊಡೋದು ಮತ್ತೆಈಗ್ಲೇ ಹೇಳಿದೀನಿ ಎಂದು ಹಕ್ಕಿನಿಂದ ಹೇಳಿಬಿಟ್ಟಳುಸದ್ಯ ಟೇಬಲ್ ಕುಟ್ಟಲಿಲ್ಲಮಾಲಿಕಾ ಮುಟ್ಟಿಗೆ ಬಿಗಿ ಮಾಡಿಕೊಂಡವಳೇಮುಖದ ಮೇಲೆ ನಗು ತಂದುಕೊಳ್ಳುತ್ತಲೇ ಏನೋ ನೆಪ ಹೇಳಿ  ಮೀಟಿಂಗ್ನಿಂದ ಎದ್ದುಬಂದು ಮನೆ ಸೇರಿಬಿಟ್ಟಿದ್ದಳು.    

 ಏರಿಯಾಗೆ ಮಾಲಿಕಾ ಬಂದು ವರ್ಷವಾದರೂ ಕಾಲೊನಿಯ  ಲೇಡೀಸ್ ಟೀಮ್ ಸೇರಿಲ್ಲ ಎಂಬ ಆರೋಪ ಆಗಾಗ ಕೇಳಿಬರುತ್ತಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲಕಾಲೊನಿಯಲ್ಲಿ ವಾಸವಾಗಿದ್ದೀವಿ ಎಂದ ಮಾತ್ರಕ್ಕೆ ನಮಗೆ ಆಸಕ್ತಿ ಇಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕೆಂಬ ನಿಯಮವಿಲ್ಲಸದಸ್ಯರಾಗಬೇಕಾಸರಿ ಇಷ್ಟು ಹಣ ತೆಗೆದುಕೊಳ್ಳಿ ರಸೀತಿ ಹರಿದು ಕೊಡಿಆದರೆ ಬೇರೆ ಯಾವ ಚಟುವಟಿಕೆಗಳಿಗೂ ಒತ್ತಾಯಿಸುವ ಹಾಗಿಲ್ಲವಷ್ಟೇ ಎನ್ನುವುದು ಅವಳ ಇರಾದೆ.. ಅಷ್ಟಕ್ಕೂ ತನಗಿರುವ ಡೆಡ್ಲೈನ್ ವರ್ಕ್‍ಗಳಲ್ಲಿ ಇಂಥವಕ್ಕೆಲ್ಲ ಸಮಯವೂ ಇರುವುದಿಲ್ಲಒಂದು ಕಾಲು ಮನೆಯೊಳಗಿದ್ದರೆ ಇನ್ನೊಂದು ಸದಾ ಹೊರಗಿರುತ್ತದೆಆದರೆಮೊನ್ನೆ ಶುಕ್ರವಾರ ಒಂದಿಬ್ಬರು ಹೆಣ್ಣುಮಕ್ಕಳು ಮನೆತನಕ ಬಂದು ಖುದ್ದಾಗಿ ಕರೆದು ನಾಳಿನ ಮೀಟಿಂಗ್ ಅಟೆಂಡ್ ಮಾಡಲೇಬೇಕೆಂದು ಕೇಳಿಕೊಂಡಾಗ ಅವರ ಕರೆಗೆ ಇಲ್ಲವೆನ್ನಲಾಗದೆ ಮಾಲಿಕಾ  ತಲೆನೋವು ತಂದುಕೊಂಡಿದ್ದಳು.
ಅದೇ ಇಲ್ಲಆಗಲ್ಲ, ಗೊತ್ತಿಲ್ಲ ಎಂದು ಖಂಡತುಂಡವಾಗಿ ಹೇಳುವುದನ್ನು ಕಲಿತಿದ್ದರೆ ಹೀಗೆ ತಲೆನೋವು ಬರಿಸಿಕೊಳ್ಳುವುದು ತಪ್ಪುತ್ತಿತ್ತೇನೋಇದುವರೆಗೂ ಹೀಗೆ ಇಲ್ಲವೆನ್ನುವುದನ್ನು ಕಲಿಯಲಾರದ್ದಕ್ಕೇ ಇಷ್ಟೆಲ್ಲ ಆಗಿದ್ದು ತಾನೆಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತ ಮಲಗಲು ಯತ್ನಿಸಿದಷ್ಟೂ  ಟೇಬಲ್ ಕುಟ್ಟಿ ಕುಟ್ಟಿ ಮಾತನಾಡುತ್ತಿದ್ದ ಹೆಣ್ಣುಮಗಳು ಮತ್ತು ಆಕೆಯ ಮಾತುಗಳು ಕಾಡಿಕಾಡಿಡುತ್ತಿದ್ದವುರಾತ್ರಿ ಸಾರಂಗ್ ಅದೆಷ್ಟೊತ್ತಿಗೆ ಬಂದು ಮಲಗಿದ್ದನೋ ಗೊತ್ತಿಲ್ಲಮಧ್ಯರಾತ್ರಿ ಎಚ್ಚರವಾದಾಗಲೇ ತಾನು ಊಟ ಮಾಡದಿರುವುದು ಆಕೆಗೆ ಅರಿವಾಗಿದ್ದುಎದ್ದೇಳಲೂ ಆಗದೆನಿದ್ದೆಯಲ್ಲಿದ್ದ ಅವನ ಎಡಗೈ ಎತ್ತಿಕೊಂಡು ತನ್ನ ಹಣೆಯ ಮೇಲಿಟ್ಟುಕೊಂಡಿದ್ದಳುಮಲಗಿದನೆಂದರೆ ಸತ್ತಂತೇ ಎಂದು ನಿದ್ರಿಸುವ ಸಾರಂಗನಿಗೆ ಇದ್ಯಾವುದೂ ಅರಿವಿರಲಿಲ್ಲಯಾರಾದರೂ ಸ್ವಲ್ಪ ಹೊತ್ತು ತಲೆ ಒತ್ತಿದರೆ ಸಾಕು ಎಂಬಂತೆ ಒದ್ದಾಡಿ ಹೋಗಿದ್ದಳು ಮಾಲಿಕಾ.

ಬೆಳಗಿನ ಐದಕ್ಕೆ ಇನ್ನೇನು ಜೋಂಪು ಹತ್ತಬೇಕುಸಾರಂಗ್ ಹಾಲಿನಲ್ಲಿ ಟಿವಿ ಹಾಕಿಕೊಂಡು ಜೋರಾಗಿ ವಾಲ್ಯೂಮ್ ಕೊಟ್ಟು ಕುಳಿತಿದ್ದಒಂದಲ್ಲ ಎರಡಲ್ಲ ಸತತ ಹದಿನಾಲ್ಕು ವರ್ಷದಿಂದಲೂ ಇದು ಹೀಗೇಈಗ ಹೇಳಿದರೆ ಟಿವಿ ಬಾಯಿ ಬಂದ್ ಆದೀತೇಎಂದುಕೊಂಡು ತಾನೂ ಎದ್ದು ಅಂಗಳದ ಆರಾಮ್ ಚೇಯರಿನಲ್ಲಿ ಕುಳಿತಳುಚಳಿಯಲ್ಲೂ  ಹೊರಗಿನ ಗಾಳಿ ಹಾಯೆನಿಸಿತ್ತುಹೂತಲ್ಲೇ ಹುಗಿದುಕೊಂಡು ಒಂಟಿಕಾಲಲ್ಲಿ ನಿಂತು ಓಣಿಗೆ ಹಳದಿಬೆಳಕ ಹಾಸುವ ಲೈಟುಕಂಬಪೇಪರ್-ಹಾಲಿನ ಹುಡುಗರ ಟ್ರಿಣ್ ಟ್ರಿಣ್ಹೋಳುಮಗ್ಗಲು ಮಲಗಿದ ಮಗುವಿನಂತೆ ಕಂಡ ತನ್ನದೇ ಟೂ ವ್ಹೀಲರ್ಪಕ್ಕದ ಮನೆಯ ಹಿತ್ತಲಿನಿಂದ ಸುತಿಹಿಡಿದ ನಲ್ಲಿಯ ಲಯಡಬಡಬ ಪಾತ್ರೆಗಳ ಮಧ್ಯೆಯೂ ಎಲ್ಲಾ ಹಿತವೇ ಎನ್ನಿಸುತ್ತಿತ್ತು, ಸಾರಂಗ್ ಐದೇ ನಿಮಿಷಕ್ಕೆ ಆಕೆ ಪಕ್ಕ ಬಂದು ನಿಲ್ಲುವತನಕ.

'’ ಹೊಗೆ ದೂಳು ಕುಡೀತಾ ಸಂದಿಗೊಂದಿಯಲ್ಲಿ ಓಡಾಡ್ಕೊಂಡು ಊರು ಉಸಾಬರಿ ಮಾಡೋವಾಗೆಲ್ಲ ನಿನಗೆ ತಲೆನೋವು ಬರಲ್ಲಸುಸ್ತೂ ಆಗಲ್ಲಬೇಕಾದ್ದು ಸಿಗೋತನ ಮೂರುನಾಲ್ಕು ತಾಸು ತಿರಗೋವಾಗ ನಿನಗೇನೂ ಆಗ್ತಿರಲ್ಲಅದ್ಯಾವಳೋಅದ್ಯಾವನೋ ಅಲ್ಲಿ ರ್ಯಾಂಪ್ ಮೇಲೆ  ನಡೆದು ಕಿರೀಟ ತೊಟ್ ಮೇರೀತಾರಂತೆ ಈಕೆ ಅವರನ್ನೆಲ್ಲ ಮೆರಸ್ತಾಳಂತೆ… ಜನ ಎಲ್ಲ ಚಪ್ಪಾಳೆ ಹೊಡೀತಾರಂತೆಇವಳ ಆತ್ಮ ಸಂತೋಷದಿಂದ ಕುಣಿಯತ್ತಂತೆಅದೆಷ್ಟ್ ಕುಣೀತೀಯೋ ಕುಣಿಯೇ ನೋಡ್ತೀನಿ ನಾನೂ… ಮನೆಯಲ್ಲೊಂದು ಢಣಢಣ ಘಂಟೆಮೂಲೆಯಲ್ಲಿದ್ದ ಸ್ಟ್ಯಾಂಡಿನಿಂದ ಶೂ ಕೈಗೆತ್ತಿಕೊಂಡು ಕತ್ತಲಲ್ಲೇ ಒಮ್ಮೆ ಕೆಕ್ಕರಿಸಿ ನೋಡಿ ಜಾಗಿಂಗ್ ಹೋಗಿಬಿಟ್ಟ.

ತನ್ನ ಪ್ರಾಜೆಕ್ಟ್ ಡೆಡ್ಲೈನಿನ ನೆನಪಾಗಿದ್ದೇ ಮಾಲಿಕಾ ಒಳಬಂದು ಲ್ಯಾಪ್ಟಾಪ್ ಹಿಡಿದು ಕುಳಿತಳುತಾನು ಡಿಸೈನ್ ಮಾಡುವ ಹುಡುಗಿಯರ ಮೈಬಣ್ಣವನ್ನುಮೈಮಾಟವನ್ನೊಮ್ಮೆ ಕಣ್ಣುಮುಂದೆ ತಂದುಕೊಂಡು ಅವರಿಗೆ ಒಪ್ಪುವಂಥ ಕಲರ್ ಆಯ್ಕೆ ಮಾಡಿಕೊಂಡು ವಸ್ತ್ರ ವಿನ್ಯಾಸ ಮಾಡತೊಡಗಿದಳುಇನ್ನೇನು ಫೈನಲ್ ಟಚ್ ಕೊಟ್ಟರೆ ಮುಗಿದೇಹೋಯಿತು ಎನ್ನುವಾಗ ಗಡಿಯಾರ ನೋಡಿದಳುಆರೂವರೆಚಹಾ ಮಾಡಿಡಲೇಬೇಕು ಎಂದು ಅಡುಗೆಮನೆಗೆ ಓಡಿದಳುಗೇಟಿನ ಶಬ್ದ ಕೇಳಿಯೇ ಮುಂಬಾಗಿಲ ತೆರೆದು ಓಡಿ ಬಂದು ಉಕ್ಕುವ ಚಹಾ ಊದಿಊದಿ ಒಲೆ ಸಣ್ಣ ಮಾಡಿದಳುತಕ್ಷಣವೇ ಕಪ್‍ಗೆ ಚಹಾ ಸುರಿದು ಟ್ರೇಯೊಂದಿಗೆ ಬಾಲ್ಕನಿಗೆ ಬಂದರೆ ಸಾರಂಗ ಬಾತ್ರೂಮಿಗೆ ಹೋಗಿದ್ದಹೀಗಾಗಿ ಅದರ ಮೇಲೊಂದು ಪ್ಲೇಟು ಮುಚ್ಚಿಟ್ಟು ವಾಪಸ್ ಕೋಣೆಗೆ ಬರುವ ಸಣ್ಣ ಅವಧಿಯಲ್ಲೇ ಸಾರಂಗ್ ಎದುರಾದಚಹಾ ಎಂದಟೀಪಾಯಿ ತೋರಿಸಿ ಒಳಬಂದು ಲ್ಯಾಪ್‍ಟಾಪ್ ತೊಡೆಮೇಲಿಟ್ಟುಕೊಂಡು ಕುಳಿತಳುಜೇನುಬಣ್ಣ  ಚಿಕ್ಕಹುಡುಗಿಗೆ ಒಪ್ಪುತ್ತದೆ ಎಂದುಕೊಳ್ಳುತ್ತ  ಬಣ್ಣದ ಮೇಲೆ ಟೂಲ್ ತಂದುಕೊಂಡಳು ಬಣ್ಣ ಅವಳನ್ನು ಕಳೆದವಾರ ಸೇತುವೆಯ ಬಳಿ ಹೋದಾಗಿನ ದೃಶ್ಯವನ್ನು ನೆನಪಿಸಿತು.

ಸಂಜೆ ಐದರ ಸೂರ್ಯಸೇತುವೆಯ ಕೆಳಗೆ ಹರಿವ ನೀರುನಟ್ಟನಡುವಿನ ಕರೀಕಲ್ಲಮೇಲೆ ಕುಳಿತಿದ್ದ  ನಾಲ್ಕು ಹುಡುಗಿಯರುಆಗಷ್ಟೇ ಹರೆಯ ಚಿಗಿತಂತಿತ್ತುಅಲ್ಯೂಮಿನಿಯಂ ಬುಟ್ಟಿಯೊಳಗೆ ಒಂದಿಷ್ಟು ಬಟ್ಟೆಗಳನ್ನಿಟ್ಟುಕೊಂಡು ಅದೇನೇನೋ ಮಾತನಾಡಿಕೊಂಡು ನಗುತ್ತ ಕುಳಿತಿದ್ದರುಸಂಜೆಗಾಳಿಗೆ ಅವರ ಕೆಂಚಗೂದಲು ಜೊಂಪೆಜೊಂಪೆಯಾಗಿ ಹಾರುತ್ತಿದ್ದವುಪಕ್ಕದಲ್ಲೇ ಹಾಲಿನ ನಾಲ್ಕೈದು ಕ್ಯಾನುಗಳನ್ನು  ಹೊಳೆನೀರಿನಲ್ಲಿ ತೊಳೆದುಕೊಳ್ಳಲೆಂದು ಅವರಿಗಿಂತ ಮೂರು ನಾಲ್ಕು ವರ್ಷ ದೊಡ್ಡ ವಯಸ್ಸಿನ ಮೂರು ಹುಡುಗರೂ ಇದ್ದರುಆಗಾಗ ಗೂಳಿಗಳಂತೆ ಕಾದಾಟಕ್ಕೆ ಬೀಳುತ್ತಕ್ಷಣದಲ್ಲೇ ಕೇಕೆ ಹಾಕುತ್ತ ಕ್ಯಾನು ತೊಳೆಯುವ ರಭಸಕ್ಕೆ ನೀರು ಚಿಮ್ಮಿ ಚಿಮ್ಮುವಿಕೆಯ ಹನಿಹನಿಗಳಲ್ಲೆಲ್ಲ  ಮರಿಸೂರ್ಯಂದಿರು ನಕ್ಕು ಮಾಯವಾಗುತ್ತಿದ್ದರು ಮಾಯಕವನ್ನೆಲ್ಲ ತನ್ನ ಕ್ಯಾಮೆರಾದಲ್ಲಿ ಸೇತುವೆಯ ಮೇಲಿಂದಲೇ ಸೆರೆ ಹಿಡಿಯುತ್ತಿದ್ದಳು ಮಾಲಿಕಾ.

ಇಂದಿನ ಖುಷಿಗಿಷ್ಟು ಸಾಕು ಎಂದು ಕೊರಳಿನಿಂದ ಕ್ಯಾಮೆರಾ ತೆಗೆಯುತ್ತಿರುವಾಗ, “ಸೋಪಿನ ಪುಡಿ ಬೇಕಾ?’’ ಎಂದು ಅವರಲ್ಲೊಬ್ಬ ಧೈರ್ಯ ಮಾಡಿ ಕೂಗಿದಯಾರಿಗವ ಕರೆದಿದ್ದು ಎಂದು ತಿಳಿಯದೆ ತಮ್ಮ ತಮ್ಮ ಮುಖವನ್ನು ನೋಡಿಕೊಂಡರು  ಹುಡುಗಿಯರುಬೇಕಾಎಂದು ಮತ್ತೆ ಕೂಗಿದ್ದಕ್ಕೆಅವರಲ್ಲೊಬ್ಬಳು ಬೇಕು ಎಂದು ಕೂಗಿದಳುಹಾಗಿದ್ದರೆ ಇಲ್ಲಿ ಬಾ ಎಂದು ಕೂಗು ಹಾಕಿದಒಮ್ಮೆ ಹಿಂತಿರುಗಿ ತನ್ನ ಅಕ್ಕಂದಿರನ್ನು ನೋಡಿದ  ಹುಡುಗಿಅವರ ಸಮ್ಮತಿಯನ್ನೂ ನಿರೀಕ್ಷಿಸದೆಸಣ್ಣಸಣ್ಣ ಜಾರುಗಲ್ಲುಗಳನ್ನು ದಾಟಿಕೊಂಡು  ಹುಡುಗನಿದ್ದಲ್ಲಿಗೆ ಹೋದಳುಆಳ ಕಡಿಮೆ ಇದ್ದಿದ್ದರಿಂದ ಹರಿವೂ ಕಡಿಮೆ ಇತ್ತು ಹುಡುಗಿ ಹತ್ತಿರ ಬರುತ್ತಿದ್ದಂತೆ ಅವನ ಕಣ್ಣುಗಳಲ್ಲಿ ಸೂರ್ಯಂದಿರು ಕುಣಿಯತೊಡಗಿದರು ಹುಡುಗಿ ಬಲಗೈ ಚಾಚಿನಿಂತಳುಬೇಕೆಂದರೆ ಮುಂದೆ ಬರಬೇಕು ಎಂದಎರಡು ಹೆಜ್ಜೆ ಮುಂದೆ ಹೋಗಿ ನಿಂತಳುಆಗ ಅವನೂ ಎರಡು ಹೆಜ್ಜೆ ಮುಂದೆ ಬಂದತಗೋ ಎಂದು ಅವನು ಕಿಸೆಯಲ್ಲಿದ್ದ ಪೊಟ್ಟಣದಿಂದ ಸೋಪಿನ ಪುಡಿ ಕೊಟ್ಟಇಬ್ಬರ ಒದ್ದೆಗೈಯನ್ನು  ಸೋಪುಪುಡಿ ಕ್ಷಣ ಬೆಚ್ಚ ಮಾಡಿತು ಹುಡುಗಿ ಮರಳಿ ತಾನು ಒಗೆಯುತ್ತಿದ್ದ ಕಲ್ಲಿನ ಬಳಿ ವಾಪಾಸು ಬಂದಾಗ ಅರ್ಧ ಸೋಪುಪುಡಿ ಕರಗಿಯೇ ಹೋಗಿತ್ತುಉಳಿದ ಮೂರೂ ಜನ ಅವಳ ಕೈಮೇಲೆ ಕೈಯಿಟ್ಟು ಒಂದಿಷ್ಟು ಸೋಪುಕಣಗಳನ್ನು ಕೈಗಂಟಿಸಿಕೊಂಡು ತಮ್ಮತಮ್ಮ ಕಲ್ಲುಗಳ ಮೇಲಿದ್ದ ಬಟ್ಟೆಗಳ ಮೇಲೆ ಸವರಿಬಿಡುಬೀಸಿನಿಂದ ಬಟ್ಟೆ ಎತ್ತಿ ಒಗೆಯತೊಡಗಿದರುಕೆಂಪೇರಿದ್ದ ಸೂರ್ಯ ಈಗ ಇವರ ಮುಖವೇರಿದ್ದ.

 ಹುಡುಗರು ಕ್ಯಾನುಗಳನ್ನೆಲ್ಲ ಎತ್ತಿಕೊಂಡು ಸೈಕಲ್ಲು ಬಿಡುವಾಗಅವರಲ್ಲೊಬ್ಬ… ನೊರೆ ಬಂತಾಎಂದಇಲ್ಲ ಎಂದು ಗೋಣು ಅಲ್ಲಾಡಿಸಿದರು  ಹುಡುಗಿಯರುನಾಳೆ ಜಾಸ್ತಿ ಸೋಪು ಪುಡಿ ತರುತ್ತೇವೆ ಬರುತ್ತೀರಿ ತಾನೇಎಂದನಾಲ್ಕೂ ಹುಡುಗಿಯರು ಮುಖಮುಖ ನೋಡಿಕೊಂಡು ಹೂಂ ಎಂದು ಕೈ ಎತ್ತಿದರುಹುಡುಗರ ಸೈಕಲ್ಲು ತುಳಿತಕ್ಕೆ ಗಾಲಿಗಳೊಳಗಿನ ತಂತಿಗಳು ತಮ್ಮನ್ನೇ ತಾವು ಮಬ್ಬುಗೊಳಿಸಿಕೊಂಡವುಇತ್ತ ಹುಡುಗಿಯರು ಬಟ್ಟೆ ಹಿಂಡಿಕೊಳ್ಳುವಾಗ ಹೊಳೆಯ ಮೀನುಗಳೆಲ್ಲ  ಪಾದಗಳಿಗೆ ಕಚಗುಳಿಯಿಟ್ಟವುಅವರ ಥಾ ಥೈ ನೋಡುತ್ತ ಅಷ್ಟೂ ಹೊತ್ತು ಜಗತ್ತನ್ನೇ ಮರೆತ ಮಾಲಿಕಾಳ ಕ್ಯಾಮೆರಾಗೆ ಭರಪೂರ ಭೋಜನವಾಗಿತ್ತು.

 ಮೂಲೇಲಿ ಕಟ್ಟಿದ ಜೇಡ ಹರ್ಕೊಂಡ್ ಬಿದ್ದು ವಾರ ಆಯ್ತುಫ್ರೂಟ್ ಬಾಸ್ಕೆಟ್ ನಲ್ಲಿ ಒಂದ್ ಬಾಳೆಹಣ್ ಕಪ್ಪಗಾಗಿ ಎಷ್ಟ್ ದಿನ ಆಯ್ತೋಶೂ ಸ್ಟ್ಯಾಂಡ್ನಲ್ಲಿ ಬೇಡಾದ್ ಚಪ್ಪಲಿ ತೆಗೆದಿಡು ಅಂತ ತಿಂಗಳಿಂದ ಹೇಳಿಹೇಳಿ ನನಗೇ ಅಸಹ್ಯ ಬಂತುನಿನ್ನೆ ಬೆಳಗ್ಗೆಯಿಂದ ಟೀಪಾಯ್ ಕೆಳಗೆ ಬಿದ್ದ ಪೇಪರ್ ಹಾಗೆ ಇದೆಇದೆಯಲ್ಲ  ಮೊಬೈಲ್ ಲ್ಯಾಪ್ಟಾಪ್ ಅದೇ ನಿನಗೆ ಸರ್ವಸ್ವಅದ್ರೊಂದಿಗೇ ಜೀವನ ಮಾಡುಇದ್ದ ಮಗಳೊಬ್ಬಳನ್ನ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿದ ನಿನಗೆ ಮನೆ ಯಾಕೆ ಬೇಕುಗಂಡ ಯಾಕೆ ಬೇಕು?” ಸಾರಂಗ್ ಇದ್ದಕ್ಕಿದ್ದಂತೆ ಮುಖ ಕೆಂಪು ಮಾಡಿಕೊಂಡು ಢಣಢಣಢಣ

ಜಾಗಿಂಗ್ ಮುಗಿಸಿ ಬಂದವನಿಗೆ ಟೀ ಕಪ್ ಕೈಗೆ ಕೊಡದೆ ಟೀಪಾಯ್ ಮೇಲಿಟ್ಟುಕೋಣೆಗೆ ಓಡಿ ಲ್ಯಾಪ್ಟಾಪ್ ಎತ್ತಿಕೊಂಡಿದ್ದರ ಮಹಾಪ್ರಸಾದವಿದುಎಂದು ಅರ್ಥೈಸಿಕೊಳ್ಳುವಷ್ಟು ಪ್ರೌಢಳಾಗಿದ್ದಳು ಮಾಲಿಕಾಇನ್ನೇನು ಸ್ವಲ್ಪ ಫೈನ್ ಟ್ಯೂನ್ ಮಾಡಿ ಮೇಲ್ ಮಾಡಿಬಿಟ್ಟರೆ ಮುಗಿಯಿತುಎಂಟುಗಂಟೆಗೆಲ್ಲಾ ಆಫೀಸಿಗೆ ಹೋಗುವ ಗೆಳತಿ ಸರಸ್ವತಿಬಟ್ಟೆ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾನುಗಳನ್ನೆಲ್ಲಾ  ಬೂಟಿಕ್ನ ಹೇಮಂತ್ ಗೆ ತಲುಪಿಸಿಬಿಡುತ್ತಾಳೆತಾನು ಅಡುಗೆ ಕೆಲಸ ಮುಗಿಸಿ ಹತ್ತಕ್ಕೆಲ್ಲ ಅವನ ಬೂಟಿಕ್ ತಲುಪುವ ಹೊತ್ತಿಗೆ  ಡಿಸೈನ್ ಅನ್ನು ಅವ ಒಮ್ಮೆ ನೋಡಿ ಅಂದಾಜಿಸಿರುತ್ತಾನೆನಂತರ ಎದುರಾಬದುರು ಕೂತು ವಿವರಿಸಿದರೆ ಅವನ ಪಾಡಿಗೆ ಅವನು ಕೆಲಸ ಶುರು ಮಾಡಿಕೊಳ್ಳುತ್ತಾನೆ ಎಂದೆಲ್ಲ ಲೆಕ್ಕಾಚಾರ ಹಾಕುತ್ತ ಕುಳಿತವಳಿಗೆ ಸಾರಂಗ್  ಢಣಢಣ ನರಮ್ಮಾಗಿಸಿತ್ತು.

ಪ್ಲೇಟಿಗೆ ತಿಂಡಿ ಹಾಕಿಎರಡೂ ಕೈಗಳಿಂದ ಅವನ ಕೈಯಲ್ಲಿ ಕೊಟ್ಟುಪಕ್ಕದಲ್ಲಿ ನೀರಿಟ್ಟು ಉಪಚರಿಸಲು ಸಮಯ ಇರಲಿಲ್ಲ ಎನ್ನುವುದಕ್ಕಿಂತಹಾಗೆ ಮಾಡಿದರೇನಾದರೂ ಬದಲಾವಣೆ ಉಂಟೆ?  ಎಂದುಕೊಂಡುಟೇಬಲ್ ಮೇಲೆ ತಿಂಡಿಹಣ್ಣುನೀರು ಜೋಡಿಸಿಟ್ಟು ಅಡುಗೆಮನೆಗೆ ವಾಪಾಸಾದಳುಮಧ್ಯಾಹ್ನಕ್ಕೆ ಪುಲಾವ್ ಮಾಡಿದರಾಯಿತೆಂದು ಬಟಾಣಿ ಸುಲಿಯುತ್ತಹಾಗೇ ಬಂದ ಮೇಲುಗಳ ಮೇಲೆ ಕಣ್ಣಾಡಿಸುವಾಗ ತನ್ನ ತಾಯಿಯ ಮೇಸೇಜ್ ಪಾಪ್ ಅಪ್ ಆಯಿತು ಅಮ್ಮನೋ ಈಗೀಗ ಹುಡುಗಿಯಾಗುತ್ತಿದ್ದಾಳೆಯಾವುದೋ ಫಾರ್ವರ್ಡ್ ಇಮೇಜ್ ಕಳಿಸಿರುತ್ತಾಳೆ ನಂತರ ನೋಡಿದರಾಯಿತೆಂದುಕೊಳ್ಳುವ ಹೊತ್ತಿಗೆ ಥಟ್ಟನೆ  ಇಮೇಜ್ ಡೌನ್ಲೋಡ್ ಆಗಿಯೇಬಿಟ್ಟಿತುಅರ್ರೆ ಇದು ತನ್ನ ಅಜ್ಜ-ಅಜ್ಜಿಫೋಟೋಶಾಪ್ ನಲ್ಲಿ ಟಚಪ್ ಕೊಟ್ಟುಫೈನ್ ಟ್ಯೂನ್ ಹಂತದಲ್ಲಿದ್ದ  ಎರಡು ಫೋಟೋಗಳು ಅವಾಗಿದ್ದವುಇದರಲ್ಲಿ ಒಂದನ್ನು ಸೆಲೆಕ್ಟ್ ಮಾಡುಫ್ರೇಮ್ ಹಾಕಿಸಬೇಕು ಅಂತ ನಿನ್ನ ತಂದೆ ನಿರ್ಧರಿಸಿದ್ದಾರೆ ಎಂಬ ಮೆಸೇಜ್ ಕೂಡ ಇತ್ತುಓಕೆ ಎಂದು ರಿಪ್ಲೈ ಮಾಡಿ ಸುಮ್ಮನೇ ಬಟಾಣಿ ಸುಲಿಯುತ್ತಿದ್ದವಳಿಗೆ ತವರುಮನೆರಜಾದಿನಗಳಲ್ಲಿ ಬರುತ್ತಿದ್ದ ತನ್ನ ತಾಯಿಯ ತಾಯಿ ನೆನಪಾದಳು.

ಅಜ್ಜಿ ತನಗೆ ಊಟಕ್ಕೆ ಬಡಿಸಿಟ್ಟುಪಕ್ಕದಲ್ಲಿ ಕುಳಿತು ಎಳೆ ಈರುಳ್ಳಿಮೆಂತ್ಯೆಮೂಲಂಗಿಹಕ್ಕರಕಿ ಸೊಪ್ಪನ್ನು ಸೋಸುತ್ತಅದರೊಳಗೆ ಉಳಿದ ಹನಿನೀರನ್ನು ತೊಡೆಯ ಮೇಲಿಟ್ಟುಕೊಂಡ ಮೆತ್ತಗಿನ  ಕಾಟನ್ ಬಟ್ಟೆಗೆ ಒರೆಸುತ್ತ ಎಳೆಎಳೆ ಸೊಪ್ಪನ್ನು ತಟ್ಟೆಯೊಳಗಿಡುತ್ತಿದ್ದಳುಹಾಗೇ ಹಸಿ ಕಡಲೆಕಾಳೋಶೇಂಗಾನೋಬಟಾಣಿಯನ್ನೋ ಸುಲಿದು ಅದರ ಪಕ್ಕದಲ್ಲೇ ನಿಧಾನಕ್ಕೆ ಇಡುತ್ತಿದ್ದಳುಈರುಳ್ಳಿ ಖಾರವೆಂದರೂ ಕೇಳದೆಅದರ ಹೊಟ್ಟೆಮಧ್ಯದ ಎಸಳನ್ನಷ್ಟೇ ಬಿಡಿಸಿಇದಷ್ಟೇ ತಿಂದು ನೋಡು ಎಂಥ ಸಿಹಿ ಗೊತ್ತಾ ಎಂದು ಹೇಳುತ್ತತಿನ್ನುವಾಗ ತನ್ನ ಮುಖ ನೋಡುತ್ತಿದ್ದದ್ದುಮತ್ತು ತಟ್ಟೆಯಲ್ಲಿದ್ದ ಮೊಸರುಪಲ್ಯಚಟ್ನಿಗಳನ್ನು ಚಪಾತಿ ರೊಟ್ಟಿಗೆ ಹೇಗ್ಹೇಗೆ ಕಾಂಬಿನೇಷನ್ ಮಾಡಿಕೊಂಡು ತಿಂದರೆ ಅದರ ರುಚಿ ಹೆಚ್ಚುತ್ತದೆ ಎಂಬುದನ್ನೂ ಹಗೂರಕ್ಕೆ ಹೇಳುತ್ತಿದ್ದಳುಹಾಗೆಯೇ ಎದುರಿಗೊಂದು ಪ್ಲೇಟಿನೊಳಗೆ ಎರಡು ಚಪಾತಿ ತುಣುಕುಗಳನ್ನಿಟ್ಟುಕೊಂಡು ಅದರ ಮೇಲೊಂದು ಪ್ಲೇಟು ಮುಚ್ಚಿಟ್ಟು  ಗಾಳಿಗೆ ಚಪಾತಿ ತೇವ ಕಳೆದುಕೊಳ್ಳಬಾರದೆಂಬ ಕಾಳಜಿಯ ಲೆಕ್ಕಾಚಾರದಲ್ಲಿ ಆಕೆ ತನಗಂಟಿಕೊಂಡೇ ಕೂತಿರುತ್ತಿದ್ದದ್ದು ಮಾಲಿಕಾಗೆ ನೆನಪಾಗಿ ಮನಸ್ಸು ಮೆತ್ತಗಾಯಿತುಅಷ್ಟರಲ್ಲಿ ಹೊರಗಿನಿಂದ ಧಡಾರ್ ಎಂದು ಬಾಗಿಲು ಮುಚ್ಚಿಕೊಂಡ ಶಬ್ದದ ಅರಿವಾಗಿತಾನಿನ್ನೊಬ್ಬಳೇ ಮನೆಯಲ್ಲಿ ಎಂದು ಜೋರಾಗಿ ಉಸಿರೆಳೆದುಕೊಂಡು ಕ್ಯಾರೆಟ್ ನ ಹೊರಮೈಯನ್ನು ಮೂರುನಾಲ್ಕು ಸೆಕೆಂಡಿನೊಳಗೆ ತರಿದುಮುಂದಿನ ಐದಾರು ಸೆಕೆಂಡಿನೊಳಗೆ ಚಿಕ್ಕಚಿಕ್ಕ ಹೋಳುಗಳನ್ನಾಗಿಸಿಬಿಟ್ಟಳು ಮಾಲಿಕಾ.

ಅಂದುಕೊಂಡಂತೆ ಬೂಟಿಕ್  ಹೇಮಂತ್ ಕಾಲ್ ಮಾಡೇಬಿಟ್ಟಅವನೊಬ್ಬ ಹುಚ್ಚಎಲ್ಲದಕ್ಕೂ ಹಿಹಿ ಎಂದುಕೊಂಡು ಕಾಲ್ ಮಾಡುತ್ತಾನೆಇನ್ನೇನು ಬಟ್ಟೆ ತಲುಪಿದೆ ಎಂದು ಹೇಳಲು ತಾನೆಎಷ್ಟು ವರ್ಷಗಳಿಂದ ಅವನಿಗೆ ಆರ್ಡರ್ ಕೊಡುತ್ತಿಲ್ಲ ತಾನುಅವ ಮಾತ್ರ ಸಣ್ಣಸಣ್ಣದಕ್ಕೂ ಕಾಲ್ ಮಾಡಿ ವರದಿ ಒಪ್ಪಿಸುವುದನ್ನುಡೌಟು ಕೇಳುವುದನ್ನು ಬಿಡಲೇ ಇಲ್ಲದೊಡ್ಡ ಶನಿಮಹಾಶಯಆದರೂ ಒಳ್ಳೆ  ಕೆಲಸಗಾರ. ಎಂದುಕೊಳ್ಳುತ್ತ ಕಾಲ್ ರಿಸೀವ್ ಮಾಡಿದಳು. “ಮ್ಯಾಡಮ್ಜಿಸರಸ್ವತಿ ಮ್ಯಾಡಮ್ ಬಟ್ಟೆ ಕೊಟ್ಟು ಹೋದರುನಾನು ನಿಮ್ ಮೇಲ್ ನೋಡುತ್ತಿದ್ದೇನೆಕೆಲ ಡಿಸೈನುಗಳು ಅರ್ಥವಾಗುತ್ತಿಲ್ಲ ನೀವೊಮ್ಮೆ ಬಂದರೆ ಸರಿ ಹೋಗುತ್ತದೆಎಂದು ಅವ ಹೇಳುವ ಮಾಮೂಲಿವರಸೆಯನ್ನು ಅಂದಾಜಿಸಿದ್ದ ಮಾಲಿಕಾಕಿವಿಯಿಂದ ಆರೇಳು ಇಂಚು ದೂರವೇ ಫೋನ್ ಹಿಡಿದು ಹೂಂ ಹೂಂ ಬರುವೆ ಎಂದು ಧ್ವನಿಯಲ್ಲಿ ಶಾಂತಿ ಮತ್ತು ಸಮಾಧಾನ ನಟಿಸಿ ಮಾತು ಮುಗಿಸಿದಳು.

ಪಟಪಟನೆ ಮಿಕ್ಕ ತರಕಾರಿ ಕತ್ತರಿಸಿವಗ್ಗರಣೆ ಹಾಕಿಉಪ್ಪು-ಖಾರ-ಮಸಾಲೆ ಪದಾರ್ಥ ಕಡಿಮೆಯೇ ಹಾಕಿಒಂದು ಅಳತೆ ಅಕ್ಕಿಗೆ ಎರಡು ನೀರು ಮತ್ತು ಒಂದು ಅಳತೆ ಹಾಲು ಸೇರಿಸಿ ಕುಕ್ಕರಿನ ಬಾಯಿ ಮುಚ್ಚುವ ಹೊತ್ತಿಗೆ ಕೋಣೆಯೊಳಗಿನ ಕನ್ನಡಿ ಕಾಯುತ್ತಿತ್ತುರಾಯತಕ್ಕೆ ಸವತೆಕಾಯಿಯನ್ನು ಫ್ರಿಡ್ಜಿನಿಂದ ಹೊರಗಿಟ್ಟವಳೇ ಕೋಣೆಯ ಕನ್ನಡಿ ಮುಂದೆ ನಿಂತಳುನಿಂತಲ್ಲೇ ನಿಂತು ಐದು ನಿಮಿಷ ಜಾಗ್ ಮಾಡಿದವಳೇಹತ್ತು ಸೆಕೆಂಡ್ ಸುಮ್ಮನಿದ್ದು ತನ್ನನ್ನೇ ತಾ ನೋಡಿಕೊಂಡಳು ಮಾಲಿಕಾ,  ಯಾಕ್ ಬೇಕಿತ್ತು ಇದೆಲ್ಲ ನಿನಗೆಸುಮ್ಮನೆ ಶಾಪಿಂಗ್ಸಿನೆಮಾಕಿಟ್ಟಿಪಾರ್ಟಿ ಮಾಡಿಕೊಂಡುಗಂಡ ಕೊಡಿಸಿದ ವಸ್ತ ಒಡವೆ ತೊಟ್ಟುಸಂಬಂಧಿಕರೆಲ್ಲರ ಹೊಟ್ಟೆ ಉರಿಸುತ್ತಗಂಡನ ಅಂತಸ್ತು ಮೆರೆಸಿದ್ದರೆ  ಎಂಥಾ ಚೆಂದವಿರುತ್ತಿತ್ತು ನಿನ್ನ ಸಂಸಾರಎಂದುಕೊಂಡು ಮುಂದಿನ ಎಕ್ಸ್‍ರ್ಸೈಝ್‍ ಗೆ ತೊಡಗಿದಳು.

ಅಷ್ಟರಲ್ಲಿನಚಿಕೇತ್ ಮುಖರ್ಜಿಯ ಕಾಲ್ ಬಂದಿತುಇನ್ನೇನುಕಾಸ್ಟ್ಯೂಮ್ಗ್ರೂಮಿಂಗ್ ಎಲ್ಲ ರೆಡಿ ತಾನೆಎಂದು ಕೇಳುತ್ತಾನೆ ಎಂದುಕೊಂಡುಏದುಸಿರುಬಿಡುತ್ತಲೇ ಹೆಲೋ ಎಂದಳು. “ಹಾಯ್ ಮಾಲಿಕಾನಮ್ಮ ಬಾಸ್ ತುಂಬಾ ಇಂಪ್ರೆಸ್ ಆಗಿದ್ದಾರೆ ನೀನು ತೆಗೆದ ಫೋಟೋಗಳನ್ನು ನೋಡಿ ಹುಡುಗಿಯರನ್ನೊಮ್ಮೆ ಅವರು ನೋಡಬೇಕಂತೆಮಧ್ಯಾಹ್ನ ಕರೆತರಬಹುದಾ ಆಫೀಸಿಗೆ?’ ಎಂದಛೆ ಎಂ.ಜಿ ರೋಡಿನ ಕನ್ನಡಿಯಂತೆ ಹೊಳೆಯುವ ಫಳಫಳ ಆಫೀಸಿನೊಳಗೆ ಕೊಳಗೇರಿಯ ಹರಕುಮುರುಕಿನೊಳಗಿರುವ  ಹೆಣ್ಣುಮಕ್ಕಳನ್ನು ಹಾಗಾಗೇ ಕರೆತಂದರೆ ಅಷ್ಟೇಸನ್ನಿವೇಶ ಬೇರೆ ರೀತಿಯಲ್ಲೇ ನಿರ್ಮಾಣವಾಗುತ್ತದೆ ಎಂದು ಮನಸ್ಸಿನಲ್ಲೇ ಯೋಚಿಸುತ್ತಾಹೇಯ್ ಇಲ್ಲ ನಚಿಕೇತ್ಗ್ರೂಮಿಂಗ್ ಆಗದ ಹೊರತು ಅವರನ್ನು ಹಾಗೆಲ್ಲ ಆಫೀಸಿಗೆ ಕರೆತರಲಾಗುವುದಿಲ್ಲಎರಡು ದಿನ ಸಮಯ ಕೊಡು ಎಂದು ಹೇಳಿ ಫೋನಿಟ್ಟಳು.

ಕಳೆದವಾರ ಸಂಜೆ ಐದರ ಹೊಂಬೆಳಕಲ್ಲಿ ಕ್ಲಿಕ್ಕಿಸಿದ   ಹುಡುಗಿಯರ ಫೋಟೋಗಳೆಲ್ಲವನ್ನೂ ಮಾಲಿಕಾ ಫೇಸ್ಬುಕ್ಕಿಗೆ ಅಪ್ಲೋಡ್ ಮಾಡಿದ್ದರ ಪರಿಣಾಮ ಹೀಗೆ ಒಂದು ಆಕಾರ ಪಡೆದುಕೊಂಡಿತ್ತುಮೈಮೇಲೆ ನೆಟ್ಟಗಿನ ಬಟ್ಟೆ ಇಲ್ಲದಿದ್ದರೂ ಮುಖಕ್ಕೆ ಯಾವ ಮೇಕಪ್ಪಿಲ್ಲದಿದ್ದರೂ ಅವರ ಕಣ್ಣೊಳಗಿನ ಹೊಳಪುಮುಖದೊಳಗಿನ ತಾಜಾತನಸಹಜ ಮುಖಭಾವಕ್ಕೆ ಬೆಳಗಾಗುವುದರೊಳಗೆ ಸಾವಿರಾರು ಲೈಕ್ಸು ಕಮೆಂಟುಗಳು ಬಂದು ನೂರಾರು ಶೇರ್ ಹೊಂದಿದ್ದವುಇದೆಲ್ಲವನ್ನೂ ಗಮನಿಸಿದ ‘ಜಸ್ಟ್ ಬ್ರೀದ್’ ಲೀಡಿಂಗ್ ಇಂಗ್ಲಿಷ್ ಮ್ಯಾಗಝೀನ್ ಒಂದರ ಸೀನಿಯರ್ ಫೋಟೋ ಜರ್ನಲಿಸ್ಟ್ ತಾನು ಪತ್ರಿಕೆಯ ಮುಖಪುಟಕ್ಕಾಗಿ ಫೋಟೋ ಶೂಟ್ ಮಾಡುವುದಾಗಿ ಫೇಸ್ಬುಕ್ಕಿನಲ್ಲೇ ಘೋಷಿಸಿಬಿಟ್ಟಿದ್ದಇದೆಲ್ಲದರಿಂದ ಪುಳಕಿತಗೊಂಡ ಮಾಲಿಕಾತನ್ನ ಆರ್ಡರ್ ಗಳನ್ನು ಬದಿಗಿಟ್ಟು ಹೆಣ್ಣುಮಕ್ಕಳ ಫೋಟೋಶೂಟ್ ಗಾಗಿ ತಯಾರಿ ನಡೆಸತೊಡಗಿದ್ದಳು.
ಸ್ಪಾಗೆ ಕಾಲ್ ಮಾಡಿ ಸಂಜೆ ಅಪಾಯಿಂಟ್ಮೆಂಟ್ ತೆಗೆದುಕೊಂಡಳುಗ್ರೂಮ್ ಆದ ಹುಡುಗಿಯರು ಮತ್ತು ತಾನು ವಿನ್ಯಾಸ ಮಾಡಿದ ಕಾಸ್ಟ್ಯೂಮ್ ನಲ್ಲಿ ಅವರು ಹೇಗೆ ಕಾಣುತ್ತಾರೋಎಂಬುದನ್ನು ಕಲ್ಪನೆಯಲ್ಲೇ ಖುಷಿಪಡುತ್ತಿದ್ದವಳಿಗೆ ಬಾಗಿಲು ಬಡಿದ ಸದ್ದುಪಕ್ಕದ ಟೇಬಲ್ ಮೇಲೆ ಕಣ್ಣು ಹೋಯಿತುಸಾರಂಗನ ಮೊಬೈಲ್ ಕೈಗೆತ್ತಿಕೊಂಡೇ ಬಾಗಿಲು ತೆಗೆದಳುತನ್ನ ಮತ್ತು ಅವನ ಮುಖದ ಮಧ್ಯೆ ತೆರೆದ ಬಾಗಿಲು ಇತ್ತುಅವಳ ಕೈಯಿಂದ ಅವ ಮೊಬೈಲ್ ಇಸಿದುಕೊಂಡು ಗೇಟ್ ಧಡ್ ಎನ್ನಿಸಿಧಡಧಡನೆ ಮೆಟ್ಟಿಳಿದು ಹೊರಟುಹೋದ.

ಬಾಗಿಲು ಮುಚ್ಚಿದವಳೇ ಕಣ್ಣುಮುಚ್ಚಿ ಅಲ್ಲೇ ಇದ್ದ ದಿವಾನಾ  ಮೇಲೆ ಕುಳಿತಳುಬರೊಬ್ಬರಿ ಹದಿನಾಲ್ಕು ವರ್ಷ ಮದುವೆಯಾಗಿಕಳೆದ ವರ್ಷದ ತನಕವೂ ಮಾಲಿಕಾತನ್ನ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅವನ ಊಟದ ಹೊತ್ತಿಗೆ ಮಾತ್ರ ಮನೆಯಲ್ಲೇ ಇದ್ದು ಉಪಚರಿಸುವುದನ್ನು ಒಂದು ವ್ರತದಂತೆ ಪ್ರೀತಿಯಿಂದ ಪಾಲಿಸಿಕೊಂಡು ಬಂದಿದ್ದಳುಊಟ ಮಾಡುವಾಗ ಎದುರಿಗೆ ಟಿವಿ ಆನ್ ಆಗಿರದೇ ಇದ್ದಲ್ಲಿ ಅವನಿಗೆ ತುತ್ತೇ ಇಳಿಯುತ್ತಿರಲಿಲ್ಲಯಾವುದೋ ಫೈಟಿಂಗ್ ಸೀನ್ಕಾರ್ ರೇಸ್ ಅಥವಾ ಕಾಡುಪ್ರಾಣಿಯೊಂದು ಬೇಟೆಯಾಡುವುದನ್ನೋಬೇಟೆಯಾಡಿದ್ದನ್ನು ಹರಿದ್ಹರಿದು ತಿನ್ನುವುದನ್ನೋ ನೋಡುತ್ತ ಮೈಮರೆತುಬಿಡುತ್ತಿದ್ದಅದೆಷ್ಟೋ ಸಲ ತಾನು ಆತನ ಮೈಗಂಟಿ ಕುಳಿತುಕೊಂಡರೂ ಮತ್ತೂ ಟಿವಿ ವಾಲ್ಯೂಮ್ ಜೋರು ಮಾಡಿ ತೊಡೆ ಕುಣಿಸುತ್ತ ಕುಳಿತುಕೊಳ್ಳುತ್ತಿದ್ದ.  ತಟ್ಟೆಯಲ್ಲಿ ಹಸಿ ತರಕಾರಿಯೂ ಸೊಪ್ಪೂ ಇದೆಅಥವಾ ಪಕ್ಕದಲ್ಲಿ ಸ್ವೀಟ್ ಹಾಗೇ ಇದೆತಟ್ಟೆಯ ಚಪಾತಿ ಒಣಗುತ್ತಿವೆ ಎಂದೆಲ್ಲ ಹೇಳಿಹೇಳಿ ಕೊನೆಗೆ ಸುಮ್ಮನಾಗುತ್ತಿದ್ದಳು ಆಕೆ.. ಇನ್ನೇನು ಎರಡು ಪೀಸ್ ಚಪಾತಿಗೆ  ಪಲ್ಯ ಮುಗಿಯುತ್ತದೆಇನ್ನೊಂದಿಷ್ಟು ಬೇಕಾಗುತ್ತದೆ ಅವನಿಗೆಈಗ ಹಾಕಿದ ಸಾರು ಅನ್ನಕ್ಕೆ ಸಾಕಾಗುವುದಿಲ್ಲ ಅಥವಾ ಮೊಸರು ಬೇಕಾಗುತ್ತದೆ ಅವನಿಗೆ ಎಂದೆಲ್ಲ ಅಂದಾಜಿಸಿದ ಆಕೆಮೂರು ನಾಲ್ಕು ಸಲ ಬೇಕಾದ ಪದಾರ್ಥವನ್ನೆಲ್ಲ ಕೇಳಿದರೂ ಆಂಊಂಹೂ ಬೇಡ ಎಂದಷ್ಟೇ ಹೇಳಿ ಮತ್ತೂ ಟಿವಿ ವಾಲ್ಯೂಮ್ ಜೋರು ಮಾಡಿ ಮಗ್ನನಾಗಿಬಿಡುತ್ತಿದ್ದ ಸಾರಂಗಮಗಳು ಬಿಲಾವಲಿ ಇಷ್ಟು ವರ್ಷ ಮನೆಯಲ್ಲಿದ್ದಾಗಲೂ ಇದೇ ಹಾಡುಈಗಲೂ ಇದೇ ಪಾಡುಅಂತಃಕರಣಪ್ರೀತಿಯನ್ನೆಲ್ಲ ಸುರಿದರೂ ಒಂದು ಕಿರುನೋಟಒಂದು ಭರವಸೆಯ ಮಾತುಒಂದು ಬೆಚ್ಚಗಿನ ಸ್ಪರ್ಷಕ್ಕೆ ಕಾದೂ ಕಾದೂ ಮಾಲಿಕಾ ಕಲ್ಲಾಗಿ ಹೋಗಿದ್ದಳು.

ಸಾರಂಗನನ್ನು ಪ್ರೀತಿಸಿದ ಕಾರಣಕ್ಕೆ ಮದುವೆ ಮೊದಲು ಫ್ಯಾಷನ್ ಇಂಡಸ್ಟ್ರೀಯಲ್ಲಿ ತನಗಿದ್ದ ದೊಡ್ಡ ಹುದ್ದೆಹೆಸರು ಎಲ್ಲವನ್ನೂ ತ್ಯಜಿಸಿ ಸಾಮಾನ್ಯ ಗೃಹಿಣಿಮನೋಭಾವವನ್ನು ಒತ್ತಾಯದಿಂದ ತಂದುಕೊಳ್ಳಲು ಪ್ರಯತ್ನಿಸಿದ್ದಳುಬಿಲಾವಲಿ ಹುಟ್ಟಿದ ಬಳಿಕವಂತೂ ಪೂರ್ತಿ ಅಲ್ಲಾಡಿಹೋದಳುಸಣ್ಣಪುಟ್ಟ ಫ್ರೀಲಾನ್ಸ್ ಪ್ರಾಜೆಕ್ಟ್ಗಳನ್ನು ಮಾಡುವುದೂ ಅವಳಿಗೆ ದುಸ್ತರವಾಗತೊಡಗಿತುಆದರೂ ರಾತ್ರಿಹಗಲು ಕುಳಿತುಆರೋಗ್ಯದ ಹದಗೆಡಿಸಿಕೊಂಡರೂ ಪ್ರಾಜೆಕ್ಟ್‍ಗಳನ್ನು ಆಕೆ ಬಿಟ್ಟುಕೊಡುತ್ತಿರಲಿಲ್ಲಆದರೆ, ಏನು ಮಾಡಿದರೂ ಹೇಗಿದ್ದರೂ ಎಷ್ಟೆಲ್ಲ ಸಂಭಾಳಿಸಿಕೊಂಡು ಹೋದರೂ… ಕ್ರಮೇಣ  ಸಾರಂಗನ ಢಣಢಣ ಹೆಚ್ಚಾಗುತ್ತಲೇ ಹೋಯಿತು. ಬೆಳೆಯುವ ಮಗುವನ್ನು ಇದು ನುಗ್ಗಾಗಿಸುವುದು ಬೇಡವೆಂದುಕೊಂಡು ಅನಿವಾರ್ಯವಾಗಿ  ರೆಸಿಡೆನ್ಶಿಯಲ್ ಶಾಲೆಯ ಮೊರೆ ಹೋಗಿದ್ದಳು ಮಾಲಿಕಾ.  
ಗಡಿಯಾರದ ಎರಡೂ ಮುಳ್ಳುಗಳು ಹನ್ನೆರಡಕ್ಕೆ ಬಂದು ನಿಂತವುಅದಾಗಲೇ ಕುಕ್ಕರ್ಪ್ರೆಷರ್ ಒಮ್ಮೆ ಏನು ಎರಡು ಬಾರಿ ಕೂಗಿ ಸುಮ್ಮನಾಗಿತ್ತುಗ್ಯಾಸ್ ಉರಿ ತಗ್ಗಿಸಿ ಒಂದು ನಿಮಿಷದ ತನಕ ವಾಟ್ಸಪ್‍ನ ಮೆಸೇಜ್ ಚೆಕ್ ಮಾಡತೊಡಗಿದಳು ಮಾಲಿಕಾ. ‘ನಮಸ್ಕಾರ ಮೇಡಮ್ಕೊಳಗೇರಿಯ ನಾಲ್ಕು ಹುಡುಗಿಯರಿಗೆ ನೀವು ವಸ್ತ್ರವಿನ್ಯಾಸ ಮಾಡುತ್ತಿರುವುದು ಗೊತ್ತಾಯಿತುಹಾಗೇ ನೀವೇ ಅವರನ್ನು ಗುರುತಿಸಿದ್ದಾಗಿಯೂ ತಿಳಿದು ಸಂತೋಷವಾಯಿತುನಮ್ಮ ಎಡಿಟರ್ ಹೇಳಿದ್ದಾರೆನಿಮ್ಮದೊಂದು ಇಂಟರ್ವ್ಯೂ ಮಾಡಬೇಕು ಅಂತಯಾವಾಗ ಮನೆಗೆ ಬರಲಿಎಂಬ ಸಂದೇಶವಿತ್ತುಮಾಲಿಕಾ, “ಸಂತೋಷಈವತ್ತು ಸಾಧ್ಯವಾಗದುಎರಡು ದಿನ ಬಿಟ್ಟು ನಾನೇ ಕಾಲ್ ಮಾಡುತ್ತೇನೆಹಾಗೆ  ಹುಡುಗಿಯರಿದ್ದ ಗುಡಿಸಲುಗಳಿಗೂ ನಿಮ್ಮನ್ನು ಕರೆದೊಯ್ಯುತ್ತೇನೆಎಂದು ಖುಷಿಯಿಂದ ಉತ್ತರಿಸಿದಳುಕುಕ್ಕರಿನಿಂದ ಅಷ್ಟೊತ್ತಿಗೆ ಪರಿಮಳ ಬಂದಂತಾಗಿಗ್ಯಾಸ್ ಆಫ್ ಮಾಡಿಬಿಟ್ಟಳು.

ಕಡುಗೇಸರಿಯ ಮೇಲೆ ಕಪ್ಪು ಕಲಂಕಾರಿ ಪ್ರಿಂಟ್ ಇರುವ ಬ್ಲೌಸ್‍ಗೆ ಕಪ್ಪು ಟೆಸ್ಸಾರ್ ಸಿಲ್ಕ್ ಸೀರೆ ಉಟ್ಟರೆ ಹೇಗೆಅದಕ್ಕೆ ಟೆರ್ರಾಕೋಟಾದ ಆಭರಣ ಧರಿಸಿಹಣೆಯ ಮೇಲೊಂದು ಪುಟ್ಟ ಕುಂಕುಮ ಹಚ್ಚಿಕೊಂಡರೆ ಚೆಂದ ಮತ್ತು ಗಂಭೀರವಾಗಿ ಕಂಡೇನಲ್ಲವೆಅಷ್ಟಕ್ಕೂ ಕ್ಯಾಮೆರಾಕ್ಕೆ ಕಡುಬಣ್ಣದ ದಿರಿಸುಗಳೇ ಒಪ್ಪುತ್ತವೆ ಎಂದೆಲ್ಲ ಯೋಚಿಸಿ  ಖುಷಿಪಟ್ಟುಕೊಂಡಳು ಮಾಲಿಕಾಎದ್ದವಳೇ ತನ್ನ ವಾರ್ಡ್ರೋಬಿನಿಂದ ಕಪ್ಪು ಬಣ್ಣದ ಟೆಸ್ಸಾರ್ ಸೀರೆಯನ್ನು ಇಸ್ತ್ರಿಗೆ ಕೊಡಲೆಂದು ಹೊರತೆಗೆದಿಟ್ಟಳುಮಾಡೆಲ್ ಆಗಬೇಕೆಂದರೆಚಂದ-ಚಾಲಿ-ಹಣ-ಬಲ ಬೇಕು ಎಂದಿದ್ದಳಲ್ಲವೆ ಲೇಡೀಸ್ ಕ್ಲಬ್‍ನ ಲೇಡಿ! ಕೊಳಗೇರಿಯ  ಹೆಣ್ಣುಮಕ್ಕಳೇನು ಪಾಪ ಮಾಡಿದ್ದಾರೆ ಚಂದಗಿಂದದ ವ್ಯಾಖ್ಯಾನವನ್ನೇ ಮತ್ತು ಮಾಡೆಲ್ ಆಗುವ ದಿಕ್ಕುದೆಸೆಯನ್ನೇ ಬದಲಾಯಿಸಿಬಿಡ್ತೀನಿಎಂದು ತನ್ನನ್ನೇ ತಾನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡು ಜೋರು ಉಸಿರೆಳೆದುಕೊಂಡಳುಅಷ್ಟರಲ್ಲಿ ಬಾಯಲ್ಲಿ ಹಾರುಹುಳುವನ್ನು ಹಿಡಿದುಕೊಂಡ ಹಲ್ಲಿಯೊಂದು ಆಯತಪ್ಪಿ ಗೋಡೆಯಿಂದ ನೇರ ಸೀರೆಯ ಮೇಲೇ ಬಿದ್ದಿತುಚುಚು ಎಂದು ಓಡಿಸಲು ನೋಡಿದರೂ ಹಲ್ಲಿ ಜಾಗ ಬಿಟ್ಟು ಕದಲಲೇ ಇಲ್ಲ.

ಪೊರಕೆ ತರಲೆಂದು ಹೊರಗೆ ಹೋದವಳಿಗೆ ಆ ಪೊರಕೆಯೊಂದು ಲೋಗೋದಂತೆ ಕಂಡಿತು. ನಿಧಾನ ಕೈಗೆ ತೆಗೈತ್ತಿಕೊಂಡು ಸುತ್ತೂ ಕಡೆ ತಿರುಗಿಸಿ ನೋಡಿದಳು. ಪೊರಕೆಯೋ ಲೋಗೋನೋ? ಯಾಕೋ ಎಲ್ಲಾ ಗೊಂದಲ. ಕಣ್ಣಗಲಿಸಿ ನೋಡೇ ನೋಡಿದಳು. ಅಂಥ ಹತ್ತಾರು ಲೋಗೋಗಳು ಒಟ್ಟಿಗೆ ಅವಳನ್ನು ಮುಗಿಬಿದ್ದವು. ‘ಏನ್ ಮೇಡಮ್, ಎಂಥ ಒಳ್ಳೆ ಕೆಲಸ ಮಾಡುತ್ತಿದ್ದೀರಿ! ಚೆಂದ ಬಟ್ಟೆ ಹಾಕಿಕೊಳ್ಳಲು ಕನಸು ಕಾಣುವ ಹುಡುಗಿಯರನ್ನು ಇಂದು ನೀವು ಮಾಡೆಲ್ ಮಾಡಲು ಹೊರಟಿದ್ದೀರಿ. ತುಂಬಾ ಒಳ್ಳೇ ಕೆಲಸ. ಅವರನ್ನು ಪರಿಚಯಿಸುತ್ತಿರುವ ನಿಮಗೆ ಅಭಿನಂದನೆ ಲೋಗೋ ಹಿಡಿದುಕೊಂಡ ಕೈಗಳು ಹಾರೈಸಿದವುಕಾರೊಂದು ಬಂದು ಮಾಲಿಕಾಳನ್ನು ಆ ಹುಡುಗಿಯರಿದ್ದ ಗುಡಿಸಲಿನ ಕಡೆ ಕರೆದೊಯ್ಯಿತು. ಒಂದೆರಡು ಓಬಿ ವ್ಯಾನುಗಳು ಆ ಕಾರನ್ನು ಹಿಂಬಾಲಿಸಿದವು. ಆ ಹುಡುಗಿಯರನ್ನು, ಆ ಪರಿಸರವನ್ನು, ಪೋಷಕರನ್ನು ಹತ್ತಾರು ಕೋನಗಳಿಂದ ಸೆರೆಹಿಡಿಯಲಾಯಿತು. ಸಂಜೆ ವಿಶೇಷ ಕಾರ್ಯಕ್ರಮದಲ್ಲಿ, ಟಿವಿಗೆಂದೇ ಹುಟ್ಟಿಕೊಂಡ ಸಮಾಜಶಾಸ್ತ್ರಜ್ಞರುಮಹಿಳಾ ಚಿಂತಕರುಲಾಯರುಗಳುಮನಶಾಸ್ತ್ರಜ್ಞರುಫ್ಯಾಷನ್ ಲೋಕದ ದಿಗ್ಗಜರುಜ್ಯೋತಿಷಿಗಳು ಸ್ಟುಡಿಯೋನಲ್ಲೇ ಕುಳಿತು  ಹುಡುಗಿಯರ ಭವಿಷ್ಯವನ್ನು ಎಳೆಎಳೆಯಾಗಿ ಊಹಿಸಿ ರಾಡಿಮಾಡಿಡತೊಡಗಿದರುಮರುದಿನವೇ ಯಾವುದೋ ಕಂಪೆನಿಯ ರಾಯಭಾರಿಯಾಗಿ  ಹುಡುಗಿಯರು ಬಿಳೀ ಹಾಳೆಯ ಮೇಲೆ ಹೆಬ್ಬಟ್ಟು ಒತ್ತಿದರು! ಮಾಲಿಕಾ ರಾತ್ರೋರಾತ್ರಿ ಸಮಾಜಸೇವಕಿ ಪಟ್ಟಕ್ಕೇರಿಬಿಟ್ಟಳು… ಅಂಗಳದಲ್ಲಿ ನಿಂತಿದ್ದ ಅವಳ ತಲೆಮೇಲೆ ಒಣಗಿದ ಸಂಪಿಗೆ ಎಲೆಯೊಂದು ಬಿದ್ದು, ಹೌಹಾರಿ ವಾಸ್ತವಕ್ಕೆ ಬಂದಳು ಮಾಲಿಕಾ. ಅವಳ ಕೈಲಿದ್ದ ಪೊರಕೆ, ಲೋಗೋನಂತೆ ಅವಳ ಬಾಯಿಯ ಹತ್ತಿರ ಬಂದು ನಿಂತಿತ್ತು.  ಮಂಚದ ಮೇಲಿರುವ ತನ್ನ ಕಪ್ಪು ಸೀರೆಯ ಮೇಲೆ ಹುಳುಹಿಡಿದು ಕೂತ ಹಲ್ಲಿಯ ನೆನಪಾಗಿ ‘ಲೋಗೋಹಿಡಿದುಕೊಂಡವಳೇ ಕೋಣೆಗೆ ಬಂದರೆ ಹಲ್ಲಿ ಮಾಯ!

ಮಧ್ಯಾಹ್ನದ ಊಟಕ್ಕೆ ಬಂದ ಸಾರಂಗ್ ಪುಲಾವ್ ಬಡಿಸಿಕೊಂಡಭರಭರನೇ ಸವತೆಕಾಯಿ ತುರಿದು ಮೊಸರಿಗೆ ಉಪ್ಪು ಹಾಕಿ ಕಲಿಸಿಗಿರ್ಧ ಮೆಣಸಿನಕಾಯಿ ಸಣ್ಣಗೆ ಹೆಚ್ಚಿ ಚೂರು ಕೊತ್ತಂಬರಿ ಸೊಪ್ಪು ಉದುರಿಸಿ ಗರಗರನೆ ತಿರುಗಿಸಿ ಸಣ್ಣ ಬಟ್ಟಲಿಗೆ ಸುರಿದು ಚಮಚವಿಟ್ಟುಕೊಟ್ಟಳುಅವ ಮೊದಲ ತುತ್ತು ಬಾಯಿಗಿಡುತ್ತಿದ್ದಂತೆ ಇತ್ತ ಜಾಕೆಟ್ ಹಾಕಿಕೊಂಡುತಲೆಗೊಂದು ಕ್ಲಿಪ್ಪು ಸಿಕ್ಕಿಸಿಕೊಂಡು ಕಾರಿನ ಕೀ ತೆಗೆದುಕೊಂಡುಮೊಬೈಲ್ ಜೇಬಿಗಿಳಿಸಿಕೊಂಡಳು. ಟಿವಿ ಪರದೆ ಮೇಲೆ ಹುಲಿಯೊಂದು ಹರಿಣದ ಕಾಲಿಗೆ ಬಾಯಿಹಾಕಿ ಎಳೆದೇಬಿಟ್ಟಿತುವೋವ್ ಎಂದು ತೊಡೆತಟ್ಟಿಕೊಂಡ ಸಾರಂಗ್ ಟಿವಿ ವಾಲ್ಯೂಮ್ ಮತ್ತಷ್ಟು ಜೋರು ಮಾಡಿದ.

ಕಾರು ಕೊಳಗೇರಿಯನ್ನು ವೇಗದಲ್ಲೇ ತಲುಪಿತುಗುಡಿಸಲಿನ ಮುಂದೆ  ನಾಲ್ಕೂ ಹುಡುಗಿಯರುಊದಿನಕಡ್ಡಿ ತಿಕ್ಕುತ್ತ ಕುಳಿತಿದ್ದರುಅಕ್ಕಪಕ್ಕದ ಸಣ್ಣ ಹುಡುಗರು  ಕಡ್ಡಿಗಳನ್ನು ಬಿಸಿಲಿಗೆ ಹರವುವುದರಲ್ಲಿ ಸಹಾಯ ಮಾಡುತ್ತಿದ್ದರು ಹುಡುಗಿಯರ ಅಮ್ಮ ದುರಗಮ್ಮಒಣಗಿದ್ದ ಊದಿನಕಡ್ಡಿಗಳನ್ನು ಅಷ್ಟಷ್ಟೇ ಗಂಟುಕಟ್ಟಿಡುತ್ತಿದ್ದಳುಸಾಲಾಗಿ ಜೋಡಿಸಿಟ್ಟ ಊದಿನಕಡ್ಡಿಯ ಕೊಳವೆಗಳೊಳಗೆ ಸಣ್ಣಸಣ್ಣ ಕೋಳಿಮರಿಗಳು ತೂರಲು ನೋಡುತ್ತಿದ್ದವುದೊಡ್ಡ ಕೋಳಿಗಳೆರಡುಸಂದಿಸಂದಿಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಕತ್ತು ಕೊಂಕಿಸುತ್ತಕಾಳುಗಳಿಲ್ಲದಿದ್ದರೂ ಏನೋ ಹೆಕ್ಕಿ ತಿಂದಂತೆ ಬಾಯಿಯಾಡಿಸುತ್ತಿದ್ದವುಮಾಲಿಕಾಳನ್ನು ಗಮನಿಸಿದ  ಹೆಣ್ಣುಮಕ್ಕಳು  ಕೈಜಾಡಿಸಿಕೊಂಡುಹರಿದ ಲಂಗಕ್ಕೆ ಅದೇ ಕೈ ಒರೆಸಿಕೊಂಡುಸಂಕೋಚದಿಂದ ಹತ್ತಿರ ಬಂದರುಕಳೆದವಾರ ತಮ್ಮನ್ನು ಹುಡುಕಿಕೊಂಡು ಬಂದ ಇವರೇ ಅವರು ಎಂಬುದನ್ನು ಖಾತ್ರಿಪಡಿಸಿಕೊಂಡು ಖುಷಿಗೊಂಡರುಆದರೆ ಮಾಲಿಕಾಗೆ ಅವರ ಮುಖ ನೋಡಿ ಒಳಗೊಳಗೇ ಹಿಂಡಿದಂತಾಯಿತುಜೇಬಿನಿಂದ ಮೊಬೈಲ್ ತೆಗೆದವಳೇ ಸ್ಪಾ ಗೆ ಕಾಲ್ ಮಾಡಿ ಸಂಜೆಯ ಅಪಾಯಿಂಟ್ಮೆಂಟ್ ಕ್ಯಾನ್ಸಲ್ ಮಾಡಿಸಿದಳುಕೊಳಗೇರಿಯ  ಹುಡುಗಿಯರಿಗೆ ಮತ್ತು ಅವರಮ್ಮನಿಗೆ ಇದೆಲ್ಲ ಅರ್ಥವಾಗದೆ ಬಿಟ್ಟಬಾಯಲ್ಲೇ ನಿಂತರುಚೆನ್ನಾಗಿದ್ದೀರಾ ಎಲ್ಲಾಹಾಗೇ ಈಕಡೆ ಬಂದಿದ್ದೆನೋಡಿಕೊಂಡು ಹೋಗಲೆಂದು ಬಂದೆ ಎಂದು ಹೇಳಿ ಕಾರನ್ನು ಮನೆದಾರಿಗೆ ತಿರುಗಿಸಿದಳುಅಮ್ಮ-ಮಕ್ಕಳುಓಣಿಮಕ್ಕಳುಕೋಳಿ-ಮಕ್ಕಳು ಸ್ವಲ್ಪ ಹೊತ್ತು ಗೊಂದಲಕ್ಕೆ ಬಿದ್ದು ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ಮುಳುಗಿದವು.

ಮನೆಗೆ ಬಂದ ಮಾಲಿಕಾಸರಸ್ವತಿಗೆ ಕಾಲ್ ಮಾಡಿ, “ಸರೂ ಪ್ರಾಜೆಕ್ಟ್ ನಿಲ್ಲಿಸುತ್ತಿದ್ದೇನೆಯಾಕೆ ಏನು ಎಂದೆಲ್ಲ ಕೇಳಬೇಡನಂತರ ಮಾತನಾಡುವೆ.’ ಎಂದು ಹೇಳಿ ಕಾಲ್ ಕಟ್ ಮಾಡುತ್ತಿದ್ದಂತೆ ಮೂಲೆಯಲ್ಲಿ ಕಟ್ಟಿದ ಜೇಡರ ಬಲೆ ತಾನೇ ತಾನಾಗಿ ಕಳಚಿಬಿದ್ದಿತುಹೀಗೇ ಬಿಟ್ಟರೆ ಇದು ತನ್ನ ಕಾಲಿಗೇ ತೊಡಕು ಹಾಕಿಕೊಳ್ಳುವುದು ಎಂದುಕೊಂಡ ಮಾಲಿಕಾ  ಪೊರಕೆ ತೆಗೆದುಕೊಂಡು ಶುಚಿಗೊಳಿಸತೊಡಗಿದಳುಹಾಗ್ಹಾಗೇ ಇಡೀ ಮನೆಯ ಮೂಲೆಗಳೆಲ್ಲ ಅವಳಿಗರಿವಿಲ್ಲದೇ ಸ್ವಚ್ಛಗೊಂಡವುಚಪ್ಪಲಿ ಸ್ಟ್ಯಾಂಡಿನೊಳಗಿನನಾಲ್ಕು ಜೊತೆ ಬೇಡವಾದ ಚಪ್ಪಲಿಗಳು ಹೊರಬಂದು ಪ್ಲಾಸ್ಟೀಕು ಥೈಲಿ  ಸೇರಿದವು ಚಳಿಗಾಲದಲ್ಲೂ ಮಾಲಿಕಾ ಮತ್ತೊಮ್ಮೆ ಸ್ನಾನ ಮಾಡಿದಳುಗೇಟ್ ಶಬ್ದದಿಂದ ಅದು ಸಾರಂಗನೇ ಎಂದು ಗೊತ್ತಾದಾಗ ರಾತ್ರಿ ಹತ್ತೂವರೆಯಾಗಿತ್ತುಮಧ್ಯಾಹ್ನದ ಪುಲಾವನ್ನೇ ಬಿಸಿ ಮಾಡಿ ತಟ್ಟೆಗೆ ಬಡಿಸಿಟ್ಟಳುಹಾಗೇ ಅವನ ಬಳಿ ಕುಳಿತುಸ್ವಲ್ಪ ಮಾತನಾಡುವುದಿತ್ತು ಎಂದಳುಅವ ಚಾನೆಲ್ ಬದಲಾಯಿಸುವಾಗ ಇದ್ದಕ್ಕಿದ್ದಂತೆ ಫೈಟಿಂಗ್ ಸೀನ್ ಬಂದುಬ್ಯಾಗ್ರೌಂಡ್ ಮ್ಯೂಸಿಕ್ ಕಿವಿಗಪ್ಪಳಿಸಿತುಅವಳು ಏನೋ ಹೇಳಹೊರಟವಳು ಸುಮ್ಮನೇ ಎದ್ದು ಕೋಣೆಗೆ ಬಂದು ಮಂಚದ ಮೇಲೆ ಒರಗಿದಳುಮೇಜು ಕುಟ್ಟಿಕುಟ್ಟಿ ಮಾತನಾಡುತ್ತಿದ್ದ  ದಢೂತಿ ಹೆಣ್ಣುಮಗಳ ಮಾತುಗಳು ಚೂರಿಯಂತೆ ಇರಿಯತೊಡಗಿದವುಕಿವಿಯಲ್ಲೆಲ್ಲ ಕುಟ್ಟಿದ ಶಬ್ದ.

ಜಸ್ಟ್ ಬ್ರೀದ್ ನಚಿಕೇತ್ ಮುಖರ್ಜಿಗೆ ಮೆಸೇಜ್ ಟೈಪಿಸತೊಡಗಿದಳು, “ದಯವಿಟ್ಟು ಕ್ಷಮಿಸಿ ಹೆಣ್ಣುಮಕ್ಕಳ ಫೋಟೋ ಶೂಟ್ ಕ್ಯಾನ್ಸಲ್ ಮಾಡಿಬಿಡಿನೀವು ಕೊಟ್ಟ ಅಡ್ವಾನ್ಸ್ ಹಣವನ್ನು ನಾಳೆ ನಿಮ್ಮ ಅಕೌಂಟ್ ಗೆ ಮರಳಿಸುತ್ತೇನೆ.’’ ಮೆಸೇಜ್ ನೋಡಿದ ನಚಿಕೇತ್ ತಕ್ಷಣವೇ ಕಾಲ್ ಮಾಡಿದನಾಲ್ಕು ಬಾರಿಯೂ ಕಾಲ್ ರಿಸೀವ್ ಮಾಡದ ಮಾಲಿಕಾ ಕೊನೆಗೆ ಸ್ವಿಚ್ ಆಫ್ ಮಾಡಿಬಿಟ್ಟಳುಪಕ್ಕದಲ್ಲಿ ಅದ್ಯಾವಾಗಲೋ ಸಾರಂಗ್ ಬಂದು ಮಲಗಿ ಗೊರಕೆ ಹೊಡೆಯುತ್ತಿದ್ದಮೊಬೈಲ್ ಸ್ವಿಚ್ ಆನ್ ಮಾಡಿದವಳೇಮೆಸೇಜ್ ಟೈಪಿಸತೊಡಗಿದಳು; “ಸಾರಂಗ್ಇನ್ನು ಮುಂದೆ ನಾನು ನನ್ನ  ಡಿಸೈನಿಂಗ್ ವೃತ್ತಿ/ಪ್ರವೃತ್ತಿಯಿಂದ ನಿವೃತ್ತಳಾಗುತ್ತಿದ್ದೇನೆಇಷ್ಟುದಿನ ನನ್ನಿಂದ ನಿಮಗೆ ಮತ್ತು ಬಿಲಾವಲಿಗೆ ತೊಂದರೆಯಾಗಿರಬಹುದುಕ್ಷಮಿಸಿ…’ತಕ್ಷಣವೇ  ನಿದ್ದೆ ಹೋದಳುಸಾರಂಗ್ ಬೆಳಗ್ಗೆದ್ದಾಗ ಮಗ್ಗುಲಲ್ಲಿ ಮಾಲಿಕಾ ಇಲ್ಲದ್ದನ್ನು ನೋಡಿದಬೇಗ ಎದ್ದುಬಿಟ್ಟಿದ್ದಾಳೆ ಈವತ್ತು ಎಂದುಕೊಂಡು ಮೊಬೈಲ್ನಲ್ಲಿ ಮೆಸೇಜ್ ನೋಡಿದಸಂಭ್ರಮದಿಂದ ಕುಣಿಯುವುದೊಂದು ಬಾಕಿ ಇತ್ತು ಹಾಗೆಯೇ ಮಾಲಿಕಾಳನ್ನು ಒಮ್ಮೆ ಗಟ್ಟಿಯಾಗಿ ಅಪ್ಪಿಕೊಳ್ಳಬೇಕೆಂದು ಹುಡುಕಾಡತೊಡಗಿದಆದರೆ, ಯಾವ ಕೋಣೆಯಲ್ಲೂ ಅವಳಿರಲಿಲ್ಲಎಲ್ಲಿ ಹೋದಳೆಂದು ಹುಡುಕುತ್ತ ಹಾಲಿಗೆ ಬಂದವನಿಗೆರಿಮೋಟಿನ ಕೆಳಗೆ ಒಂದು ಪತ್ರ ಕಂಡಿತು

ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿಆದರೆಪ್ರತೀ ತಿಂಗಳ ಮೊದಲ ಭಾನುವಾರ  ತಪ್ಪದೇ ಬಿಲಾವಲಿಯ ಶಾಲೆಯಲ್ಲಿ ಹಾಜರಿರುತ್ತೇನೆ.’’

ಕೇಬಲ್ ನೆಟ್ವರ್ಕ್ ಕಳೆದುಕೊಂಡ ಟಿವಿ ಪರದೆಯೊಳಗೆ ಕಪ್ಪುಬಿಳಿ ಸಾಸಿವೆಗಳೆಲ್ಲ ಕೊತಕೊತನೆ ಕುಣಿಯುತ್ತ ಕಿವಿಗಡಚಿಕ್ಕುತ್ತಿದ್ದವು.

***
ಹತ್ತು ವರ್ಷಗಳ ನಂತರ..

‘ಮೇಡಮ್
'ಜಸ್ಟ್ ಫಾರ್ ನ್ಯೂಸ್'  ಎಂಬ ಚಾನೆಲ್  ನಾವುನಿಮ್ಮನ್ನು ಸಂದರ್ಶಿಸಲು ಬರುತ್ತಿದ್ದೇವೆಎಂಬ ಮೆಸೇಜ್ ಮಾಲಿಕಾಳ ಮೊಬೈಲನ್ನು ತಲುಪಿತ್ತುಓಕೆ ಎಂದು ರಿಪ್ಲೈ ಮಾಡಿದ ಒಂದು ಗಂಟೆಯೊಳಗೆಲ್ಲ ಒಂದು ಹುಡುಗಿ ಲೋಗೊದೊಂದಿಗೆ ಮಾಲಿಕಾಳ ಕಂಪೆನಿಯನ್ನು ತಲುಪಿದಳು.  ಕ್ಯಾಮೆರಾಮೆನ್ ಅವಳನ್ನು ಹಿಂಬಾಲಿಸಿದಮಾಲಿಕಾಳ ಆಫೀಸಿನ ಶೋಕೇಸಿನಲ್ಲಿದ್ದ ಪರ್ಫ್ಯೂಮ್ಊದಿನಕಡ್ಡಿರೂಮ್ ಫ್ರೆಶ್ನರ್ ಮುಂತಾದ ಪ್ರಾಡಕ್ಟ್‍ಗಳನ್ನು ವಿವಿಧ ಕೋನಗಳಿಂದ ಶೂಟ್ ಮಾಡಿಕೊಂಡಮಾಲಿಕಾಳ ಪಕ್ಕದಲ್ಲಿ ಇಪ್ಪತ್ತೆರಡರಿಂದ ಮೂವತ್ತರ ಒಳಗಿನ ನಾಲ್ಕು ತರುಣಿಯರು ನಿಂತಿದ್ದರುಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಕಂಪೆನಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ನಿಮಗೆ ಅಭಿನಂದನೆ ಎಂದು ಲೋಗೋಹುಡುಗಿ ಅವರಿಗೆ ಹೂಗುಚ್ಛ ಕೊಟ್ಟಳುಮಾಲಿಕಾಳ ಮತ್ತು ಕಂಪೆನಿಯ ಹಳೆಯ ಫೋಟೋಗಳನ್ನೆಲ್ಲ ಫೈಲಿನಿಂದ ಹುಡುಕಿಸಿ ಪಡೆದುಕೊಂಡಳುಒಂದು ಕೋಣೆಯಲ್ಲಿ ಶುರುವಾದ ಉದ್ಯೋಗ, ಗುಡಿಸಿಲಿನ ಮುಂದೆ ನಿಂತ ನಾಲ್ಕು ಹೆಣ್ಣುಮಕ್ಕಳು… ಈ ಎರಡು ಫೋಟೋಗಳು ರಿಪೋರ್ಟರ್‍ ನ ಗಮನ ಸೆಳೆದವು. 

ಇವರು ಎಂದು…  ನಾಲ್ಕೂ ಹೆಣ್ಣುಮಕ್ಕಳ ಮುಖವನ್ನೊಮ್ಮೆ ನೋಡಿಅವರೇ ಇವರು ಎಂದು ಗುರುತಿಸಿ ಖುಷಿಪಟ್ಟಳುತನ್ನ ಸ್ಟೋರಿಗೆ ಈಗ ಟ್ವಿಸ್ಟ್‍ ಸಿಕ್ಕಂತಾಯಿತೆಂದು ಒಳಗೊಳಗೇ ಖುಷಿಪಟ್ಟು, ಗಂಭೀರವಾಗಿ ಆ ಹುಡುಗಿಯರ ಪೂರ್ವಾಪರವನ್ನೆಲ್ಲ ಸಂದರ್ಶಿಸಿದಳುಆದರೆ ಮಾಲಿಕಾ ತನ್ನ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಡದೆ ಮುಗುಳ್ನಗೆಯಲ್ಲೇ ಅವರನ್ನು ಬೀಳ್ಕೊಟ್ಟಳು.

ಸಂಜೆಯ ವಿಶೇಷ ಕಾರ್ಯಕ್ರಮವಾಗಿ ಅದು ಪ್ರಸಾರಗೊಂಡಾಗ ಬುಧವಾರದ ದಿನ ಟಿಆರ್ಪಿಯ ಟಾಪ್ ಲಿಸ್ಟ್ನಲ್ಲಿ ‘ಜಸ್ಟ್ ಫಾರ್ ನ್ಯೂಸ್ಮೇಲುಗೈ ಸಾಧಿಸಿತ್ತುಹತ್ತಾರು ಪ್ರತಿಷ್ಠಿತ ಕಂಪೆನಿಗಳು ತಮ್ಮ ಕಂಪೆನಿಗೆ ರಾಯಭಾರಿಗಳಾಗುವಂತೆ ಕೋರಿಕೇಳಿದಷ್ಟು ಹಣ ಕೊಡುವುವೆಂದು ಮುಂದೆ ಬಂದಾಗ ನಾಲ್ವರು ಹುಡುಗಿಯರು ನಿರಾಕರಿಸಿದರು. ತಕ್ಷಣವೇ ತಮ್ಮ ಕೈಬರಹದಲ್ಲಿ ಪತ್ರಗಳನ್ನು ಬರೆದು ಫೇಸ್‍ಬುಕ್‍ನಲ್ಲಿ ಪ್ರಕಟಿಸಿದರು;‘ನಿಮ್ಮ ಊರಿನ ಯಾವುದೇ ಕೊಳಗೇರಿಗಳ ಮಕ್ಕಳನ್ನು ನಾವು ಸಾಕುತ್ತೇವೆಅವರವರ ಸಾಮರ್ಥ್ಯ ಮತ್ತು ಕೌಶಲಗಳಿಗೆ ಅನುಗುಣವಾಗಿ ಅವರ ಜೀವನ ರೂಪಿಸಿಕೊಡುವ ಜವಾಬ್ದಾರಿ ನಮ್ಮದಾಗಿರುತ್ತದೆನಮ್ಮ     ಸಂಪರ್ಕ ವಿಳಾಸ…'

***
ತನ್ನ ಆರು ತಿಂಗಳ ಮಗುವನ್ನು ಆಗಷ್ಟೇ ಡೇಕೇರ್ ಗೆ ಬಿಟ್ಟುಬಂದ ಬಿಲಾವಲಿ ಆಫೀಸಿಗೆ ಬಂದವಳೇ ಒಂದು ರೌಂಡ್ ಮೇಲ್ ಚೆಕ್ ಮಾಡಿ ಕಾಫಿ ಹೀರುತ್ತ ಕುಳಿತಿದ್ದಾಳೆ. ಅಂದಹಾಗೆ ಅವಳಿರುವುದು ಲಂಡನ್ನಿನಲ್ಲಿ. ಎಂಟು ವರ್ಷಗಳ ಹಿಂದೆ ಓದಲೆಂದು ಬಂದವಳು, ಗುಜರಾತಿ ಹುಡುಗನೊಬ್ಬನಿಗೆ ಮನಸೋತಿದ್ದಳು. ಮುಂದೊಂದು ದಿನ ಸ್ಕೈಪ್‍ನಲ್ಲಿಯೇ ತನ್ನವನನ್ನೂ ತಾವಿರುವ ಮನೆಯನ್ನೂ ಅಮ್ಮ ಮಾಲಿಕಾಳಿಗೆ ತೋರಿಸಿ, ತಾವಿಬ್ಬರೂ ಇನ್ನುಮುಂದೆ ಒಟ್ಟಿಗೇ ಇರುವುದಾಗಿ ತಿಳಿಸಿದ್ದಳು. ಹಾಗೆ ಹೇಳಿದ ಒಂದು ವರ್ಷದೊಳಗೆ ಇಷ್ಟಪಟ್ಟು ಮಗುವೊಂದನ್ನೂ ಹೆತ್ತಿದ್ದಳು. ಸದ್ಯ ಯಾವ ಜಂಜಾಟಗಳು, ರೀತಿ ರಿವಾಜಿನ ವಜ್ಜೆ, ನೆಂಟರ ಕಿರಿಕಿರಿಗಳು ಇಲ್ಲದೆ ಅವಳ ಬದುಕನ್ನು ಅವಳೇ ಸುಗಮವಾಗಿ ಕಟ್ಟಿಕೊಂಡಳು ಎಂದು ಒಳಗೊಳಗೇ ಸಮಾಧಾನ ಪಟ್ಟುಕೊಂಡಿದ್ದಳು ಮಾಲಿಕಾ. ತನ್ನ ಕಂಪೆನಿಯ ಕೆಲಸಗಳ ಮಧ್ಯೆ, ಲಂಡನ್ನಿಗೆ ಹೋಗಲು ಪುರಸೊತ್ತಾಗದೆ ಒಳಗೊಳಗೆ ಕೊರಗುತ್ತಿದ್ದ ಆಕೆಗೆ ಸ್ಕೈಪ್‍ ವಿಡಿಯೊ ತುಸು ಉಸಿರಾಡುವಂತೆ ಮಾಡಿತ್ತು. ದಿನವೂ ಮೊಮ್ಮಗುವಿನೊಂದಿಗೆ ಹತ್ತು ನಿಮಿಷವಾದೂ ಆಕೆ ಕಾಲ ಕಳೆಯುತ್ತಿದ್ದಳು.

ಆಫೀಸಿನ ಎರಡನೇ ಹಂತದ ಕೆಲಸವನ್ನು ಕೈಗೆತ್ತಿಕೊಳ್ಳುವ ಮುನ್ನ ಬಿಲಾವಲಿ ಫೇಸ್‍ಬುಕ್ ತೆರೆದಳು. ಅಮ್ಮನ ಹೆಸರಿನಲ್ಲಿ ಟ್ಯಾಗ್ ಮಾಡಿದ್ದ ಆ ನಾಲ್ಕು ಹುಡುಗಿಯರ ಪೋಸ್ಟ್‍ ಗಮನ ಸೆಳೆಯಿತು. ಅಮ್ಮ ಅಪ್ಪನನ್ನು ಬಿಟ್ಟುಬಂದು ಒಬ್ಬಂಟಿಯಾಗಿ ತನ್ನ ಬದುಕನ್ನು ಕಟ್ಟಿಕೊಂಡಿದ್ದೂ, ತಾನು ಓದಲು ಲಂಡನ್ನಿಗೆ ಹೋಗಬೇಕೆಂದು ಆಸೆಪಟ್ಟಾಗ ತನ್ನ ಮಾಂಗಲ್ಯ, ನಾಲ್ಕು ಬಳೆ, ಎರಡೆಳೆ ಅವಲಕ್ಕಿ ಸರ ಮಾರಿದ್ದು. ಇದು ಸಂಬಂಧಿಕರ ಮೂಲಕ ಅಪ್ಪನ ಕಿವಿಗೆ ಬಿದ್ದು, ‘ತಾನಿನ್ನೂ ಬದುಕಿರುವಾಗ ಎಷ್ಟು ಸೊಕ್ಕು ಆಕೆಗೆ?’ ಎಂದು ಅವಳನ್ನು ಬೀದಿಗೆ ಎಳೆದುತಂದು ಹೊಡೆದಿದ್ದು… ಎಲ್ಲವೂ ಕಣ್ಮುಂದೆ ಬಂದು ಕಣ್ಣು ತುಂಬಿಕೊಂಡಿತು. ಅಮ್ಮ ಪೊಲೀಸ್ ಕಂಪ್ಲೆಂಟ್ ಕೊಟ್ಟು, ಡಿವೋರ್ಸ್ ಗೆ ಅಪ್ಲೈ ಮಾಡಿದ್ದಳು.  ಯಾವಾಗ ಅಪ್ಪ ಅಮ್ಮನಿಗೆ ಹೊಡೆದು ಅವಮಾನಿಸಿದನೋ ಆಗಲೇ ತಾನೂ ಅವನನ್ನು ಮನಸ್ಸಿನಿಂದ ಕಿತ್ತು ಹಾಕಿಬಿಟ್ಟಿದ್ದಲ್ಲವೆ? ಈ ಕ್ಷಣದವರೆಗೂ ಅವನನ್ನು ನಾನು ಸಂಪರ್ಕಿಸಲು ಹೋಗಲಿಲ್ಲ ಮತ್ತು ಈಗಲೂ ಬೇಡ! ಮನಸ್ಸನ್ನು ಮತ್ತೆ ಗಟ್ಟಿ ಮಾಡಿಕೊಂಡಳು.

ಕಣ್ಣೊರೆಸಿಕೊಂಡವಳೇ ‘ಪ್ರೌಡ್ ಆಫ್ ಯೂ ಅಮ್ಮಾ’ ಎಂದು ಆ ಹುಡುಗಿಯರ ಪೋಸ್ಟ್‍ ಅನ್ನು ಶೇರ್ ಮಾಡಿ, ತನ್ನ ಅಮ್ಮ ಮತ್ತವಳು ಕಂಪೆನಿ ಕಟ್ಟಿದ ಬಗ್ಗೆ ಒಂದು ನೋಟ್ ಬರೆದಳು. ನೂರಾರು ಜನ ಶೇರ್ ಮಾಡಿಕೊಂಡ ಕೆಲ ಗಂಟೆಗಳಲ್ಲಿ ಅದು ಲಂಡನ್ನಿನ ‘ಪ್ರೂವ್ ಯುವರ್‍ಸೆಲ್ಫ್’ ಎಂಬ ಸಂಸ್ಥೆಯ ಕಣ್ಣಿಗೆ ಬಿದ್ದಿತು. ಬಿಲಾವಲಿಯ ಮೂಲಕ ಮಾಲಿಕಾಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಸಂಸ್ಥೆಯವರು, ಆ ವರ್ಷದ ಸಾಧಕಿ ಪ್ರಶಸ್ತಿಗೆ ಮಾಲಿಕಾಳನ್ನು ಆಯ್ಕೆ ಮಾಡಿದರು.

***
ಟೇಬಲ್ ಕುಟ್ಟಿ ಕುಟ್ಟಿ ಮಾತನಾಡಿದ ಆ ಮಹಿಳೆಯ ಮನೆ ಪತ್ತೆ ಹಚ್ಚಿ, ತನ್ನ ನಾಲ್ಕೂ ಹುಡುಗಿಯರನ್ನೂ ತನ್ನೊಂದಿಗೆ ಒಂದು ಭಾನುವಾರ ಕರೆದೊಯ್ದಿದ್ದಳು. ಮಾಲಿಕಾಳೇ ಹದಿನೈದು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಗೆ ತಂದು ಪರಿಚಯ ಮಾಡಿಕೊಂಡಳು. ಮಗಳು ಮಾಡೆಲಿಂಗ್ ಕಲಿಯುತ್ತೇನೆಂದು ವಾರಗಟ್ಟಲೆ ಮನೆಬಿಟ್ಟು ಹೋಗತೊಡಗಿದ್ದನ್ನೂ, ಒಂದು ದಿನ ರಾಜಸ್ತಾನದ ಹುಡುಗನೊಬ್ಬನೊಂದಿಗೆ ಮದುವೆ ಮಾಡಿಕೊಂಡು ಬಂದಿದ್ದನ್ನೂ ಮತ್ತು ಮದುವೆ ನಂತರ ರಾಜಸ್ತಾನದಲ್ಲೇ ಇದ್ದು, ಕೆಳಮಧ್ಯಮ ವರ್ಗದ ಕೂಡುಕುಟುಂಬದೊಂದಿಗೆ ಹೊತ್ತಿನ ತುತ್ತಿಗೆ ಪರದಾಡುತ್ತ ಬದುಕುತ್ತಿದ್ದಾಳೆಂದು ಕಣ್ಣೀರಾದಳು. ನನ್ನ ಕತೆ ಹೋಗಲಿ ನಿಮ್ಮದೇನು? ಈ ಹುಡುಗಿಯರು ಯಾರು ಎಂದೆಲ್ಲ ಕೇಳಿದಾಗ, ಮಾಲಿಕಾ ವಿವರವಾಗಿ ಹೇಳಿದಳು. ದಂಗಾದ ಆ ಮಹಿಳೆಗೆ ಮಾತು ಹೊರಡದೆ ಮಲಗಿದಲ್ಲಿಂದಲೇ ಅವರಿಗೆ ಕೈಮುಗಿದು ಕಣ್ಣುಮುಚ್ಚಿಕೊಂಡಳು. ಕಣ್ಣಂಚಿನಿಂದ ನೀರು ಹರಿಯುತ್ತಲೇ ಇತ್ತು. ಇದ್ದಕ್ಕಿದ್ದಂತೆ ಯಾರೋ ದಬದಬ ಬಾಗಿಲು ಬಡಿದಂತಾಯಿತು. ನೋಡಿದರೆ ವಯಸ್ಸಾದ ಕುರುಚಲು ಗಡ್ಡದ ಮನುಷ್ಯ, ತೂರಾಡಿಕೊಂಡು ಒಳಬಂದು ಕೋಣೆಹೊಕ್ಕು ಬಾಗಿಲು ಹಾಕಿಕೊಂಡ. ಮಗಳು ಮನೆಬಿಟ್ಟು ಹೋದಾಗಿನಿಂದ ತನ್ನ ಗಂಡ ಹೀಗಾದ ಎಂದು ಬಾಯಿಗೆ ಕೈ ಇಟ್ಟುಕೊಂಡು ಬಿಕ್ಕತೊಡಗಿದಳು ಆಕೆ. ನಾವಿನ್ನು ಹೊರಡುತ್ತೇವೆ, ಏನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದು ಕೈಮುಗಿದು ಹೊರಟಳು ಮಾಲಿನಿ, ನಾಲ್ಕೂ ಹುಡುಗಿಯರೂ ಅವಳನ್ನು ಹಿಂಬಾಲಿಸಿದರು.

ದಾರಿಯಲ್ಲಿ ಇವರ ಕಾರಿಗೆ ಹೆಣ್ಣುಮಗುವೊಂದು ಅಡ್ಡಬಂದಿತು. ಊದುಕಡ್ಡಿಯ ಹುಡಿಯನ್ನೆಲ್ಲ ಕೈಗೆ ಮೆತ್ತಿಕೊಂಡಿದ್ದ ಅದರಮ್ಮ ಗಕ್ಕನೆ ನಿಂತುಬಿಟ್ಟಳು. ಕಾರಿನ ಕಿಟಕಿಯಿಂದ ಆಪ್ತಧ್ವನಿಯೊಂದು ತೂರಿಬಂತು; ‘ಏನಮ್ಮಾ ನಮ್ಮ ಗಂಧಾಪುರ ಫ್ಯಾಕ್ಟರಿಗೆ ಬಂದುಬಿಡ್ತೀಯಾ?


-ಶ್ರೀದೇವಿ ಕಳಸದ

4 comments:

sunaath said...

ಜೀವನಶೈಲಿ ಆಧುನಿಕವಾದರೂ ಸಹ ಹೆಣ್ಣನ್ನು ಕಾಡುವ ಸಮಸ್ಯೆಗಳು ಪುರಾತನ ಕಾಲದವೇ ಆಗಿವೆ. ಇಂತಹದರಲ್ಲಿ ಒಬ್ಬ ಹೆಣ್ಣುಮಗಳು ತನ್ನ mental grooveನೊಳಗಿಂದ, ತನ್ನ ಕೌಟಂಬಿಕ grooveನೊಳಗಿಂದ, ತನ್ನ social grooveನೊಳಗಿಂದ ಮುಕ್ತಳಾದ ಹಾಗು ಇನ್ನಿತರ ಕೆಲವರನ್ನು ಸಹ ಮುಕ್ತಗೊಳಿಸಿದ ಕಥಾನಕ ಹೃದ್ಯಂಗಮವಾಗಿದೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥೆಯನ್ನು ಓದಿದ ಖುಶಿ ನನ್ನದಾಯಿತು.

ಆಲಾಪಿನಿ said...

ಧನ್ಯವಾದ ಅಂಕಲ್ :)

Anonymous said...

ಮಾಲಿಕಾ,ರಿಷಬ್,ಬಿಲಾವಲಿ... ಕನ್ನಡಕ್ಕೆ ತುಸು ಹೊಸದಾದ ಹೆಸರಿನ ಪಾತ್ರಗಳುಳ್ಳ ಸುಂದರ ಕಥೆ...
ಭಾರತೀಯ ಸ್ತ್ರೀ ಎಷ್ಟೇ ಎತ್ತರದ ಸ್ಥಾನಕ್ಕೇರಿದರೂ ‘ಮೇಲ್ ಇಗೋ’ ಎನ್ನುವುದು ಒಂದಲ್ಲ ಒಂದು ರೀತಿ ಅವಳನ್ನು ಹಣಿಸಲು ಸದಾ ಸಿದ್ಧವಾಗಿರುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ಕಥೆ ಒಳ್ಳೆದುಂಟು..

ಆಲಾಪಿನಿ said...

Thank u